ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಗ್ಯಾಂಗ್ ಜೊತೆ ಇರುವ ಫೋಟೋವನ್ನು ಇಲಿಯಾನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬರ್ತಡೇ ಗರ್ಲ್ ಕತ್ರಿನಾಗೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ. ಕತ್ರಿನಾ ದಂಪತಿ ಕುಟುಂಬದ ಜೊತೆ ಇಲಿಯಿನಾ ಬಿಗ್ ಸ್ಮೈಲ್ ಮಾಡಿದ್ದಾರೆ. 

ನಟಿ ಇಲಿಯಾನಾ ಡಿಕ್ರೂಸ್ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ಕಡಿಮೆ. ಆದರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ನಟಿ ಇಲಿಯಾನಾ ಬಳಿಕ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದರು. ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಮಿಂಗಲ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಇತ್ತೀಚಿಗೆ ರಿವೀಲ್ ಆಗಿರುವ ಫೋಟೋಗಳು. ಹೌದು ನಟಿ ಇಲಿಯಾನಾ ಇತ್ತೀಚಿಗಷ್ಟೆ ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕತ್ರಿನಾ ಕೈಫ್ ದಂಪತಿ ಜೊತೆ. ಬಾಲಿವುಡ್ ಬ್ಯೂಟಿ ಕತ್ರಿನಾ ಇತ್ತೀಚಿಗಷ್ಟೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕ್ಯಾಟ್ ಬರ್ತಡೇಯನ್ನು ಪತಿ ವಿಕ್ಕಿ ಕೌಶಲ್ ಮಾಲ್ಡೀವ್ಸ್ ನಲ್ಲಿ ಸೆಲೆಬ್ರೀಟ್ ಮಾಡಿದ್ದಾರೆ. ಕ್ಯಾಟ್ ಮತ್ತು ವಿಕ್ಕಿ ದಂಪತಿ ಜೊತೆ ಕುಟುಂಬದವರು ಜೊತೆಯಲ್ಲಿದ್ದರು. ವಿಶೇಷ ಎಂದರೆ ಇವರ ಮಧ್ಯೆ ಹೈಲೆಟ್ ಆಗಿದ್ದು ಇಲಿಯಾನಾ. ಕತ್ರಿನಾ ಕುಟುಂಬಕ್ಕೂ ಇಲಿಯಾನಾಗೂ ಎಲ್ಲಿಂದ ಸಂಬಂಧ ಅಂತೀರಾ. ಅದೇ ಇವಾಗ ವೈರಲ್ ಆಗಿರುವ ವಿಚಾರ. 

ಬಾಲಿವುಡ್ ಮೂಲಗಳ ಪ್ರಕಾರ ಇಲಿಯಾನಾ ಸದ್ಯ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿನ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಗ್ಯಾಂಗ್ ಜೊತೆ ಇರುವ ಫೋಟೋವನ್ನು ಇಲಿಯಾನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬರ್ತಡೇ ಗರ್ಲ್ ಕತ್ರಿನಾಗೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ. ಕತ್ರಿನಾ ದಂಪತಿ ಕುಟುಂಬದ ಜೊತೆ ಇಲಿಯಿನಾ ಬಿಗ್ ಸ್ಮೈಲ್ ಮಾಡಿದ್ದಾರೆ. 

Ileana D'Cruz ಅವರ ಹಾಟೆಸ್ಟ್ ಬಿಕಿನಿ ಮೂಮೆಂಟ್ಸ್‌ ಫೋಟೋಗಳು!

ಇಲಿಯಾನಾ ಕೊನೆಯದಾಗಿ ಬಿಗ್ ಬುಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯ್ಕತವಾಗಿತ್ತು. ಅಲ್ಲದೇ ಇಲಿಯಾನಾ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಅಂದಹಾಗೆ ಇಲಿಯಾನಾ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಮದುವೆ ಸಹ ಆಗಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರು ದೂರ ದೂರ ಆದರು. ಬ್ರೇಕಪ್ ಬಳಿಕ ಸಿಂಗಲ್ ಆಗಿದ್ದ ಇಲಿಯಾನಾ ಇದೀಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದರೆ ಈ ಬಗ್ಗೆ ಯಾರಕಡೆಯಿಂದನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇಲಿಯಾನಾ ದಿಢೀರ್ ಆಗಿ ಕತ್ರಿನಾ ಗ್ಯಾಂಗ್ ಸೇರಿರುವುದು ಈ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. 



Happy Birthday Katrina Kaif; ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಕ್ಯಾಟ್ ರೋಚಕ ಜರ್ನಿ

ನಟಿ ಕತ್ರಿನಾ ಕೈಫ್ ಅವರಿಗೆ ಈ ವರ್ಷದ ಹುಟ್ಟುಹಬ್ಬ ತುಂಬಾ ವಿಶೇಷ. ವಿಕ್ಕಿ ಕೌಶಲ್ ಜೊತೆ ಮದುವೆಯಾದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಾಲ್ಡೀವ್ಸ್ ನಲ್ಲಿ ಜನ್ಮದಿನ ಸಂಭ್ರಮಿಸುತ್ತಿರುವ ಸ್ಟಾರ್ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕತ್ರಿನಾ ಕೈಫ್ ಗೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಹ ವಿಶ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕತ್ರಿನಾ ಕೈಫ್ ಸದ್ಯ ಫೋನ್ ಭೂತ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸಿದ್ಧಾಂತ್ ಚತುರ್ವೇದಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಕ್ಟೋಬಪ್ 7ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಟೈಗರ್ 3 ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಸೌತ್ ಸ್ಟಾರ್ ವಿಜಯ.್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.