ಆರ್ಯನ್‌ ಡ್ರಗ್ಸ್‌ ಹವ್ಯಾಸ ಬಯಲಾಗಿದ್ದು ಹೀಗೆ!

* ನಿಯಮಿತವಾಗಿ ಮಾದಕವಸ್ತು ಆರ್ಡರ್‌ ಮಾಡ್ತಿದ್ದ ಆರ್ಯನ್‌ ಖಾನ್

* ಆತನ ಮೊಬೈಲ್‌ನಲ್ಲಿನ ವಾಟ್ಸಾಪ್‌ ಚಾಟ್‌ನಿಂದಾಗಿ ಬಹಿರಂಗ

Incriminating WhatsApp chats show Aryan Khan others involved in purchase of drugs NCB says pod

ಮುಂಬೈ(ಅ.02): ಆರ್ಯನ್‌ ಖಾನ್‌(Aryan Khan) ನಿಯಮಿತವಾಗಿ ಮಾದಕವಸ್ತು ಆರ್ಡರ್‌ ಮಾಡುತ್ತಿದ್ದ ಮತ್ತು ಸೇವಿಸುತ್ತಿದ್ದ ಎನ್ನುವ ವಿಷಯ ಆತನ ಮೊಬೈಲ್‌ನಲ್ಲಿನ ವಾಟ್ಸಾಪ್‌(Whatsapp) ಚಾಟ್‌ನಿಂದಾಗಿ ಬಹಿರಂಗಗೊಂಡಿದೆ.

ಆರ್ಯನ್‌ ಅನ್ನು ಬಂಧಿಸಿದ ನಂತರ ಪೊಲೀಸರು ಆತನ ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದರು. ಮೊಬೈಲ್‌ನ ವಾಟ್ಸಾಪ್‌ ಚಾಟ್‌ಗಳನ್ನು ಮಾದಕ ವಸ್ತು ನಿಯಂತ್ರಣ ದಳ ಪರಿಶೀಲನೆ ನಡೆಸಿದ ವೇಳೆ ಆರ್ಯನ್‌(Aryan Khan) ನಿಯಮಿತವಾಗಿ ಮಾದಕವಸ್ತುಗಳಿಗೆ ಆರ್ಡರ್‌ ಮಾಡುತ್ತಿದ್ದ ಹಾಗೂ ಸೇವಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಡ್ರಗ್ಸ್‌ ಪೂರೈಕೆ ಜಾಲದ ಜೊತೆ ಆರ್ಯನ್‌ ನಂಟು

 

ಬಂಧಿತ ಶಾರುಖ್‌ ಖಾನ್‌(Shah Rukh Khan) ಪುತ್ರ ಆರ್ಯನ್‌ ಖಾನ್‌ ಮತ್ತು ನಿಷೇಧಿತ ಮಾದಕ ದ್ರವ್ಯ ಜಾಲದೊಂದಿಗೆ ಸಂಬಂಧವಿರುವ ಸಾಕ್ಷ್ಯಾಧಾರಗಳು ತಮ್ಮ ಬಳಿಯಿವೆ ಎಂದು ಮಾದಕ ದ್ರವ್ಯ ನಿಯಂತ್ರಣ ದಳ(ಎನ್‌ಸಿಬಿ) ಹೇಳಿದೆ.

ಶಾರುಖ್‌ ಪುತ್ರ ಆರ್ಯನ್‌ ಖಾನ್‌(Aryan Khan) ಅವರಿಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲರು ಹೆಚ್ಚುವರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡರು. ಆದರೆ ಇದಕ್ಕೆ ಪ್ರತಿವಾದ ದಾಖಲಿಸಿದ ಎನ್‌ಸಿಬಿ ವಕೀಲರು, ಹಡಗಿನಲ್ಲಿನ ರೇವ್‌ ಪಾರ್ಟಿ ವೇಳೆ ಸಿಕ್ಕಿಬಿದ್ದಿರುವ ಆರ್ಯನ್‌ ಸೇರಿ ಮೂವರು ಆರೋಪಿಗಳು ನಿಷೇಧಿತ ಡ್ರಗ್ಸ್‌ ಸರಬರಾಜು ಗ್ಯಾಂಗ್‌ನ ಜತೆ ನಂಟು ಇರುವ ಮಹತ್ವದ ಅಂಶ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಏತನ್ಮಧ್ಯೆ ಡ್ರಗ್ಸ್‌ ಪೂರೈಸುತ್ತಿದ್ದವರ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಅವನೊಂದಿಗೆ ಈ ಆರೋಪಿಗಳನ್ನು ಮುಖಾಮುಖಿ ವಿಚಾರಣೆ ನಡೆಸಬೇಕಿದೆ. ತನ್ಮೂಲಕ ಬಾಲಿವುಡ್‌ ಮತ್ತು ಡ್ರಗ್ಸ್‌ ಪೂರೈಕೆದಾರರಿಗೆ ಇರುವ ಸಂಬಂಧ ಬಯಲಿಗೆಳೆಯಬೇಕಿದೆ. ಹೀಗಾಗಿ ಅವರನ್ನು ಅ.4ರವರೆಗೆ ಎನ್‌ಸಿಬಿ ವಶಕ್ಕೆ ನೀಡಬೇಕು ಎಂದು ಕೋರಿಕೊಂಡರು.

Latest Videos
Follow Us:
Download App:
  • android
  • ios