ಜೈಲು ಸೇರಿದ ಬೆನ್ನಲ್ಲೇ ಚಿತ್ರ ನಿರ್ಮಾಪಕನಿಗೆ ಬೋನ್ ಮ್ಯಾರೋ ಕ್ಯಾನ್ಸರ್, ಚಿಕಿತ್ಸೆ ಆರಂಭ!

ಬಲಾತ್ಕಾರ ಆರೋಪದಡಿ ಜೈಲು ಸೇರಿರುವ ಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್‌ಗೆ ಇದೀಗ ಸಂಕಷ್ಟ ಹೆಚ್ಚಾಗಿದೆ. ನಿರ್ಮಾಪಕನಿಗೆ ಅಪರೂಪದ ಬೋನ್ ಮ್ಯಾರೋ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಚಿಕಿತ್ಸೆ ಆರಂಭಗೊಂಡಿದೆ.

Hollywood film producer Harvey Weinstein diagnosed with bone marrow cancer ckm

ನ್ಯೂಯಾರ್ಕ್(ಅ.22) ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್ ಸಂಕಷ್ಟ ಹೆಚ್ಚಾಗಿದೆ. ಬಲಾತ್ಕಾರ ಆರೋಪದಡಿ ಜೈಲು ಸೇರಿರುವ 72 ವರ್ಷದ ಹಾರ್ವೆ ವೈನ್‌ಸ್ಟೈನ್ ಬೋನ್ ಮ್ಯಾರೋ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ನ್ಯೂಯಾರ್ಕ್ ಜೈಲಿನಲ್ಲಿರುವ ಹಾರ್ವೆಗೆ ಚಿಕಿತ್ಸೆ ಆರಂಭಗೊಂಡಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಈಗಾಗಲೇ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಾರ್ವೆ ಇದೀಗ ಕ್ಯಾನ್ಸರ್ ಮಾರಕ ಕಾಯಿಲಿಗೆ ತುತ್ತಾಗಿದ್ದಾರೆ.

2020ರಲ್ಲಿ ಹಾರ್ವೆ ಮೇಲೆ ಮೀಟೂ ಆರೋಪ ಕೇಳಿಬಂದಿತ್ತು. ಬಲಾತ್ಕಾರ ಆರೋಪಕ್ಕೆ ಕೆಲ ಸಾಕ್ಷ್ಯಗಳು ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಹಾರ್ವೆಯನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದರು. ಜೈಲು ಸೇರಿದ ಹಾರ್ವೆ ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದರು. ಆದರೆ ಸಾಕ್ಷ್ಯಗಳ ಕಾರಣ ಹಾರ್ವೆಗೆ ಜಾಮೀನು ನಿರಾಕರಿಸಲಾಗಿದೆ. ಇತ್ತ ಕೋವಿಡ್ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಹಾರ್ವೆಗೆ ಕಾಡಿತ್ತು.

3 ಬಾರಿ ಡಿವೋರ್ಸ್​: ಗಂಡಸರ ಸಹವಾಸ ಸಾಕೆನಿಸಿ ತನ್ನನ್ನು ತಾನೇ ಮದ್ವೆಯಾದ ನಟಿ! ಟರ್ಕ್​ ದ್ವೀಪದಲ್ಲಿ ಹನಿಮೂನ್​

ಈ ವರ್ಷದ ಆರಂಭದಲ್ಲಿ ಹಾರ್ವೆ ಆರೋಗ್ಯ ಕ್ಷೀಣಿಸಿದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದರೂ, ಈ ಚಿಕಿತ್ಸೆ ಈಗಲೂ ಮುಂದುವರಿಯುತ್ತಿದೆ. ಮಧುಮೇಹ, ಬಿಪಿ, ಹೃದಯ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ವೆಗೆ ಚಿಕಿತ್ಸೆ ಹಾಗೂ ಔಷಧಿಗಳು ಮುಂದುವರಿದಿದೆ.

ಇದೀಗ ಅಸ್ಥಿಮಜ್ಜೆ ಕ್ಯಾನ್ಸರ್ ಪತ್ತೆಯಾಗಿದೆ. ನ್ಯೂಯಾರ್ಕ್ ಜೈಲಿನಲ್ಲಿರುವ ಹಾರ್ವೆಗೆ ಕ್ಯಾನ್ಸರ್ ಕುರಿತು ಚಿಕಿತ್ಸೆ ಆರಂಭಗೊಂಡಿದೆ. ಈಗಾಗಲೇ ಹಲವು ಔಷಧಗಳ ಬಲದಲ್ಲಿರುವ ಹಾರ್ವೆ ದೇಹ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಅನ್ನೋದನ್ನು ತಜ್ಞ ವೈದ್ಯರು ತೀವ್ರ ನಿಘಾವಹಿಸಿದ್ದಾರೆ. ಇದೀಗ ಬಲಾತ್ಕಾರ ಆರೋಪಿ ಹಾರ್ವೆ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದಾರೆ. 

ಇತ್ತ ಹಾರ್ವೆ ಜಾಮೀನು ಅರ್ಜಿ ವಿಚಾರಣೆ ವೇಳೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಾಕ್ಷ್ಯಗಳು ಹಾರ್ವೆ ವಿರುದ್ಧವಾಗಿದ್ದ ಕಾರಣ ಜಾಮೀನು ನಿರಾಕರಿಸಲಾಗಿತ್ತು. ಜಾಂಗೋ ಅನ್‌ಚೈನ್ಡ್, ಶೇಕ್ಸ್‌ಪಿಯರ್ ಇನ್ ಲವ್, ಗುಡ್ ವಿಲ್ ಹಂಟಿಂಗ್, ಇಂಗ್ಲೋರಿಯಸ್ ಬ್ಲಾಸ್ಟರ್ಡ್ಸ್ ಸೇರಿದಂತೆ ಬ್ಲಾಕ್‌ಬಸ್ಟರ್ ಹಾಲಿವುಡ್ ಚಿತ್ರ ನಿರ್ಮಿಸಿದ ಖ್ಯಾತಿಗೆ ಹಾರ್ವೆ ಪಾತ್ರರಾಗಿದ್ದಾರೆ.  

ಪ್ರಿಯಾಂಕಾ ಚೋಪ್ರಾ ಬುಟ್ಟಿಗೆ ಹಾಲಿವುಡ್ ಹುಡುಗ ನಿಕ್ ಜೋನಾಸ್‌ ಜಾರಿ ಬಿದ್ದಿದ್ದು ಹೇಗೆ?
 

Latest Videos
Follow Us:
Download App:
  • android
  • ios