ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಮಂದಿ ತೊಂದರೆಯಲ್ಲಿದ್ದಾರೆ. ಒಂದೊತ್ತಿನ ಊಟವೂ ಸಿಗದೇ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಎನ್‌ಜಿಒಗಳು, ಸರ್ಕಾರ, ಜನಸಾಮಾನ್ಯರು, ಸೆಲಬ್ರಿಟಿಗಳು ಧಾವಿಸುತ್ತಿದ್ದಾರೆ. ಅಲ್ಲಲ್ಲಿ ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ಬಾಲಿವುಡ್ ನಟಿ ರಾಕುಲ್ ಪ್ರೀತ್ ಗುರುಗ್ರಾಮದಲ್ಲಿರುವ ಸುಮಾರು 200 ಕುಟುಂಬಗಳನ್ನು ದತ್ತು ತೆಗೆದುಕೊಂಡಿದ್ದು ಅವರಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. 

 

ಗುರುಗ್ರಾಮದ ಸ್ಲಂನಲ್ಲಿ ವಾಸಿಸುತ್ತಿರುವ ಸುಮಾರು 200 ಕುಟುಂಬಗಳಿಗೆ ಪ್ರತಿದಿನವೂ 2 ಹೊತ್ತಿನ ಊಟವನ್ನು ಕೊಡುತ್ತಿದ್ದೇನೆ. ಒಂದೆಡೆ ಅಡುಗೆಯನ್ನು ತಯಾರಿಸಿ ಅವರಿಗೆ ತಲುಪಿಸಲಾಗುತ್ತಿದೆ. ಲಾಕ್‌ಡೌನ್ ಮುಗಿಯುವವರೆಗೂ ನಾನು ಇದನ್ನು ಮುಮದುವರೆಸುತ್ತೇನೆ. ಸಮಾಜಕ್ಕೆ ನಮ್ಮಿಂದ ಏನಾದರೂ ಸಹಾಯ ಮಾಡಬೇಕು. ಇದು ನನಗೆ ಖುಷಿ ಕೊಡುತ್ತದೆ. ಅವರ ಮುಖದಲ್ಲಿ ಮಂದಹಾಸ ನೋಡಿದಾಗ ಇದು ದೇವರು ನನಗೆ ಕೊಟ್ಟಿರುವ ಸೌಭಾಗ್ಯ' ಎನಿಸುತ್ತದೆ ಎಂದಿದ್ದಾರೆ. 

ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಗಾಯಕ ವಿಜಯ್‌ ಪ್ರಕಾಶ್‌!

ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು. ಅದು ನಮ್ಮ ಕರ್ತವ್ಯ ಕೂಡಾ ಹೌದು. ನಾನೊಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ' ಎಂದಿದ್ದಾರೆ. 

ಶಾರೂಕ್ ಖಾನ್,, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ನೆರವಿನ ಹಸ್ತ ಚಾಚಿದ್ದಾರೆ. 

"