ಕರೇನ್ ಜಿತ್ ಕೌರ್‌ ವೋಹ್ರಾ ಅಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ಸನ್ನಿ ಲಿಯೋನ್ ಅಂದರೆ ಗಂಡಸರಿಗೆ ಮಿಂಚು ಹೊಡೆದಂಥಾ ಫೀಲ್. ಒಂದು ಕಾಲದಲ್ಲಿ ಪೋರ್ನ್ ನಟಿಯಾಗಿದ್ದ ಈಕೆ ಭಾರತಕ್ಕೆ ಮೊದಲ ಸಲ ಬಂದಾಗ ಅಮಿತಾಬ್ ಬಚ್ಚನ್ ರಂಥಾ ನಟರೂ ಆಕೆಯನ್ನು ಬಹಳ ಆತ್ಮೀಯವಾಗಿ ಸ್ವಾಗತಿಸಿದರು. ಈಗ ಬಾಲಿವುಡ್ ನಟಿಯಾಗಿ ಮಾಡಿರುವ ಹೆಸರಿಗಿಂತ ಎಷ್ಟೋ ಹೆಚ್ಚಿನ ಪ್ರಸಿದ್ಧಿ ಆಕೆಗೆ ನೀಲಿ ಚಿತ್ರಗಳಿಂದ ಬಂದಿತ್ತು. ಜಗತ್ತಿನಾದ್ಯಂತ ಈಕೆಯ ಪೋರ್ನ್ಗೆ ಅಡಿಕ್ಟ್ ಆದವರಿದ್ದರು. 2010ರ ಜಗತ್ತಿನ ಬೆಸ್ಟ್ ಹದಿನೈದು ಪೋರ್ನ್ ವೀಡಿಯೋಗಳಲ್ಲಿ ಈಕೆಯದೂ ಒಂದಾಗಿತ್ತು. ಇವತ್ತಿಗೂ ನೀವು ಗೂಗಲ್‌ನಲ್ಲಿ ಸನ್ನಿ ಲಿಯೋನ್ ಅಂತ ಸರ್ಚ್ ಮಾಡಿದರೆ ಆಕೆಯ ಹಳೆಯ ಪೋರ್ನ್ ವೆಬ್‌ಸೈಟ್‌ಗಳು ಕಾಣುತ್ತವೆ. ಎಂಟು ವರ್ಷಗಳ ಹಿಂದಿನ ಈಕೆಯ ಪೋರ್ನ್ ಸೈಟ್‌ಗಳಿಗೆ ಈಗಲೂ ಲಕ್ಷಾಂತರ ಜನ ವಿಸಿಟ್ ಮಾಡುತ್ತಾರೆ. ಮೈ ಬೆಚ್ಚಗಾಗಿಸಿಕೊಳ್ಳುತ್ತಾರೆ.

ಸ್ವಂತ ಇಚ್ಚೆಯಿಂದಲೇ ಪೋರ್ನ್ ಜಗತ್ತು ಪ್ರವೇಶಿಸಿದ ಈಕೆ ಸ್ವಯಂ ಆಸಕ್ತಿಯಿಂದಲೇ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆ ಬಳಿಕ ಅದರಿಂದ ಹೊರ ಬಂದರು. ತನ್ನ ಮ್ಯಾನೇಜರ್ ಡೇನಿಯಲ್ ವೆಬರ್ ಅನ್ನು ಮದುವೆಯಾಗಿ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಮಾಡೆಲಿಂಗ್ ಮಾಡುತ್ತಾ ಮಕ್ಕಳೊಂದಿಗೆ ಹ್ಯಾಪಿ ಟೈಮ್ ಕಳೆಯುತ್ತಿದ್ದಾರೆ.

 

ಹೋಳಿ ಹಬ್ಬಕ್ಕೆ ಸನ್ನಿ ಡಿಫರೆಂಟ್ ವಿಶ್, ಫ್ಯಾನ್ಸ್ ಫುಲ್ ಖುಷ್
 

ಮೂವತ್ತೆಂಟು ವರ್ಷದ ಸನ್ನಿ ಮೊದಲ ಮಗು 2017ರಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದರು. ಇದಾದ ಮರುವರ್ಷವೇ ಬಾಡಿಗೆ ಗರ್ಭದ ಮೂಲಕ ಅವಳಿ ಮಕ್ಕಳ ತಾಯಿಯಾದರು. ನೋಹ್ ಎಂಬ ಮಗ ಹಾಗೂ ಆಶರ್ ಎಂಬ ಮಗಳು ಸನ್ನಿ ಲಿಯೋನ್ ದಂಪತಿಗಳ ಜೊತೆಗಿದ್ದಾರೆ.

 

ಮೂವರು ಮಕ್ಕಳ ಅಮ್ಮನ ದಿನಚರಿ ಹೀಗಿರುತ್ತೆ!

ಮಕ್ಕಳಾದ ಮೇಲೆ ಸನ್ನಿ ಲಿಯೋನ್ ಥೇಟ್‌ ಭಾರತೀಯ ತಾಯಿಯಾಗಿ ಬದಲಾಗಿದ್ದಾರೆ, ಬೆಳಗ್ಗೆ ಐದೂವರೆ ಗಂಟೆಗೆಲ್ಲ ಅವರ ದಿನಚರಿ ಶುರುವಾಗುತ್ತದೆ. ಏಳು ಗಂಟೆಯವರೆಗೂ ವರ್ಕೌಟ್ ಮಾಡಿ ಆಮೇಲೆ ತರಾತುರಿಯಲ್ಲಿ ಅಡುಗೆ ಮನೆಗೆ ಹೋಗುತ್ತಾರೆ. ಸ್ವಲ್ಪ ಹೊತ್ತಿಗೆ ಆಲೂ ಬೇಯುವ ಘಮ. ಮೊಟ್ಟೆಯ ಹಿತವಾದ ಪರಿಮಳ. ಅಕ್ಷರಶಃ ಎಲ್ಲ ಮನೆಯ ಅಮ್ಮಂದಿರ ಹಾಗೆ ಸನ್ನಿ ಅಡುಗೆ ಮನೆ ಸೇರಿಕೊಂಡು ಮಕ್ಕಳು, ಗಂಡನಿಗಾಗಿ ಅಡುಗೆ ಮಾಡುತ್ತಾರೆ. ಪುಟಾಣಿ ನಿಶಾ, ಇನ್ನೂ ಚಿಕ್ಕವರಾದ ನೋಹ್, ಆಶರ್ ಅಷ್ಟೊತ್ತಿಗೆ ಎದ್ದು ಅಪ್ಪನ ಡೇನಿಯಲ್ ಸಹಾಯದಿಂದ ಫ್ರೆಶ್ ಆಗಿ ಅಮ್ಮನ ಅಡುಗೆ ಆಗೋದನ್ನೇ ಕಾಯುತ್ತಿರುತ್ತಾರೆ. ಆಮೇಲೆ ಎಲ್ಲರಿಗೂ ತಿಂಡಿ ತಿನ್ನಿಸಿದಾಗ, ಅವರು ತಿಂಡಿ ತಿಂದಾಗ ನೆಮ್ಮದಿಯ ನಿಟ್ಟುಸಿರು. ಮಕ್ಕಳು ಹೊಟ್ಟೆ ತುಂಬ ತಿಂಡಿ ತಿಂದರೆ ಈಕೆಯ ಹೊಟ್ಟೆಯೂ ತುಂಬುತ್ತದೆ. ಆಮೇಲೆ ಮಕ್ಕಳನ್ನು ಶಾಲೆಗೆ ಹೊರಡಿಸಿ, ಸನ್ನಿ ಹಾಗೂ ಡೇನಿಯಲ್ ಕೆಲಸಕ್ಕೆ ಹೊರಡಲು ರೆಡಿಯಾಗುತ್ತಾರೆ.

ಸನ್ನಿ ಯಶಸ್ವಿ ದಾಂಪತ್ಯದ ಗುಟ್ಟಿದು
 

ಬಾಂಬೆಯಲ್ಲೇ ಇದ್ದರೆ ಮಕ್ಕಳನ್ನು ಸ್ಕೂಲ್‌ನಿಂದ ಕರೆತರಲು ಸ್ವತಃ ಸನ್ನಿ ಲಿಯೋನ್ ಅವರೇ ಹೋಗುತ್ತಾರೆ. ಕೆಲವೊಮ್ಮೆ ಈಕೆಯ ಪತಿ ಮಕ್ಕಳನ್ನು ಆಟ ಆಡಿಸುತ್ತ ಮನೆಗೆ ಬರೋದಿದೆ.
 

ಇವರ ಮನೆಯಲ್ಲಿ ಯಾವ ಧರ್ಮವನ್ನೂ ಆಚರಿಸುವುದಿಲ್ಲ. ಆದರೆ ಸನ್ನಿ ಲಿಯೋನ್‌ಗೆ ಅಧ್ಯಾತ್ಮದಲ್ಲಿ ಬಹಳ ನಂಬಿಕೆ. ಕರ್ಮ ಸಿದ್ಧಾಂತವನ್ನು ಅವರು ಬಹಳ ನಂಬುತ್ತಾರೆ. ಭಗವಂತನಲ್ಲಿ ಮೂವರು ಮಕ್ಕಳಿಗೆ ಒಳಿತನ್ನು ಮಾಡು ಎಂದು ಬೇಡಿಕೊಳ್ಳುತ್ತಾರೆ. ಸನ್ನಿ ನೀಲಿತಾರೆ ಅಂತ ಇಂದಿಗೂ ಅವಳನ್ನ ಲೇವಡಿ ಮಾಡುವ, ಕೇವಲವಾಗಿ ನೋಡುವ ಜನ ಬಹಳ ಮಂದಿ ಇದ್ದಾರೆ. ಆದರೆ ಈಕೆ ಅವೆಲ್ಲವನ್ನೂ ಮೀರಿ ಅಪ್ಪಟ ಅಮ್ಮನಾಗಿ ಬದುಕುತ್ತಿರುವುದು ಅಚ್ಚರಿ ಮೂಡಿಸುತ್ತದೆ.