ಮಲೇಷಿಯಾದಲ್ಲಿನ ದೇಗುಲದ ಅರ್ಚನಕ ಆಶೀರ್ವಾದ, ದೇವರ ಕೃಪೆ ಎಂದು ಕರೆದೊಯ್ಡು ಏನೆಲ್ಲಾ ಮಾಡಿದ್ದ ಅನ್ನೋದನ್ನು ನಟಿ ಬಹಿರಂಗಪಡಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.
ಸೆಪಾಂಗ್ (ಜು.10) ಭಾರತೀಯ ಮೂಲದ ನಟಿ ಲಿಶಲ್ಲಿನಿ ಕನರನ್ ಸ್ಫೋಟಕ ಮಾತುಗಳು ಇದೀಗ ಕೋಲಾಹಲ ಸೃಷ್ಟಿಸಿದೆ. ಮಲೇಷಿಯಾದಲ್ಲಿನ ಹಿಂದೂ ದೇಗುಲದ ಅರ್ಚಕ ನಡೆಸಿದ ಕರಾಳ ಕೃತ್ಯವನ್ನು ನಟಿ ಬಹಿರಂಗಪಡಿಸಿದ್ದಾರೆ.ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸುವುದನ್ನು ರೂಢಿಸಿಕೊಂಡಿರುವ ನಟಿ ಲಶಲ್ಲಿನಿ ಎಂದಿನಂತೆ ಮಲೇಷಿಯಾದ ಮರಿಯಮ್ಮನ್ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅರ್ಚನ ದೇವರ ಹೆಸರಿನಲ್ಲಿ, ದೇವರ ಆಶೀರ್ವಾದ, ಕೃಪೆ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡಿದ್ದಾರೆ. ಪ್ರತಿರೋಧಿಸಲು ಆಗದೇ ಕೊರಗಬೇಕಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಈ ಕುರಿತು ದೂರು ದಾಖಲಿಸಿದ್ದು, ಅರ್ಚಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನಟಿ ಲಶಲ್ಲಿನಿ ಕನರನ್ ತಾಯಿ ಭಾರತೀಯ ಮೂಲದವರು. ಲಶಲ್ಲಿನಿ ನಟಿಯಾಗಿ, ಟಿವಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಲಶಲ್ಲಿನಿ ಮಲೇಷಿಯಾಗೆ ಒಬ್ಬಂಟಿಯಾಗಿ ತೆರಳಿದ್ದರು. ಮಲೇಷಿಯಾದಲ್ಲಿ ನಡೆದ ಘಟನೆಯನ್ನು ನಟಿ ಬಿಚ್ಚಿಟ್ಟಿದ್ದಾರೆ. ಆಕೆಯ ತಾಯಿ ಭಾರತದಲ್ಲೇ ಇದ್ದರು. ದೇವರ ಭಜನೆ, ಪ್ರಾರ್ಥನೆಯಲ್ಲಿ ವಿಶೇಷ ಆಸಕ್ತಿ ವಹಿಸಿರುವ ಲಶಲ್ಲಿನಿ ನೆಪಾಂಗ್ ಬಳಿ ಇರುವ ಮರಿಯಮ್ಮನ್ ದೇವಸ್ಥಾನಕ್ಕೆ ತೆರಳಿದ್ದಾರೆ.
ವಿಶೇಷ ಪೂಜೆ ಕುರಿತು ಅರ್ಚಕರ ಕೇಳಿದ್ದ ನಟಿ
ಮರಿಯಮ್ಮನ್ ದೇವಸ್ಥಾನಕ್ಕೆ ತೆರಳಿದ ನಟಿ ಲಶಲ್ಲಿನಿ ಭಕ್ತಿಯಿಂದ ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತು ಪ್ರಾರ್ಥಿಸಿದ್ದಾರೆ. ಬಳಿಕ ಪ್ರಸಾದ ಸ್ವೀಕರಿಸಲು ತೆರಳಿದ್ದಾರೆ. ಈ ವೇಳೆ ತೀರ್ಥ ನೀಡಿದ ಅರ್ಚಕ, ಮರಿಯಮ್ಮನ್ ದೇವಸ್ಥಾನದ ದಾರವನ್ನು ನಟಿಗೆ ಕಟ್ಟಿದ್ದಾರೆ. ಇದೇ ವೇಳೆ ಈ ದೇವಸ್ಥಾನದ ವಿಶೇಷ ಪೂಜೆ ಸೇರಿದಂತೆ ಇತರ ಮಾಹಿತಿಯನ್ನು ಅರ್ಚಕರ ಬಳಿ ಕೇಳಿದ್ದಾಳೆ. ನಟಿ ಹೆಸರು, ಹುಟ್ಟಿದ ದಿನಾಂಕ, ನಕ್ಷತ್ರ ಸೇರಿದಂತೆ ಇತರ ಮಾಹಿತಿ ಕೇಳಿದ ಅರ್ಚಕ, ಕೆಲ ಸಮಸ್ಯೆಗಳಿಗೆ ಪರಿಹಾರ ಮಾಡಬೇಕು, ದೇವರ ಆಶೀರ್ವಾದ ಮಾತ್ರ ಸಾಕು ಎಂದು ವಿಶ್ವಾಸಾರ್ಹತೆ ಬೆಳೆಸಿಕೊಂಡಿದ್ದಾನೆ.
ಕೊಠಡಿಗೆ ಕರೆದೊಯ್ದ ಅರ್ಚಕ
ದೇವರ ಆಶೀರ್ವಾದ ಅತೀ ಅಗತ್ಯ. ದೇವರ ಕೃಪೆಗೆ ಪಾತ್ರರಾಗಲು ಮಂತ್ರ ಪಠಿಸಬೇಕು ಹಾಗೂ ತೀರ್ಥ ಪ್ರೋಕ್ಷಿಸಬೇಕು ಎಂದು ನಟಿಯನ್ನು ಪ್ರತ್ಯೇಕ ಕೊಠಡಿಗೆ ಅರ್ಚಕ ಕರೆದೊಯ್ದಿದ್ದಾನೆ. ಅದು ಅರ್ಚನಕ ಕೊಠಡಿ. ದೇವಸ್ಥಾನಕ್ಕೆ ತಾಗಿಕೊಂಡೇ ಇರುವ ಕೊಠಡಿ. ಇಲ್ಲಿ ವಿಶೇಷ ಪ್ರಾರ್ಥನೆ ಹಾಗೂ ತೀರ್ಥ ಪ್ರೋಕ್ಷಣೆ ಮಾಡುವುದಾಗಿ ಹೇಳಿದ್ದಾನೆ. ಅರ್ಚಕನ ಕೊಠಡಿಗೆ ಸಾಗುತ್ತಿದ್ದಂತೆ ಎಲ್ಲವೂ ಸರಿಯಿಲ್ಲ ಎಂದು ಅನಿಸಿತ್ತು. ಆದರೆ ಪ್ರತಿರೋಧ, ವಿರೋಧಿಸಲು ನನ್ನಿಂದ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಕೊಠಡಿಗೆ ಪ್ರವೇಶಿಸುತ್ತಿದ್ದಂತೆ ಅರ್ಚಕ ತೀರ್ಥ ಎಂದು ಪ್ರೋಕ್ಷಣೆ ಮಾಡಿದ್ದಾನೆ. ಮುಖಕ್ಕೆ ಈ ತೀರ್ಥ ಪ್ರೋಕ್ಷಿಸಿದ್ದಾನೆ. ಈ ತೀರ್ಥ ಸಾಮಾನ್ಯ ತೀರ್ಥದಂತೆ ಇರಲಿಲ್ಲ. ವಿಶೇಷ ಸುವಾಸನೆಗಳು ಇತ್ತು. ಕಣ್ಣು ಉರಿಯಲು ಅನುಭವಾಗಿತ್ತು. ಇದೇ ವೇಳೆ ಅರ್ಚಕ ಸಾಮಾನ್ಯರಿಗೆ ಈ ತೀರ್ಥ ಹಾಕುವುದಿಲ್ಲ ಎಂದು ಮಾತು ಆರಂಭಿಸಿದ್ದ. ಕಣ್ಣು ಮುಚ್ಚಿ ನಿಂತು ಭಕ್ತಿಯಿಂದ ಪ್ರಾರ್ಥಿಸಲು ಹೇಳಿದ್ದ. ಈ ರೀತಿ ಹೇಳಿದ ಮರುಕ್ಷಣದಲ್ಲೇ ಅರ್ಚನ ಕೈಗಳು ನನ್ನ ಬ್ಲೌಸ್ ಒಳಗಿತ್ತು. ಬ್ರಾ ಸೇರಿದಂತೆ ವಸ್ತ್ರಗಳ ಒಳಗೆ ಆತನ ಕೈಗಗಳು ಚಲಿಸಿತ್ತು. ಅರ್ಚಕ ವರ್ತನೆ ಎಲ್ಲೆ ಮೀರಿತ್ತು. ತಪ್ಪಾಗುತ್ತಿದೆ, ಆದರೆ ನನಗೆ ಪ್ರತಿರೋಧಿಸಲು ಸಾಧ್ಯವಾಗಲಿಲ್ಲ. ಆ ಕ್ಷಣ ನಾನು ಕಣ್ಣೀರಾದೆ. ಪ್ರತಿಭಟಿಸಲು ಸಾಧ್ಯವಾಗಲಿಲ್ಲ. ಮಾತನಾಡಲು ಸಾಧ್ಯವಾಗಲಿಲ್ಲ. ಅಕ್ಷರಶಃ ನಾನು ಮೂಕಳಾಗಿ ಕರಾಳ ಘಟನೆಯ ಸಂತ್ರಸ್ತೆಯಾದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಈ ಘಟನೆಯ ಮತ್ತಷ್ಟು ವಿವರಗಳಿಗೆ ನಾನು ಹೋಗುತ್ತಿಲ್ಲ. ಆದರೆ ಅರ್ಚಕನ ನನ್ನನ್ನು ಬಳಸಿಕೊಳ್ಳಲು ಯತ್ನಿಸಿದ್ದ. ಕಿರುಕುಳ ನೀಡಿದ್ದ. ಅಲ್ಲಿಂದ ಹೊರಬಂದ ನಾನು ಮಾಸಿಕವಾಗಿ ಕುಗ್ಗಿ ಹೋದೆ. ಭಾರತಕ್ಕೆ ಮರಳಿ ತಾಯಿ ಬಳಿ ಹೇಳಿಕೊಂಡೆ.ತಾಯಿ ಧೈರ್ಯ ತುಂಬಿ ದೂರು ದಾಖಲಿಸಿದೆ. ಮಲೇಷಿಯಾದಲ್ಲಿ ಪೊಲೀಸರು ದೇಗುಲಕ್ಕೆ ತೆರಳಿದಾಗ ಅರ್ಚಕ ನಾಪತ್ತೆಯಾಗಿದ್ದ. ಈ ಅರ್ಚನಕ ಮೇಲೆ ಈ ಹಿಂದೆ ಕೂಡ ಇದೇ ರೀತಿ ದೂರುಗಳು ದಾಖಲಾಗಿತ್ತು ಅನ್ನೋ ಮಾಹಿತಗಳು ಹೊರಬಿದ್ದಿದೆ.
