Asianet Suvarna News Asianet Suvarna News

ಬಚ್ಚಿಟ್ಟಿಕೊಳ್ಳಲು ತಪ್ಪು ಮಾಡಿಲ್ಲ, ಮದುವೆ ಉಳಿಸಿಕೊಳ್ಳಲು 100% ಪ್ರಯತ್ನ ಮಾಡಿದ್ದೆ: ಸಮಂತಾ

 ನನ್ನ ತಪ್ಪಿಲ್ಲ ಅಂದ್ಮೇಲೆ ನಾನು ಯಾಕೆ ಬಚ್ಚಿಟ್ಟುಕೊಳ್ಳಬೇಕು. ಪಬ್ಲಿಕ್ ಫಿಗರ್ ಆದ್ಮೇಲೆ ಜೀವನದ ಪ್ರತಿಯೊಂದು ವಿಚಾರ ಹಂಚಿಕೊಳ್ಳುತ್ತಿರುವೆ ಎಂದ ಸಮಂತಾ... 
 

I have given 100 percent in marriage so i am not guilty says Samantha in Shaakuntalam promotion vcs
Author
First Published Mar 31, 2023, 11:04 AM IST

ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಮದುವೆ, ಸಂಭಾವನೆ, ಸಿನಿಮಾ, ಟ್ರೋಲ್ ಮತ್ತು ಆರೋಗ್ಯದ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಈ ವೇಳೆ ಡಿವೋರ್ಸ್‌ ನಂತರ ಜನರು ಏನೆಂದು ಕಾಮೆಂಟ್ ಮಾಡಿದರು? ಹೇಗೆ ಧೈರ್ಯ ಮಾಡಿ ಊ ಅಂಟಾವ ಐಟಂ ಹಾಡನ್ನು ಒಪ್ಪಿಕೊಂಡರು ಎಂದು ಹಂಚಿಕೊಂಡಿದ್ದಾರೆ.

'ನನ್ನ ಮದುವೆ ಡಿವೋರ್ಸ್‌ ವಿಚಾರ ಹೊರ ಬಂದಾಗ ನನಗೆ ಊ ಅಂಟಾವ ಐಟಂ ಹಾಡಿನ ಆಫರ್ ಬಂತು. ಆಗ ನನ್ನ ಕುಟುಂಬಸ್ಥರು, ಸ್ನೇಹಿತರು ಅಭಿಮಾನಿಗಳು ಅಷ್ಟೇ ಯಾಕೆ ಟ್ರೋಲ್ ಮಾಡುವವರು ಈ ಆಫರ್‌ನ ಒಪ್ಪಿಕೊಳ್ಳಬೇಡಿ ಮನೆಯಲ್ಲಿ ಇರಬೇಕು ಎಂದ ಸಲಹೆ ಕೊಡುತ್ತಿದ್ದರು. ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ ಫ್ರೆಂಡ್ಸ್‌ ಗ್ಯಾಂಗ್‌ ಕೂಡ ಸಪರೇಷನ್‌ ನಂತರ ಐಟಂ ಸಾಂಗ್ ಮಾಡಬೇಡ ಎನ್ನುತ್ತಿದ್ದರು. ಎಲ್ಲರೂ ಬೇಡ ಬೇಡ ಎನ್ನುತ್ತಿದ್ದ ಕಾರಣ ಸರಿ ನಾನು ಡ್ಯಾನ್ಸ್‌ ಮಾಡುತ್ತೀನಿ ಎಂದು ಆಫರ್ ಒಪ್ಪಿಕೊಂಡೆ. ನನ್ನ ತಲೆಯಲ್ಲಿ ಓಡುತ್ತಿದ್ದ ವಿಚಾರ ಒಂದೇ ಯಾಕೆ ನಾನು ಬಚ್ಚಿಟ್ಟುಕೊಳ್ಳಬೇಕು? ನಾನು ಯಾವ ತಪ್ಪೂ ಮಾಡಿಲ್ಲ. ಬಚ್ಚಿಟ್ಟುಕೊಂಡು ಟ್ರೋಲ್ ಮತ್ತು ಜನರು ಮಾತನಾಡುವುದು ಕಡಿಮೆ ಮಾಡಲಿ ಆನಂತರ ನಾನು ಹೊರ ಬಂದು ಮುಖ ತೋರಿಸುವೆ ಎನ್ನುವ ಮೈಂಡ್‌ ಸೆಟ್‌ನಲ್ಲಿ ನಾನು ಇರಲಿಲ್ಲ' ಎಂದು ಮಿಸ್ ಮಾಲಿನಿ ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

8 ತಿಂಗಳಲ್ಲಿ ನನ್ನ ಜೀವನ ಬದಲಾಗಿದೆ; Myositis ಕಾಯಿಲೆ ಬಗ್ಗೆ ಮೌನ ಮುರಿದ ಸಮಂತಾ

'ಕೊಲೆ ಮಾಡಿದವರೇ ಬಚ್ಚಿಟ್ಟುಕೊಳ್ಳುವುದಿಲ್ಲ. ಮದುವೆ ವಿಚಾರದಲ್ಲಿ 100% ಶ್ರಮ ಹಾಕಿರುವೆ ಆದರೂ ವರ್ಕೌಟ್ ಆಗಲಿಲ್ಲ ಅಂದ್ರೆ ನನಗೆ ಗಿಲ್ಟ್‌ ಇಲ್ಲ. ನಾನು ತಪ್ಪೇ ಮಾಡಿಲ್ಲ ಅಂದ್ಮೇಲೆ ಯಾಕೆ ಬೇಸರ ಮಾಡಿಕೊಳ್ಳಬೇಕು? ಊ ಅಂಟಾವ ಹಾಡು ನನಗೆ ಇಷ್ಟ ಆಯ್ತು ಅದರಲ್ಲಿ ಇರುವ ಸಾಲುಗಳು ಮತ್ತು ಸ್ಪೆಪ್‌ಗಳು ಇಷ್ಟವಾಯ್ತು ಅದಿಕ್ಕೆ  ಒಪ್ಪಿಕೊಂಡೆ. ಜೀವನದಲ್ಲಿ ಎಂದೂ ಐಟಂ ಹಾಡು ಮಾಡಿರಲಿಲ್ಲ ಹೀಗಾಗಿ ಒಪ್ಪಿಕೊಂಡೆ...ಇನ್ನೂ ಸತ್ಯ ಹೇಳಬೇಕು ಅಂದ್ರೆ ಅದನ್ನೊಂದು ಪಾತ್ರವಾಗಿ ಕಂಡೆ ಅಷ್ಟೆ. ಇದು ಐಟಂ ಸಾಂಗ್ ಇದು ಈ ರೀತಿ ಹಾಗೆ ಹೀಗೆ ಎಂದು ನಾನು ನೋಡುವುದಿಲ್ಲ ನಾನು ಕಥೆ ಆಯ್ಕೆ ಮಾಡಿಕೊಳ್ಳುವುದು ಹೇಗೆ ಅಂದ್ರೆ ಇದು ಹೊಸ ಕಥೆ ಇದು ಹೊಸ ಪಾತ್ರ ಎಂದು ಅಷ್ಟೇ' ಎಂದು ಸಮಂತಾ ಹೇಳಿದ್ದಾರೆ. 

ಸಮಂತಾ 'ಊ ಅಂಟಾವಾ ಮಾವ' ಒಂದು ಹಾಡಾ?; ಗಾಯಕಿ ಎಲ್‌ ಆರ್‌ ಈಶ್ವರಿ ಗರಂ

'ಪರ್ಫೆಕ್ಟ್‌ ಆಗಿರಬೇಕು ಅನ್ನೋದು ಒಂದು ರೀತಿ ಭಯಂಕರ ಕಾಯಿಲೆ. ಸಿನಿಮಾ ಇಂಡಸ್ಟ್ರಿ ಪರ್ಫೆಕ್ಷನ್‌ನ ಸೆಲ್ ಮಾಡುತ್ತೆ...ನಾರ್ಮಲ್‌ ಜನರಿಗೆ ಇದು ತುಂಬಾ ಹೆದರಿಸುತ್ತದೆ. ನನ್ನ ದುಖಃ ಮತ್ತು ಕಷ್ಟಗಳನ್ನು ಜನರ ಜೊತೆ ಹಂಚಿಕೊಳ್ಳಬೇಕು ಇದರಿಂದ ಮತ್ತೊಬ್ಬರಿಗೆ ಸಹಾಯವಾಗುತ್ತದೆ. ಪಬ್ಲಿಕ್ ಫಿಗರ್ ಆದಾಗಿನಿಂದ ನನ್ನ ಜೀವನವನ್ನು ತುಂಬಾ ಟ್ರಾನ್ಸಪರೆಂಟ್‌ ಆಗಿಟ್ಟಿರುವೆ' ಎಂದಿದ್ದಾರೆ ಸಮಂತಾ. 

Follow Us:
Download App:
  • android
  • ios