ಹಿರಿಯ ನಟ ನಾನಾ ಪಾಟೇಕರ್ ಅವರು ತಮ್ಮ 75ನೇ ವಯಸ್ಸಿನಲ್ಲಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕೇವಲ ನಟರಾಗಿರದೆ, 'ನಾಮ್ ಫೌಂಡೇಶನ್' ಮೂಲಕ ಮಹಾರಾಷ್ಟ್ರದ ಬರಪೀಡಿತ ರೈತರಿಗೆ ಅಪಾರ ನೆರವು ನೀಡಿದ್ದರು. ಅವರ ಈ ನಿಸ್ವಾರ್ಥ ಸಾಮಾಜಿಕ ಕಾರ್ಯಗಳಿಂದಾಗಿ ಅವರು ರೈತರ ಪಾಲಿಗೆ ಎಂದಿಗೂ ಅಮರ
NANA PATEKAR: ಹಿರಿಯ ನಟ, ನಟಸಾಮ್ರಾಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ನಂತರ ಅವರನ್ನು ತುರ್ತಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ನಾನಾ ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ಆಘಾತ ನೀಡಿದೆ.
ನಾನಾ ಪಾಟೇಕರ್ ನಟನಷ್ಟೇ ಅಲ್ಲ, 'ರೈತ ಮಿತ್ರ'
ಭಾರತೀಯ ಚಿತ್ರರಂಗದಲ್ಲಿ ನಾನಾ ಪಾಟೇಕರ್ ಅಮರ. ಭಾರತೀಯ ಚಿತ್ರರಂಗ ಅವರನ್ನ ಎಂದೂ ಮರೆಯಲಾಗದು. ಅವರು ನಟನಷ್ಟೇ ಅಲ್ಲದೆ ಅವರ ಸಾಮಾಜಿಕ ಕಾರ್ಯಗಳಿಂದಲೂ ಜನಮನ ಗೆದ್ದಿದ್ದರು. ಮಹಾರಾಷ್ಟ್ರದಲ್ಲಿ ಹಿಂದೆ ತೀವ್ರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಬರಗಾಲವನ್ನು ಎದುರಿಸಲು ರೈತರಿಗಾಗಿ 'ನಾಮ್ ಫೌಂಡೇಶನ್' ಸ್ಥಾಪಿಸಸುವ ಮೂಲಕ ರೈತರ ನೆರವಿಗೆ ನಿಂತವರು. ನಾನಾ ಪಾಟೇಕರ್ ಅವರ ಸಹಾಯ ಮಹಾರಾಷ್ಟ್ರದ ರೈತರು ಎಂದಿಗೂ ಮರೆಯಲು ಸಾಧ್ಯವಿಲ್ಲ.
ನಾಮ್ ಫೌಂಡೇಶನ್' ಎಂಬ ದತ್ತಿ ಸಂಸ್ಥೆ ಸ್ಥಾಪಿಸಿದರು
ನಾನಾ ಪಾಟೇಕರ್ ಒಬ್ಬ ಹಿರಿಯ ನಟ ಮಾತ್ರವಲ್ಲದೆ, ಸಾಮಾಜಿಕ ಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಹೊಂದಿದ್ದ ನಟರಾಗಿದ್ದರು. ನಾನಾ ಪಾಟೇಕರ್ ಅವರು ಸೆಪ್ಟೆಂಬರ್ 2015 ರಲ್ಲಿ ನಟ ಮಕರಂದ್ ಅನಸ್ಪುರೆ ಅವರೊಂದಿಗೆ ಸೇರಿ 'ನಾಮ್ ಫೌಂಡೇಶನ್' ಎಂಬ ದತ್ತಿ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಅಡಿಯಲ್ಲಿ, ಮಹಾರಾಷ್ಟ್ರದ ಬರ ಪೀಡಿತ ಪ್ರದೇಶಗಳ ರೈತರಿಗೆ ವಿಶೇಷವಾಗಿ ಮರಾಠವಾಡದಲ್ಲಿ ಆತ್ಮ೧ಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಹಾಯ ಮಾಡಲಾಯ್ತು. ನಟ ನಾನಾ ಪಾಟೇಕರ್ ಮತ್ತು ಮಕರಂದ್ ಅನಸ್ಪುರೆ ಅವರು ಸೆಪ್ಟೆಂಬರ್ 2015 ರಲ್ಲಿ 'ನಾಮ್ ಫೌಂಡೇಶನ್' ಅನ್ನು ಸ್ಥಾಪಿಸಿದರು. ಈ ಸಂಸ್ಥೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವೆಂದರೆ ಮಹಾರಾಷ್ಟ್ರ ರಾಜ್ಯದ ಬರ ಪೀಡಿತ ರೈತರಿಗೆ ನೆರವು ನೀಡುವುದಾಗಿತ್ತು. 'ನಾಮ್ ಫೌಂಡೇಶನ್' ಹೆಸರಿನಲ್ಲಿರುವ ಮೊದಲ ಅಕ್ಷರವನ್ನು ನಾನಾ ಪಾಟೇಕರ್ ಅವರ ಹೆಸರಿನಿಂದ ತೆಗೆದುಕೊಂಡರೆ, ಎರಡನೇ ಅಕ್ಷರವನ್ನು ಮಕರಂದ್ ಅನಸ್ಪುರೆ ಅವರ ಹೆಸರಿನಿಂದ ತೆಗೆದುಕೊಳ್ಳಲಾಗಿತ್ತು.
ನಾನಾ ಪಾಟೇಕರ್ ಅವರ NAAM ಫೌಂಡೇಶನ್ ಕಾರ್ಯಗಳು
NAAM ಫೌಂಡೇಶನ್ ಸೆಪ್ಟೆಂಬರ್ 2015 ರಲ್ಲಿ ನಾನಾ ಪಾಟೇಕರ್ ಮತ್ತು ಮಕರಂದ್ ಅನಸ್ಪುರೆ ಅವರು ಪ್ರಾರಂಭಿಸಿದರು. ಫೌಂಡೇಶನ್ ಮೂಲಕ ಮಹಾರಾಷ್ಟ್ರದಲ್ಲಿನ ತೀವ್ರ ಬರಗಾಲ , ಬರಗಾಲದ ತೀವ್ರತೆ, ರೈತರ ನೋವು, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. NAAM ಫೌಂಡೇಶನ್ ಬರ ಪೀಡಿತ ಹಳ್ಳಿಗಳ ಮುಖ್ಯ ಸಮಸ್ಯೆಗಳು, ಹೆಚ್ಚುತ್ತಿರುವ ರೈತರ ಆತ್ಮ೧ಹತ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿತು. ಇದರಲ್ಲಿ ಮುಖ್ಯವಾಗಿ ರೈತರಿಗೆ ಮಾರ್ಗದರ್ಶನ ನೀಡುವುದು, ಸಂಗ್ರಹವಾಗಿರುವ ನೀರು ಮತ್ತು ಅಂತರ್ಜಲದ ಬಳಕೆ, ಹಳೆಯ ಕಾಲುವೆಗಳು, ಸ್ಥಗಿತಗೊಂಡ ನೀರಿನ ಯೋಜನೆಗಳನ್ನು ಪುನಃಸ್ಥಾಪಿಸುವುದಕ್ಕೆ ಶ್ರಮಿಸಿದರು. ವಿಶೇಷವೆಂದರೆ ಅನೇಕ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಗ್ರಾಮಸ್ಥರು, ರೈತರಿಗೆ ಗೌರವದಿಂದ ಬದುಕಲು ನಾಮ್ ಫೌಂಡೇಶನ್ ಮೂಲಕ ಸಹಾಯ ಮಾಡಿದರು. ರೈತರ ದುಃಸ್ಥಿತಿ, ಕಷ್ಟಗಳನ್ನು ತೊಡೆದು ಹಾಕುವ ಮೂಲಕ ಮಾನವೀಯ ಬೆಂಬಲ ನೀಡುವ ಮೂಲಕ NAAM ಕೇವಲ ಒಂದು ಸಂಘಟನೆಯಾಗಿ ಉಳಿಯದೆ ಒಂದು ಚಳುವಳಿಯಾಗಿ ಹೊರಹೊಮ್ಮಿತು. NAAM ಫೌಂಡೇಶನ್‌ನ ಗುರಿ ವಂಚಿತ ಜನರ ಮತ್ತು ಬರ ಪೀಡಿತ ಹಳ್ಳಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ದೇಶಾದ್ಯಂತ ಜನರ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಸೃಷ್ಟಿಸುವುದು. ಇಂಥ ಮಾನವೀಯ ಗುಣಗಳನ್ನು ಹೊಂದಿದ್ದ ನಟಸಾಮ್ರಾಟ ನಾನಾ ಪಾಟೇಕರ್ ಅವರನ್ನು ರೈತರು ಮರೆಯಲು ಸಾಧ್ಯವೇ?


