ಅಮೆರಿಕದಲ್ಲಿ ಆಯೋಜಿಸಿದ ಇಂಡಿಯಾ ಡೇ ಪರೇಡ್‌ನಲ್ಲಿ ನಟಿ ಸಮಂತಾ ರುತ್ ಪ್ರಭು ಪಾಲ್ಗೊಂಡಿದ್ದಾರೆ. ಆದರೆ ಸಮಂತಾ ವೇದಿಕೆ ಹತ್ತುತ್ತಿದ್ದಂತೆ ಪುಷ್ಪಾ ಚಿತ್ರದ ಊ ಅಂಟಾವಾ ಹಾಡು ಕೇಳಿ ಅಚ್ಚರಿಗೊಂಡಿದ್ದಾರೆ. ಸಮಂತ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ.

ನ್ಯೂಯಾರ್ಕ್(ಆ.21) ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಾಗಿರುವ ಸಮಂತ, ಇದೀಗ ಜಿಮ್‌ನಲ್ಲಿ ವರ್ಕೌಟ್ ಫೋಟೋ ಹಾಕಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಇದೀಗ ಸಮಂತ ರುತ್ ಪ್ರಭು ವಿಡಿಯೋ ಒಂದು ವೈರಲ್ ಆಗಿದೆ. ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಇಂಡಿಯಾ ಡೇ ಪರೇಡ್ ಕಾರ್ಯಕ್ರಮದಲ್ಲಿ ಸಮಂತ ಪಾಲ್ಗೊಂಡಿದ್ದಾರೆ. ಸಮಂತಾ ವೇದಿಕೆ ಹತ್ತುತ್ತಿದ್ದಂತೆ ಪುಷ್ಪಾ ಚಿತ್ರದ ಜನಪ್ರಿಯ ಊ ಅಂಟವಾ ಹಾಡು ಹಾಕಿದ್ದಾರೆ. ಈ ಹಾಡು ಕೇಳಿ ಸಮಂತ ಅಚ್ಚರಿಗೊಂಡಿದ್ದಾರೆ. ಜೊತೆಗೆ ಹಾಡನ್ನು ಎಂಜಾಯ್ ಮಾಡಿದ ನಟಿ ಬಳಿಕ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರು 41ನೇ ಇಂಡಿಯಾ ಡೇ ಪರೇಡ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಬಾರಿ ಸಮಂತಾ ರುತ್ ಪ್ರಭು ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಮಂತಾರನ್ನು ಮಾತುಗಳನ್ನಾಡುವಂತೆ ವೇದಿಕೆಗೆ ಆಹ್ವಾನಿಸಲಾಗಿತ್ತು. ಸಮಂತ ವೇದಿಕೆ ಹತ್ತುತ್ತಿದ್ದಂತೆ ಆಯೋಜಕರು ಊ ಅಂಟವಾ ಹಾಡು ಹಾಕಿದ್ದಾರೆ.

ಸಮಂತಾ ಬ್ಯಾಕ್‌ ಪೋಸ್‌ ವೈರಲ್: ಮೊದಲ ಸಲ ಬ್ಯಾಕ್‌ಲೆಸ್‌ ಆದ ನಟಿ!

ಹಾಡು ಕೇಳುತ್ತಿದ್ದಂತೆ ಸಮಂತ ಅಚ್ಚರಿಗೊಂಡಿದ್ದಾರೆ. ಅಷ್ಟೇ ಕ್ಯೂಟ್ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕವಾಗಿ ಈ ಹಾಡು ಕೇಳಿ ಕೆಲ ದಿನಗಳಾಗಿತ್ತು ಎಂದು ಸಮಂತ ಹೇಳಿದ್ದಾರೆ.ಬಳಿಕ ಸಭೆಯನ್ನುದ್ದೇಶಿ ಮಾತನಾಡಿದ ಸಮಂತಾ, ಜೈ ಹಿಂದ್ ಎಂದು ಭಾಷಣ ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಅತೀವ ಸಂತಸ ಹಾಗೂ ಹೆಮ್ಮೆಯಾಗಿದೆ. ನಮ್ಮ ದೇಶದ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಅನ್ನೋದು ಮತ್ತೆ ಮತ್ತೆಸಾಬೀತಾಗುತ್ತಿದೆ. ನನ್ನ ಸಿನಿ ಕರಿಯರ್‌ಗೆ ಅಮೆರಿಕದಲ್ಲಿರುವ ಭಾರತೀಯರು ಸಂಪೂರ್ಣ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದೀರಿ. ಇದಕ್ಕ ನಾನು ಚಿರ ಋಣಿ ಎಂದು ಸಮಂತಾ ಹೇಳಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದಲ್ಲಿ ನಟಿ ಸಮಂತಾ ಕೇವಲ ಊ ಅಂಟವಾ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಈ ಹಾಡು ಅತ್ಯಂತ ಜನಪ್ರಿಯವಾಗಿತ್ತು. ‘ಉ ಅಂಟವಾ’ ಹಾಡಿಗೆ ನರ್ತಿಸಲು ಈ ಮುನ್ನನ ಅಲ್ಲು ಅರ್ಜುನ್‌ ಅವರೇ ಕೋರಿದ್ದರು. ಅದಕ್ಕೆ ಸಮಂತಾ 5 ಕೋಟಿ ರು. ಬೇಡಿಕೆಯಿಟ್ಟಿದ್ದರು ಎಂದು ವರದಿ ಆಗಿತ್ತು. ಆ ಹಾಡಿನಿಂದಲೇ ಸಮಂತಾ ಮತ್ತಷ್ಟುಜನಪ್ರಿಯರಾಗಿದ್ದರು.

ವೇದಿಕೆಯಲ್ಲೇ ಸಮಂತಾ, ದೇವರಕೊಂಡ ರೊಮ್ಯಾನ್ಸ್: ಸಾಕಪ್ಪಾ ಸಾಕು ಎಂದ ಫ್ಯಾನ್ಸ್​!

ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಅಭಿಯನದ ಖುಷಿ ಚಿತ್ರ ಸೆಪ್ಟೆಂಬರ್ 1 ರಂದು ತೆರೆಗೆ ಅಪ್ಪಳಿಸಲಿದೆ. ಶಿವ ನಿರ್ವಾಣ ನಿರ್ದೇಶನ, ಮೈತ್ರಿ ಮೂವೀಮೇಕರ್ಸ್ ನಿರ್ಮಾಣ, ಸಮಂತಾ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು.