Asianet Suvarna News Asianet Suvarna News

ಹಿಂದಿ ರಿಯಾಲಿಟಿ ಶೋನಲ್ಲಿ ಗೋಲ್ಡನ್ ಸ್ಟಾರ್ ಬಿರುದು ದಕ್ಕಿದ ಗುಟ್ಟು ಬಿಚ್ಚಿಟ್ಟ ನಟ ಗಣೇಶ್

ಗೋಲ್ಡನ್​ ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ಗಣೇಶ್​ ಅವರು ತಮಗೆ ಈ ಬಿರುದು ಹೇಗೆ ಬಂತು ಎಂಬ ಬಗ್ಗೆ ಕಪಿಲ್​ ಶರ್ಮಾ ಷೋನಲ್ಲಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

How Ganesh got Golden Star Title actor talking in Kapil Sharma show
Author
First Published Feb 18, 2023, 4:17 PM IST

ಹಿಂದಿಯಲ್ಲಿ ಕಪಿಲ್​ ಶರ್ಮಾ ಅವರು ನಡೆಸಿಕೊಡುವ ಪ್ರಸಿದ್ಧ ರಿಯಾಲಿಟಿ ಷೋ 'ದಿ ಕಪಿಲ್ ಶರ್ಮಾ ಷೋ'ನಲ್ಲಿ (The Kapil Sharma Show) ಈ ಹಿಂದೆ  ಸುದೀಪ್ ಭಾಗಿಯಾಗಿ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಅವರು ಈ ಹಿಂದೆ 'ದಬಾಂಗ್ 3' ಸಿನಿಮಾ ಸಮಯದಲ್ಲಿ ಈ ಷೋದಲ್ಲಿ ಭಾಗವಹಿಸಿದ್ದರು. ಈಗ ಕಪಿಲ್ ಶರ್ಮಾ ಅವರ ಷೋನಲ್ಲಿ  ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಭಾಗವಹಿಸಿದ್ದು ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಕಪಿಲ್​ ಶರ್ಮಾ ಅವರ ಜೊತೆ ಕೆಲ ಗಂಟೆಗಳನ್ನು ಕಳೆದ ನಂತರ ಗಣೇಶ್​ ಅವರು, 'ನನ್ನ ಇಷ್ಟದ ಕಪಿಲ್ ಶರ್ಮಾ ಷೋ'ನಲ್ಲಿ ಭಾಗಿಯಾಗಿರೋದು ಖುಷಿ ಕೊಟ್ಟಿದೆ. ಕಪಿಲ್ ಶರ್ಮಾ ಸರ್ ಅವರೇ ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದರು. ನಂತರ  ಕಪಿಲ್ ಅವರನ್ನು ಭೇಟಿ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅಷ್ಟಕ್ಕೂ ಈ ಷೋಗೆ ಗಣೇಶ್​ ಅವರು ಹೋಗಲು ಒಂದು ಕಾರಣವಿದೆ. ಅದೇನೆಂದರೆ,  ಗಣೇಶ್ ಇದೀಗ ಕ್ರಿಕೆಟ್‌ನಲ್ಲೂ ಬಿಜಿಯಾಗಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದ ಕೆಸಿಸಿ ಟೂರ್ನಮೆಂಟ್‌ನಲ್ಲಿ ಗಣೇಶ್ ಭಾಗವಹಿಸುತ್ತಿದ್ದಾರೆ. ಸಿಸಿಎಲ್ (CCL) ಪ್ರಚಾರದ ನಿಮಿತ್ತ ತಂಡಗಳ ಪ್ರತಿನಿಧಿಗಳು  ‘ದಿ ಕಪಿಲ್ ಶರ್ಮಾ ಷೋ’ನಲ್ಲಿ ಹಾಜರಾಗಿದ್ದರು. ದಿ ಕಪಿಲ್ ಶರ್ಮಾ ಷೋ’ನಲ್ಲಿ  ಗಣೇಶ್ ಜೊತೆಗೆ ಸೊಹೈಲ್ ಖಾನ್, ಮನೋಜ್ ತಿವಾರಿ, ಸೋನು ಸೂದ್, ರಾಜೀವ್, ಜೀವಾ ಮುಂತಾದವರು ಭಾಗವಹಿಸಿದ್ದರು. ಕರ್ನಾಟಕ ಬುಲ್ಡೋಜರ್ಸ್ (Karnagtaka Buldozer) ತಂಡದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇದರಲ್ಲಿ  ಪಾಲ್ಗೊಂಡಿದ್ದರು. ಇದೀಗ ಈ ಷೋನಲ್ಲಿ ಮಾತನಾಡಿರುವ ಕೆಲವು ತುಣುಕುಗಳು ವೈರಲ್ ಆಗಿವೆ. 'ದಿ ಕಪಿಲ್ ಶರ್ಮಾ ಷೋ'ನಲ್ಲಿ ಗೋಲ್ಡನ್ ಸ್ಟಾರ್ ಏನು ಹೇಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. 

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

ಇದರಲ್ಲಿ ಗಣೇಶ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಅವರಿಗೆ ‘ಗೋಲ್ಡನ್ ಸ್ಟಾರ್’ ಎಂಬ ಬಿರುದು ಬಂದದ್ದು ಹೇಗೆ ಎಂಬ ಬಗ್ಗೆ. ಈ ಪ್ರಶ್ನೆಗೆ ನಗುತ್ತಾ ಗಣೇಶ್​ ಉತ್ತರಿಸಿದ್ದಾರೆ. ಅದನ್ನು ಗಣೇಶ್​ ಅವರ ಮಾತಿನಲ್ಲಿಯೇ ಹೇಳುವುದಾದರೆ, '2003ರಲ್ಲಿ ನಾನು ಕರ್ನಾಟಕದಲ್ಲಿ ‘ಕಾಮಿಡಿ ಟೈಂ’ (Comedy Time) ಎಂಬ ಷೋ ಮಾಡುತ್ತಿದ್ದೆ. ಆ ಷೋ ಸೂಪರ್ ಹಿಟ್ ಆಗಿತ್ತು. ಸಿನಿಮಾಕ್ಕೆ ಬ್ರೇಕ್​ ಕೊಟ್ಟಿದ್ದು ಇದೇ ಷೋ ಎನ್ನಬಹುದೇನೊ.  ಬಳಿಕ ನಾನು ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟೆ. ನಾನು ಅಭಿನಯಿಸಿದ ಬಹುತೇಕ ಸಿನಿಮಾಗಳು ಮೆಗಾ ಹಿಟ್ ಆದವು. ಪರಿಣಾಮ, ನನಗೆ ‘ಗೋಲ್ಡನ್ ಸ್ಟಾರ್’ ಎಂಬ ಬಿರುದು ಸಿಕ್ಕಿತು’ ಎಂದಿದ್ದಾರೆ. ಇದೇ ವೇಳೆ ಅದೇ ನಗುವಿನ ಜೊತೆ ಮಾತನಾಡಿದ ಗಣೇಶ್​ ಅವರು, ಹಾಗೆ ನೋಡಿದರೆ ನಾನು  ಗೋಲ್ಡನ್ ಸ್ಟಾರ್ ಅಲ್ಲವೇ ಅಲ್ಲ. ನನಗೆ ಗೋಲ್ಡನ್ ಸ್ಟಾರ್ ಎಂಬ ಬಿರುದು ನೀಡಿದ ಅಭಿಮಾನಿಗಳು ಮತ್ತು ಜನತೆ ನಿಜವಾದ ‘ಗೋಲ್ಡನ್ ಸ್ಟಾರ್ಸ್’. ಎಲ್ಲರ ಪ್ರೀತಿಗೆ ನಾನು ಚಿರಋಣಿ’ ಎಂದಿದ್ದಾರೆ. 

ಇನ್ನು ಗಣೇಶ್​ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು 2006 ರಲ್ಲಿ ಬಿಡುಗಡೆಯಾದ ‘ಚೆಲ್ಲಾಟ’ (Chellata) ಚಿತ್ರದ ಮೂಲಕ ಗಣೇಶ್ ನಾಯಕ ನಟನಾದರು. ಗಣೇಶ್ ನಟನೆಯ ಬ್ಲಾಕ್ ಬಸ್ಟರ್ (BlockBuster) ಸಿನಿಮಾ ‘ಮುಂಗಾರು ಮಳೆ’ (Mungaru Male). ಬಾಕ್ಸ್ ಆಫೀಸ್‌ನಲ್ಲಿ ‘ಮುಂಗಾರು ಮಳೆ’ ಸಿನಿಮಾ ಹಣದ ಹೊಳೆಯನ್ನೇ ಹರಿಸಿತ್ತು. ಕನ್ನಡ ಚಿತ್ರರಂಗದಲ್ಲಿ ‘ಮುಂಗಾರು ಮಳೆ’ ಹೊಸ ಹೊಸ ದಾಖಲೆಗಳನ್ನೇ ನಿರ್ಮಿಸಿತ್ತು. ‘ಚೆಲುವಿನ ಚಿತ್ತಾರ’, ‘ಗಾಳಿಪಟ’, ‘ಮಳೆಯಲಿ ಜೊತೆಯಲಿ’ ಸಿನಿಮಾಗಳು ಕೂಡ ಹಿಟ್ ಆದವು. ಸದ್ಯ ಗಣೇಶ್​ ಅವರ 'ಬಾನ ದಾರಿಯಲ್ಲಿ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಈ ಚಿತ್ರದ ನಾಯಕಿಯರು. ರುಕ್ಮಿಣಿ ವಸಂತ್ ಅವರ ಪಾತ್ರ ತುಂಬ ಡಿಫರೆಂಟ್ ಆಗಿರಲಿದ್ದು ಭಾರೀ ಕುತೂಹಲ ಮೂಡಿಸಿದೆ.

‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಕುರಿತು ಹೇಳುವುದಾದರೆ, ಪ್ರದೀಪ್ ನಾಯಕ. ಟೀಮ್‌ನಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಕಾರ್ತಿಕ್ ಜಯರಾಂ, ರಾಜೀವ್, ಚಂದನ್ ಕುಮಾರ್, ಡಾರ್ಲಿಂಗ್ ಕೃಷ್ಣ, ನಿರೂಪ್ ಭಂಡಾರಿ, ನಂದಕಿಶೋರ್, ಸುನೀಲ್ ರಾವ್, ತ್ರಿವಿಕ್ರಮ ಮುಂತಾದವರಿದ್ದಾರೆ.

'ಕಾಂತಾರ'ದ ಅರಮನೆಗೆ ತಲೈವಾ ಭೇಟಿ: ಜೈಲರ್ ಸಿನಿಮಾದ ಶೂಟಿಂಗ್ ಆರಂಭ
 

Follow Us:
Download App:
  • android
  • ios