Asianet Suvarna News Asianet Suvarna News

90 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡ Sonakshi Sinha ಫಿಟ್ನೆಸ್ ಟಿಪ್ಸ್ ಇವು!

90 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ ನಟಿ ಸೋನಾಕ್ಷಿ ಸಿನ್ಹಾ. ಇಂದು ಅವರ 36ನೇ ಹುಟ್ಟುಹಬ್ಬ. ಈ ನಿಮಿತ್ತ ತೂಕ ಇಳಿಸಿಕೊಳ್ಳುವ  ಟಿಪ್ಸ್​ ನೀಡಿದ್ದಾರೆ ನಟಿ. ಅವರು ಹೇಳಿರೋದೇನು? 
 

How Sonakshi Sinha dropped from 90 to 60 kilos know this on her birthday
Author
First Published Jun 2, 2023, 12:44 PM IST

ಸೋನಾಕ್ಷಿ ಸಿನ್ಹಾ ಬಾಲಿವುಡ್​ನ ಜನಪ್ರಿಯ ನಟಿ. ಇವರು  ಒಂದು ಕಾಲದಲ್ಲಿ ಬಾಲಿವುಡ್​ ಆಳಿದ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ. ಅವರು ಸಲ್ಮಾನ್ ಖಾನ್ ಅವರ ದಬಾಂಗ್ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಿತ್ರವು ಸೂಪರ್ ಹಿಟ್ ಎಂದು ಸಾಬೀತಾಯಿತು ಮತ್ತು ಅದರ ನಂತರ ಸೋನಾಕ್ಷಿ ತಮ್ಮ ಜೀವನದಲ್ಲಿ ಹಿಂತಿರುಗಿ ನೋಡಲಿಲ್ಲ. ಆದರೆ ಈ ಚಿತ್ರಕ್ಕಾಗಿ ಸೋನಾಕ್ಷಿ (Sonakshi Sinha) ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅಸಲಿಗೆ  ಸೋನಾಕ್ಷಿ ಸಿನ್ಹಾ ಚಿತ್ರಕ್ಕೆ ಬರುವ ಮುನ್ನ ಅವರ ತೂಕ ತುಂಬಾ ಹೆಚ್ಚಿತ್ತು. ಹೀಗಿರುವಾಗ ಹಿರಿತೆರೆಗೆ ಬರುವ ಮುನ್ನ ಫಿಟ್ ಆಗಿರಲು ಸಾಕಷ್ಟು ಶ್ರಮ ಪಡಬೇಕಾಯಿತು. ಇಂದು ಅಂದರೆ ಜೂನ್​ 2 ನಟಿ ಸೋನಾಕ್ಷಿ ಸಿನ್ಹಾ ಅವರು 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಸೋನಾಕ್ಷಿ ಅವರ ಜೀವನಕ್ಕೆ ಸಂಬಂಧಿಸಿದ ಒಂದು ಕುತೂಹಲದ ಸಂಗತಿ ಇಲ್ಲಿದೆ. 

 ಸೋನಾಕ್ಷಿ ಸಿನ್ಹಾ ಸ್ಟಾರ್ ಕಿಡ್ (Star kid) ಆದ ಹೊರತಾಗಿಯೂ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅವರು ಎಂಟ್ರಿ ಕೊಟ್ಟರು. ಆ ಸಂದರ್ಭದಲ್ಲಿ ವಿಶೇಷ ಎಂದರೆ ಸೋನಾಕ್ಷಿ ಸಿನ್ಹಾ ಅವರ ದೇಹದ ತೂಕ 95 ಕೆಜಿ ಇತ್ತು. ಅದನ್ನು ಅವರು 65 ಕೆಜಿಗೆ ಇಳಿಸಿಕೊಂಡಿರೋ  ಸ್ಫೂರ್ತಿದಾಯಕ ಕಥೆ ಇದು. ಸೋನಾಕ್ಷಿ ಸಿನ್ಹಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಖತ್ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾರೆ. ಸೋನಾಕ್ಷಿ ಸಿನ್ಹಾ ಈ ರೀತಿ ಮಿಂಚೋಕೆ ಕಾರಣ ಅವರ ಶ್ರಮ. 18ನೇ ವಯಸ್ಸಿಗೆ 95 ಕೆಜಿ ಇದ್ದ ನಟಿ ನಂತರ ಹೇಗೆ 30 ಕೆ.ಜಿ ಇಳಿಸಿಕೊಳ್ಳಲು ಸಾಕಷ್ಟು ಶ್ರಮ ಹಾಕಿದರು. 

Tip Tip Barsa Pani: ಸೀರೆ ಬಿಚ್ಬಾರ್ದು, ಕಿಸ್ ಕೊಡ್ಬಾರ್ದು.... ಮಳೆ ಸೀನ್​ಗೆ ರವೀನಾ ಟಂಡನ್​ ಕಂಡೀಷನ್​!

ಸೋನಾಕ್ಷಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಫ್ಯಾಷನ್ ಡಿಸೈನರ್ (Fashion Designer) ಎಂದು ಹೆಸರಾಗಿದ್ದರು. ಅವರು ದೀರ್ಘಕಾಲದವರೆಗೆ ಡಿಸೈನರ್ ಆಗಿ ಕೆಲಸ ಮಾಡಿದರು, ಆದರೆ ಸಲ್ಮಾನ್ ಖಾನ್ ಅವರ ಕಣ್ಣಿಗೆ ಬಿದ್ದಾಗ, ಸೋನಾಕ್ಷಿ ಸಿನ್ಹಾ ಅವರ ಇಡೀ ಜೀವನವೇ ಬದಲಾಯಿತು. ಸಲ್ಮಾನ್‌ನ ಆಜ್ಞೆಯ ಮೇರೆಗೆ ಸೋನಾಕ್ಷಿ ಸಿನ್ಹಾ ತಮ್ಮ ದೇಹದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 'ದಬಾಂಗ್'ಗಾಗಿ 30 ಕಿಲೋಗಳನ್ನು ಕಳೆದುಕೊಂಡರು. ಕಾಲೇಜು ದಿನಗಳಲ್ಲಿ ತನ್ನ ತೂಕ 95 ಕೆಜಿ ಇತ್ತು ಎಂದು ಸೋನಾಕ್ಷಿ ಒಮ್ಮೆ ಹೇಳಿದ್ದರು. ಈ ಹೆಚ್ಚಿದ ತೂಕದಿಂದಾಗಿ, ಅವರು ಅನೇಕ ಬಾರಿ ಟ್ರೋಲ್‌ಗೆ (Troll) ಒಳಗಾಗಿದ್ದರು ಮತ್ತು ಇದರಿಂದಾಗಿ ಅವರ ಆತ್ಮವಿಶ್ವಾಸವೂ ಅನೇಕ ಬಾರಿ ಕಡಿಮೆಯಾಗಿದೆ. ತಮ್ಮ ತೂಕದ ಬಗ್ಗೆ ಅವರಿಗೇ  ಬೇಸರ ಇತ್ತು. ಆದರೆ, ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂಬುದು ಅವರ ಮನಸ್ಸಿನಲ್ಲಿ ಮೂಡಿತ್ತು. 

ಅದನ್ನು ಸಾಧಿಸಿರೋ ಸೋನಾಕ್ಷಿಯವರು ಈಗ ಅದರ ಟಿಪ್ಸ್​ ಕೊಟ್ಟಿದ್ದಾರೆ. ತಾವೂ ಹಾಗೆಯೇ ಮಾಡಿ ತೂಕ (Weight Loss) ಇಳಿಸಿಕೊಂಡಿರುವುದಾಗಿ ಹೇಳಿದ್ದಾರೆ. ಅವರು ಕೊಟ್ಟ ಟಿಪ್ಸ್​ ಏನೆಂದರೆ 
ಆರೋಗ್ಯಕರ ಆಹಾರ ತಿನ್ನಿ: ಇತ್ತೀಚೆಗೆ ಜಂಕ್ ಫುಡ್ ಕಡೆ ಯುವ ಜನತೆ ಹೆಚ್ಚು ಒಲವು ತೋರಿಸುತ್ತಿದೆ. ಆದರೆ, ಅದರ ಬದಲು ಆರೋಗ್ಯಕರ ಆಹಾರದ ಕಡೆ ಹೆಚ್ಚು ಒಲವು ತೋರಿಸಬೇಕು ಅನ್ನೋದು ಅವರ ಸೂಚನೆ.
ನಿತ್ಯ ವ್ಯಾಯಾಯಮ ಮಾಡಿ: ನಿತ್ಯವೂ ತಪ್ಪದೆ ವ್ಯಾಯಮ ಮಾಡಿ. ವಾಕಿಂಗ್, ಯೋಗ, ಜಿಮ್ ಇವುಗಳ ಪೈಕಿ ಯಾವುದಾದರೂ ಉತ್ತಮ ಎನ್ನುತ್ತಾರೆ ಸೋನಾಕ್ಷಿ.
ತಾಳ್ಮೆ ಇರಲಿ: ರಾತ್ರೋ ರಾತ್ರಿ ಯಾರೂ ದೇಹದ ತೂಕ ಇಳಿಸಿಕೊಳ್ಳುವುದಿಲ್ಲ. ಆ ಬಗ್ಗೆ ತಾಳ್ಮೆ ಇರಲಿ ಅನ್ನೋದು ಸೋನಾಕ್ಷಿ ಅವರ ಕೋರಿಕೆ.

ಖಾನ್​ ತ್ರಯರಿಗಿಂತ ಮುಂಚೆಯೇ 100 ಕೋಟಿ ಕಲೆಕ್ಷನ್​ ಮಾಡಿ ಇತಿಹಾಸ ಸೃಷ್ಟಿಸಿತ್ತು ಈ ಸಿನಿಮಾ

ಸೋನಾಕ್ಷಿ ಸಿನ್ಹ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ದಹಾಡ್​’ (Dahaad) ವೆಬ್ ಸೀರಿಸ್ (Web Series) ಮೆಚ್ಚುಗೆ ಪಡೆದಿದೆ. ಇದು ಅವರ ಬರ್ತ್​ಡೇ ಖುಷಿಯನ್ನು ಹೆಚ್ಚಿಸಿದೆ. ಅವರನ್ನು ಅನೇಕ ವೆಬ್​ ಸೀರಿಸ್​ ಆಫರ್​ಗಳು ಹುಡುಕಿ ಬರುತ್ತಿವೆ.  

Follow Us:
Download App:
  • android
  • ios