Chiranjeevi ತೆಲುಗು ಜನರ ಗುಲಾಮ, ಎಂದೂ ಚಿತ್ರರಂಗ ಬಿಡಲ್ಲ: ಚಿರಂಜೀವಿ
IFFI 2022 ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ತೆಲುಗು ಸಿನಿಮಾರಂಗ ಮತ್ತು ಅಭಿಮಾನಿಗಳು ತೋರಿಸಿರುವ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

53ನೇ ಇಂಟರ್‌ನ್ಯಾಷನಲ್ ಫಿಲ್ಮಂ ಫೆಸ್ಟಿವ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂಡಿಯಾ ಫಿಲ್ಮಂ ಪರ್ಸನಾಲಿಟಿ ಆಫ್ ದಿ ಇಯರ್ ಅವಾರ್ಡ್ ಕೊಟ್ಟು ಗೌರವಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ನಟ ವಿಶ್ವಾದ್ಯಂತ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
'ಇಂತ ಅದ್ಭುತ ಅವಾರ್ಡ್ ಕೊಟ್ಟಿರುವುದಕ್ಕೆ IFFI ಮತ್ತು ಭಾರತ ಸರ್ಕಾರಕ್ಕೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಕೆಲವೊಂದು ಪ್ರಶಸ್ತಿಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ ಆ ಸಾಲಿಗೆ ಈ ನನ್ನ ಪ್ರಶಸ್ತಿ ಸೇರಲಿದೆ. ಮಿಡಲ್ ಕ್ಲಾಸ್ ಮನೆಯಲ್ಲಿ ಸ್ವಾಭಿಮಾನಿ ಪೋಷಕರಿಗೆ ಹುಟ್ಟಿದ್ದವನ್ನು ನಾನು. ನನ್ನ ಫೇಮ್, ಹೆಸರು, ಚರಿಸ್ಮಾ, ಸವಲತ್ತುಗಳು, ನನ್ನ ಅಭಿಮಾನಿಗಳ ಅಮೂಲ್ಯ ಪ್ರೀತಿ ಮತ್ತು ವಾತ್ಸಲ್ಯ ಮತ್ತು ಎಲ್ಲವೂ ಚಿತ್ರರಂಗದಿಂದ ಬಂದಿರುವುದು. ಕೊನಿಡೆಲಾ ಶಿವಾ ಶಂಕರ್ ವರದಾ ಪ್ರದಾಸ್ ಅವರಿಗೆ ಹುಟ್ಟಿದ ನನ್ನನ್ನು ಚಿರಂಜೀವಿ ಎಂದು ಮರು ನಾಮಕರಣ ಮಾಡಿದ್ದು ಇದೇ ಚಿತ್ರರಂಗ' ಎಂದು ಚಿರಂಜೀವಿ ಹೇಳಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟ ನಂತರ ರಾಜಕೀಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಮತ್ತೆ ಚಿತ್ರರಂಗಕ್ಕೆ ಮರುಳುವ ನಿರ್ಧಾರ ಮಾಡಿದ್ದು ಹೇಗೆ ಎಂದು ಚರ್ಚಿಸಿದ್ದಾರೆ.
'45 ವರ್ಷಗಳಿಂದ ನಾನು ತಮಿಳು ಚಿತ್ರರಂಗದಲ್ಲಿ ಇರುವೆ. ಈ ನಾಲ್ಕುವರೆ ದಶಕದಲ್ಲಿ ನಾನು ಒಂದು ದಶಕ ರಾಜಕೀಯದಲ್ಲಿ ತೊಡಗಿಸಿಕೊಂಡಿರುವೆ. ಕೆಲವು ಕಾರಣಗಳಿಗೆ ನಾನು ಮತ್ತೆ ಚಿತ್ರರಂಗಕ್ಕೆ ಮರುಳಬೇಕಿತ್ತು. ಆ ಸಮಯದಲ್ಲಿ ಜನರು ನನ್ನನ್ನು ಮತ್ತೆ ಸ್ವೀಕರಿಸುತ್ತಾರಾ ಅದೇ ಪ್ರೀತಿ ಮತ್ತು ಜಯ ಕೊಡುತ್ತಾರಾ ಇಲ್ವಾ ಅನ್ನೋ ಯೋಚನೆ ನನಗೆ ಇತ್ತು. ಈ ರೀತಿ ಯೋಚನೆಗಳು ಬರಲು ಕಾರಣವೇ ಬದಲಾಗಿರುವ ಜನರೇಷನ್. ಆದರೆ ಅವರ ಮನಸ್ಸಿನಲ್ಲಿ ಕೊಟ್ಟಿರುವ ಜಾಗ ಪ್ರೀತಿ ಮತ್ತು ಜಯ ಕಿಂಚಿತ್ತು ಬದಲಾಗಿಲ್ಲ ಆಶ್ಚರ್ಯಕ್ಕೆ ಇನ್ನೂ ಡಬಲ್ ಅಗಿದೆ. ನನ್ನ ಅಭಿಮಾನಿಗಳ ಜೊತೆಗಿರುವ ನನ್ನ ಬಾಂಡ್ ಇದು. ಎಂದೂ ಚಿತ್ರರಂಗ ಬಿಡುವುದಿಲ್ಲ ಎಂದು ಅಭಿಮಾನಿಗಳಿಗೆ ಮಾತು ಕೊಡುತ್ತೇನೆ' ಎಂದಿದ್ದಾರೆ ಚಿರಂಜೀವಿ...
30 ಲಕ್ಷದ ಜಮೀನನ್ನು 70 ಕೋಟಿಗೆ ಮಾರಿದ ನಟ ಚಿರಂಜೀವಿ: ಏನಿದು ಗೋಲ್‌ಮಾಲ್ ಎಂದ ನೆಟ್ಟಿಗರು!
'ಜಗತ್ತಿನಾದ್ಯಂತ ಇರುವ ತೆಲುಗು ಚಿತ್ರರಂಗದ ಅಭಿಮಾನಿಗಳ ಪ್ರೀತಿಗೆ ನಾನು ಗುಲಾಮ. ಆ ಪ್ರೀತಿಯಿಂದಲೇ ನಾನು ಈ ವೇದಿಕೆ ಮೇಲೆ ಇರುವುದು ಹಾಗೇ ಪ್ರತಿಷ್ಠಿತ ಅವಾರ್ಡ್ ಸ್ವೀಕರಿಸಿರುವುದು. ಈ ಪ್ರೀತಿಗೆ ಎಂದಿಗೂ ಚಿರರುಣಿ' ಎಂದು ಮಾತನಾಡಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿದ ಅಕ್ಷಯ್ ಕುಮಾರ್ ಬಗ್ಗೆ ಮಾತನಾಡಿದ ಚಿರು 'ನನ್ನ ಮಗ ರಾಮ್ ಚರಣ್ ಮತ್ತು ಅಕ್ಷಯ್ ಕುಮಾರ್ ಟಿವಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಅಕ್ಷಯ್ ನನ್ನ ಸ್ನೇಹಿತೆ ಈಗ ನನ್ನ ಮಗನ ಜೊತೆ ಕಾಂಪೀಟ್ ಮಾಡುತ್ತಿದ್ದಾನೆ. ಅದು ಅಕ್ಷಯ್ ಉಳಿಸಿಕೊಂಡು ಬಂದಿರುವ ಚೆರಿಷ್ಮಾ, ಶಕ್ತಿ ಮತ್ತು ಎನರ್ಜಿ' ಎಂದು ಹೇಳಿದ್ದಾರೆ.
ಕೋಟಿಗಟ್ಟಲೆ ಆಸ್ತಿಯ ಮಾಲೀಕ :
ಚಿರಂಜೀವಿ ಕೇವಲ ದಕ್ಷಿಣದ ಚಲನಚಿತ್ರ ನಟ ಮಾತ್ರವಲ್ಲ, ವಾಸ್ತವವಾಗಿ ಜನರು ಅವರನ್ನು ಆರಾಧಿಸುತ್ತಾರೆ. ಚಿರಂಜೀವಿ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಲ್ಲಿರುವ ಅತ್ಯಂತ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಇದರ ಬೆಲೆ ಸುಮಾರು 38 ಕೋಟಿ. ಅವರ ಇಡೀ ಕುಟುಂಬ ಈ ಬಂಗಲೆಯಲ್ಲಿ ಒಟ್ಟಿಗೆ ವಾಸಿಸುತ್ತಿದೆ.ವರದಿಯ ಪ್ರಕಾರ ಸೂಪರ್ ಸ್ಟಾರ್ ಚಿರಂಜೀವಿ ಅವರ ಒಟ್ಟು ಆಸ್ತಿ 1300 ಕೋಟಿ. ಅವರ ಮುಖ್ಯ ಆದಾಯದ ಮೂಲವೆಂದರೆ ಚಲನಚಿತ್ರಗಳಿಂದ ಬರುವ ಆದಾಯ.