ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಒಳಗೊಂಡ ಫೋಟೊ ಫೋಟೋ ನೋಡಿ ಕಮೆಂಟ್ ಮಾಡಿದ ಐಪಿಎಸ್ ಅಧಿಕಾರಿ
ಐಪಿಎಸ್(IPS) ಅಧಿಕಾರಿ ಆರ್ ಕೆ ವಿಜ್ ಸೂರ್ಯವಂಶಿ ಸಿನಿಮಾದ ಬಿಟಿಎಸ್ ಫೋಟೋದಲ್ಲಿರುವ ದೋಷವನ್ನು ಗಮನಿಸಿದ ನಂತರ ಅಕ್ಷಯ್ ಕುಮಾರ್ ಸ್ಪಷ್ಟೀಕರಣವನ್ನು ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ರಣವೀರ್ ಸಿಂಗ್ ಕುಳಿತಿರುವಾಗ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರ ಪಕ್ಕದಲ್ಲಿ ನಿಂತಿದ್ದಾರೆ. ಮೂವರು ನಟರೂ ಪೊಲೀಸ್(Police) ಸಮವಸ್ತ್ರ ಧರಿಸಿರುವುದು ಕಂಡುಬರುತ್ತದೆ.
ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಸಲ ವಿಳಂಬವಾದ ನಂತರ ರೋಹಿತ್ ಶೆಟ್ಟಿಯವರ ಸಿನಿಮಾ ಅಂತಿಮವಾಗಿ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಶನಿವಾರ ಬಹಿರಂಗಪಡಿಸಿದರು. ಚಿತ್ರದ ಥಿಯೇಟರ್ ಬಿಡುಗಡೆ ಘೋಷಿಸುವಾಗ, ಅಕ್ಷಯ್ ಕುಮಾರ್ ತೆರೆಮರೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಹಿಂದಿಯಲ್ಲಿ, ಅಕ್ಷಯ್, ಇಮ್ರಾನ್ ಸಿನಿಮಾ
ನಿಜ ಜೀವನದ ಐಪಿಎಸ್ ಅಧಿಕಾರಿಯಾದ ಶ್ರೀ ವಿಜ್ ಅವರು ಫೋಟೋಗೆ ಕಮೆಂಟ್ ಮಾಡಿ ತಮ್ಮ ಹಿರಿಯರ ಅಧಿಕಾರಿ ಮುಂದೆ ಇನ್ಸ್‌ಪೆಕ್ಟರ್ ಎಂದಿಗೂ ಹಾಗೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಎಸ್‌ಪಿ ನಿಂತಿದ್ದಾಗ ಇನ್ಸ್‌ಪೆಕ್ಟರ್ ಕುಳಿತಿದ್ದಾರೆ, ಅದು ಹೇಗೆ ಸಾಧ್ಯ ? ಎಂದು ವಿಜ್ ಅವರು ಹಿಂದಿಯಲ್ಲಿ ಬರೆದಿದ್ದಾರೆ.
ಐಪಿಎಸ್ ಅಧಿಕಾರಿ ಆರ್ ಕೆ ವಿಜ್ ಸೂರ್ಯವಂಶಿಯ ಫೋಟೊದಲ್ಲಿದ್ದ ದೋಷವನ್ನು ಗಮನಿಸಿದ ನಂತರ ಅಕ್ಷಯ್ ಕುಮಾರ್ ಸ್ಪಷ್ಟೀಕರಣವನ್ನು ಟ್ವೀಟ್ ಮಾಡಿದ್ದಾರೆ. ಕ್ಯಾಮರಾ ಆನ್ ಮಾಡಿದಾಗ ನಟರು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ ಎಂದು ಅಕ್ಷಯ್ ಕುಮಾರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸರ್, ಇದು ತೆರೆಮರೆಯ ಫೋಟೋ ಎಂದಿದ್ದಾರೆ.
ನಿಜ ಜೀವನ ಮತ್ತು ರೀಲ್-ಲೈಫ್ ಪೊಲೀಸರ ನಡುವಿನ ಈ ಟ್ವಿಟರ್‌ನಲ್ಲಿ ಸಂಭಾಷಣೆ ವೈರಲ್ ಆಗಿದೆ. ಶ್ರೀ ವಿಜ್ ಅವರ ಟ್ವೀಟ್ 23,000 'ಲೈಕ್ಸ್' ಮತ್ತು ಬಹಳಷ್ಟು ಕಮೆಂಟ್‌ಗಳು ಬಂದಿವೆ. ಅಕ್ಷಯ್ ಕುಮಾರ್ ಅಭಿಮಾನಿಗಳು ಅವರ ಉತ್ತರವನ್ನು ಶ್ಲಾಘಿಸಿದ್ದಾರೆ.
ಸೂರ್ಯವಂಶಿ ಕಳೆದ ವರ್ಷ ಮಾರ್ಚ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಕೊರೋನಾ ಪರಿಸ್ಥಿತಿಯಿಂದಾಗಿ ವಿಳಂಬವಾಯಿತು. ಇದು ಡಿಜಿಟಲ್ ಸ್ಟ್ರೀಮಿಂಗ್ ಬದಲಿಗೆ ಥಿಯೇಟರ್ ಬಿಡುಗಡೆಗೆ ಆಯ್ಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಬಿಡುಗಡೆ ದಿನಾಂಕವನ್ನು ಎರಡು ಬಾರಿ ಬದಲಾವಣೆ ಮಾಡಲಾಯಿತು. ಕಳೆದ ವರ್ಷ ದೀಪಾವಳಿಗೆ ಮರು ನಿಗದಿಪಡಿಸಿದ ನಂತರ, ಚಿತ್ರದ ಬಿಡುಗಡೆ ದಿನಾಂಕವನ್ನು ಈ ವರ್ಷ ಏಪ್ರಿಲ್ 30 ಕ್ಕೆ ಮುಂದೂಡಲಾಯಿತು.
