Asianet Suvarna News Asianet Suvarna News

Samantha In Differenr Roles: ಕ್ಯೂಟ್ ಗರ್ಲ್ ಪಾತ್ರ ಮಾಡಿ ಸಾಕಾಯ್ತು ಎಂದ ಸಮಂತಾ

ಸಮಂತಾ ರುಥ್ ಪ್ರಭು(Samantha Ruth Prabhu) ಇತ್ತೀಚೆಗೆ ಸಿನಿಮಾ ಚೂಸ್ ಮಾಡುವಾಗ ಕೇರ್‌ಫುಲ್ ಆಗಿದ್ದಾರೆ. ಕ್ಯೂಟ್ ಹಿರೋಯಿನ್ ಪಾತ್ರ ಬಿಟ್ಟು ದೂರ ಬಂದಿದ್ದಾರೆ ಸ್ಯಾಮ್. ಈ ಬಗ್ಗೆ ನಟಿಯ ಮಾತುಗಳಿವು

I was tired of playing the cute girl in films says samantha dpl
Author
Banga, First Published Dec 31, 2021, 10:59 PM IST
  • Facebook
  • Twitter
  • Whatsapp

ಸಮಂತಾ ರುಥ್ ಪ್ರಭು ಅವರ ಇತ್ತೀಚಿನ ಪ್ರಾಜೆಕ್ಟ್‌ಗಳನ್ನು ನೋಡಿದರೆ ಸ್ವಲ್ಪ ಮಟ್ಟಿಗೆ ಅಚ್ಚರಿಯಾಗೋದು ನಿಜ. ಅವರ ಸಿನಿಮಾ ಕೆರಿಯರ್‌ನಲ್ಲಿ ದೊಡ್ಡ ಟ್ವಿಸ್ಟ್ ಫ್ಯಾಮಿಲಿ ಮ್ಯಾನ್ 2. ಅಷ್ಟು ದಿನ ಕ್ಯೂಟ್ ಹಿರೋಯಿನ್ ಆಗಿ ಸಮಂತಾರನ್ನು ನೋಡಿದ್ದ ಸಿನಿ ಪ್ರಿಯರು ನಟಿಯ ಹೊಸ ಲುಕ್, ಅಭಿನಯ ನೋಡಿ ಫಿದಾ ಆದರು. ಸೌತ್ & ನಾರ್ತ್‌ನಲ್ಲಿ ಏಕಕಾಲಕ್ಕೆ ಅಪಾರ ಪ್ರಶಂಸೆ ಗಳಿಸುವಲ್ಲಿ ಸಕ್ಸಸ್ ಆದರು ಸ್ಯಾಮ್. ಹೌದು. ನಂತರದಲ್ಲಿ ನಟಿಯ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು.

ಫ್ಯಾಮಿಲಿ ಮ್ಯಾನ್ 2ನಲ್ಲಿ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರ ಅಭಿನಯ ಸ್ವತಃ ಟಾಲಿವುಡ್ ಮಂದಿಗೂ ಹೊಸದು. ಅದರ ನಂತರ ಪುಷ್ಪಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡರು ಸಮಂತಾ. ಇವೆರಡೂ ನಟಿಯ ವೃತ್ತಿ ಜೀವನದಲ್ಲಿ ಭಾರೀ ಪ್ರಭಾವ ಬೀರಿದ ಎರಡು ಪ್ರಾಜೆಕ್ಟ್‌ಗಳು ಎಂದರೆ ತಪ್ಪಾಗಲಾರದು.

ಸಮೋಸ ತಿನ್ನೋ ಆಸೆಗೆ ಭಾರ ಎತ್ತುತ್ತಾರೆ ಸಮಂತಾ

ಇತ್ತೀಚಿನ ವೆಬ್ ಶೋನಲ್ಲಿ ನಟಿಯು ಬೋಲ್ಡ್ ಪಾತ್ರದಲ್ಲಿ ಮನೋಜ್ ಬಾಜ್ಪೇಯಿ ಅವರೊಂದಿಗೆ ಕಾಣಿಸಿಕೊಂಡಿದ್ದು ಇದು ನಟಿಗೆ ದೊಡ್ಡ ಹಿಟ್. ಸೌತ್ ಸ್ಟಾರ್ ಸಮಂತಾ ರುತ್ ಪ್ರಭು ಹಿಂದಿ ಚಿತ್ರರಂಗಕ್ಕೆ ಕಾಲಿಡುವ ತುದಿಯಲ್ಲಿದ್ದಾರೆ.

ಎಲ್ಲ ಇಂಡಸ್ಟ್ರಿ ಜನರನ್ನು ಒಂದೆಡೆ ಸೇರಿಸುವ ಒಟಿಟಿ ಬಗ್ಗೆ ಪ್ರತಿಜಕ್ರಿಯಿಸಿರುವ ನಟಿ, ನನ್ನ ಇತ್ತೀಚಿನ ವೆಬ್ ಶೋನಲ್ಲಿ, ಕಮರ್ಷಿಯಲ್ ಸಿನಿಮಾದಲ್ಲಿ ರಾಜಿಯಂತೆ ನನಗೆ ಡಾರ್ಕ್ ಮತ್ತು ಲೇಯರ್ಡ್ ಪಾತ್ರ ಸಿಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನನಗೆ ಆ ಅವಕಾಶ ಸಿಗುತ್ತಿರಲಿಲ್ಲ. OTT ಪ್ಲಾಟ್‌ಫಾರ್ಮ್‌ಗಳ ಕಾರಣದಿಂದಾಗಿ, ರಿಸ್ಕಿ, ವೈವಿಧ್ಯಮಯ, ಆಸಕ್ತಿದಾಯಕ ಮತ್ತು ಪ್ರಚೋದನಕಾರಿ ಪಾತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ ಎಂದಿದ್ದಾರೆ.

ಇದು ಹಿಂದೆ ಟೈಪ್‌ಕಾಸ್ಟ್ ಆಗಿದ್ದ ನಟರಿಗೆ ಅವಕಾಶ ತೆರೆದಿದೆ ಎಂದು ನಾನು ನಂಬುತ್ತೇನೆ. ಪ್ರತಿ ಸಿನಿಮಾಗಳಲ್ಲಿ ಮುದ್ದಾದ ಹುಡುಗಿಯಾಗಿ ನಟಿಸಿ ನನಗೆ ಸಾಕಾಗಿಬಿಟ್ಟಿದೆ. ನನ್ನಂತಹ ನಟಿಯರು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ. ಅವಕಾಶ ಬಂದಾಗ ಅದನ್ನು ತೋರಿಸಬಹುದು ಎಂದಿದ್ದಾರೆ.

Follow Us:
Download App:
  • android
  • ios