Asianet Suvarna News Asianet Suvarna News

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಕಡಿಮೆ, ಕಿರುತೆರೆಗೆ ಎಂಟ್ರಿ ಕೊಟ್ಟ ನಟ Vikee Shah!

ಗುಜರಾತಿ ಸಿನಿಮಾ ಕ್ಷೇತ್ರದಲ್ಲಿ ಏನೆಲ್ಲಾ ಕೆಲಸ ನಡೆಯುತ್ತಿದೆ? ನಟ ವಿಕಿ ಶಾ ಕಿರುತೆರೆಗೆ ಎಂಟ್ರಿ ಕೊಡಲು ಕಾರಣವೇನು? 

I am happy to make a move to Gujarati tv says actor Vikee Shah vcs
Author
Bangalore, First Published Nov 18, 2021, 4:32 PM IST
  • Facebook
  • Twitter
  • Whatsapp

ಕೊರೋನಾ ಲಾಕ್‌ಡೌನ್‌ (Covid19 lockdown) ನಿಂದ ವಿವಿಧ ಕ್ಷೇತ್ರಗಳಿಗೆ ನಷ್ಟವಾಗಿ ಆದರೆ ಎಲ್ಲವೂ ಕಡಿಮೆ ಸಮಯದಲ್ಲಿ ಬಲು ಬೇಗ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಆದರೆ ಮನೋರಂಜನೆ (Entertainment) ಕ್ಷೇತ್ರ ಮಾತ್ರ ಎರಡೂ ಲಾಕ್‌ಡೌನ್‌ನಲ್ಲಿ ದೊಡ್ಡ ಪೆಟ್ಟು ತಿಂದಿದೆ. ಮಾಲಿವುಡ್ (Mollywood), ಟಾಲಿವುಡ್ (Tollywood), ಕಾಲಿವುಡ್ (kollywood) , ಸ್ಯಾಂಡಲ್‌ವುಡ್‌ (Sandalwood) ಹಾಗೂ ಬಾಲಿವುಡ್ (Bolywood) ಚೇರಿಸಿಕೊಳ್ಳುವ ಸಮಯದಲ್ಲಿ ಈಗ ಗುಜರಾತಿ (Gujarati) ಸಿನಿಮಾಗಳು ಕೂಡ ನಿಧಾನಕ್ಕೆ ಚೇರಿಸಿಕೊಳ್ಳುವ ಸೂಚನೆ ಕಾಣಿಸುತ್ತಿದೆ. ಕಡಿಮೆ ಕೆಲಸ ಇರುವ ಕಾರಣ ಸ್ಟಾರ್ ನಟ, ನಟಿಯರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ನಟ ವಿಕಿ ಶಾ (Vikee Shah) ಕೂಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಂದಿರುವ ವಿಕಿ ಅವರ ವೃತ್ತಿ ಜೀವನದ ಅಪ್ಡೇಟ್ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 

Biggboss15: ಅನಾರೋಗ್ಯದಿಂದ ಮನೆಯಿಂದ ಹೊರ ಬಂದ ಶಮಿತಾ; ಅಭಿಮಾನಿಗಳಿಗೆ ಉತ್ತರಿಸಿದ ತಾಯಿ

'ಸದ್ಯಕ್ಕೆ ಸಿನಿಮಾ ಕ್ಷೇತ್ರದಲ್ಲಿ ಕಡಿಮೆ ಕೆಲಸಗಳು ನಡೆಯುತ್ತಿದೆ ಎಲ್ಲವೂ ನಾರ್ಮಲ್ ಆಗುವವರೆಗೂ ನಾನು ಕಾಯುವುದಕ್ಕೆ ಕಷ್ಟವಾಗುತ್ತದೆ. ಟಿವಿ ಶೋಗಳ (TV show) ಜೊತೆ ನನಗೆ ಒಳ್ಳೆಯ ಅವಕಾಶಗಳಿದ್ದವು, ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈ ಹೊಸ ಚಾಲೆಂಜನ್‌ನ ನಾನು ಸ್ವೀಕರಿಸಿದ್ದೀನಿ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರೀತಿ ಟಿವಿ ಒಳ್ಳೆಯ ಪ್ರತಿಕ್ರಿಯೆ  ಪಡೆಯುತ್ತಿದೆ' ಎಂದು ವಿಕಿ ಶಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Vicky Kaushal-Katrina Kaif: ಮದ್ವೆಯಾದ್ಮೇಲೆ ಸಿನಿಮಾ ಕೆರಿಯರ್‌ಗೆ ಕಂಟಕ ? ಭವಿಷ್ಯ ರಿವೀಲ್

 

ಬ್ಯುಸಿನೆಸ್‌ (Bussiness) ಬ್ಯಾಕ್‌ಗ್ರೌಂಡ್‌ನಿಂದ ಬಂದಿರುವ ವಿಕಿ ಶಾಗೆ ಯಾವುದೇ ರೀತಿಯ ಹಣ ಕಾಸಿನ ಚಿಂತೆ ಇಲ್ಲ ಆದರೆ ಕ್ಯಾಮೆರಾ ತುಂಬಾ ಇಷ್ಟ ಪಡುವ ಕಾರಣ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ' ನಾನು ಮಾಡುವ ಕೆಲಸ ನನಗೆ ತುಂಬಾನೇ ಖುಷಿ ಕೊಡುತ್ತದೆ ಆದರೆ ಕೆಲಸ ಕಡಿಮೆ ಇರುವ ಕಾರಣ ನಾನು ಕ್ಯಾಮೆರಾ ಮಿಸ್ ಮಾಡಿಕೊಳ್ಳುತ್ತಿರುವೆ. ಹೀಗಾಗಿ ನಾನು ಈ ಶೋ ಒಪ್ಪಿಕೊಂಡೆ' ಎಂದು ವಿಕಿ ಹೇಳಿದ್ದಾರೆ. 

Manmilaap.com, ಬಾಲಿಕಾ ವಧು, ಅದಾಲತ್, ಶಾರ್ಟ್ ಸರ್ಕ್ಯೂಟ್, 24 ಕ್ಯಾರೆಟ್ ಪಿತ್ತಲ್, ಸೂರ್ಯಂಶ್ ಸಿನಿಮಾದಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios