Asianet Suvarna News Asianet Suvarna News

Bigg Boss 15: ಸಾಯುತ್ತೀನಿ ಎಂದು ಚಾಕುವಿನಿಂದ ಕೈ ಕೊಯ್ದುಕೊಳ್ಳಲು ಯತ್ನಿಸಿದ ಅಫ್ಸಾನಾ?

ಮೊದಲ ಬಾರಿ ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಮಾತುಕತೆ ಹಾಗೂ ಜಗಳ ನಡೆಯುತ್ತಿದೆ. ಹೊರ ಬರುವಂತೆ ಆದೇಶ ನೀಡಿದ್ದರೂ ಕೇಳದಂತಾಗಿದ್ದಾರೆ ಸ್ಪರ್ಧಿಗಳು....

Hindi bigg boss 15 afsana khan attempted to physically harm herself with a kinfe vcs
Author
Bangalore, First Published Nov 13, 2021, 3:09 PM IST
  • Facebook
  • Twitter
  • Whatsapp

ಹಿಂದಿ ಬಿಗ್ ಬಾಸ್ ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಸೀಸನ್ 1ರಿಂದ 10ರ ವರೆಗೂ ಭಾಗವಹಿಸಿದ ಸ್ಪರ್ಧಿಗಳು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡರು ಆದರೆ ಸೀಸನ್ 11 ರಿಂದ ಪ್ರತಿಯೊಬ್ಬರು ಲೈಮ್‌ ಲೈಟ್‌ನಲ್ಲಿರಬೇಕು ಎಂದು ಸದಾ ಜಗಳ, ಲವ್, ಕಿಸ್, ಅಫೇರ್‌ನಲ್ಲಿ ಮುಳುಗಿ ಹೋದರು. ಬಿಬಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಮೌನಿಗಳಾಗಿ ಅವಕಾಶ ವಂಚಿತರಾದರು.

ಸುಮಾರು ಒಂದು ತಿಂಗಳಿನಿಂದ ಪ್ರಸಾರವಾಗುತ್ತಿರುವ ಸೀಸನ್ 15 ಸ್ಪರ್ಧಿಗಳ ಮನಸ್ಥಿತಿ ಮಾತ್ರವಲ್ಲದೆ ವೀಕ್ಷಕರಿಗೆ ಹಿಂಸೆ ಆಗುತ್ತಿದೆ. ವೀಕೆಂಡ್‌ನಲ್ಲಿ ಸಲ್ಮಾನ್ ಖಾನ್ ಎಷ್ಟೇ ಬುದ್ಧಿ ಮಾತು ಹೇಳಿದರೂ ಕೇಳದೆ ಮಿತಿ ಮೀರಿದ ಮಾತುಗಳಿಂದ ಚಿಕ್ಕ ಮಕ್ಕಳು ಶೋ ನೋಡದಂತೆ ಮಾಡಿದ್ದಾರೆ. 

Hindi bigg boss 15 afsana khan attempted to physically harm herself with a kinfe vcs

ಕೆಲವು ದಿನಗಳಿಂದ ಅಫ್ಸಾನಾ ಕೂಡ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಾಜೀವ್ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪ ಮಾಡಿದ್ದಾರೆ. ರಾಜೀವ್‌ರನ್ನು ವಾಶಿಂಗ್ ರೂಮ್‌ವರೆಗೂ ಹಿಂಬಾಲಿಸಿಕೊಂಡು ಮಾತನಾಡಿದ್ದಾರೆ.  ಅಫ್ಸಾನಾ ಮಾಡುತ್ತಿರುವುದು ತಪ್ಪು ಎಂದು ಜಯ್ ಭಾನುಶಾಲಿ ಮತ್ತು ಪ್ರತೀಕ್ ಸೆಹಜಪಾಲ್ ಹೇಳಿದರೂ ಕೇಳದೆ ಅಸಭ್ಯವಾಗಿ ಹಾಗೂ ಅಶ್ಲೀಲ ಮಾತುಗಳನ್ನಾಡಿದ್ದಾರೆ. 

ಮಗನ ವಿಭಿನ್ನ ಫೋಟೋಶೂಟ್‌ಗಳನ್ನು ಹಂಚಿಕೊಂಡ ನಟಿ ನಯನಾ ಪುಟ್ಟಸ್ವಾಮಿ!

ಅಫ್ಸಾನಾ ರಾಜೀವ್‌ ಮಾತ್ರವಲ್ಲದೆ ಪ್ರತಿಯೊಂದಕ್ಕೂ ಶಮಿತಾ ಶೆಟ್ಟಿ ಕಾರಣ ಎಂದು ಹೇಳುತ್ತಿದ್ದಾರೆ. ಅಫ್ಸಾನಾಗೆ ಹುಚ್ಚು ಹಿಡಿದಿದೆ ಆಕೆ ಫೇಕ್ ಆಗಿ ವರ್ತಿಸುತ್ತಿದ್ದಾಳೆ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ ಅದಕ್ಕೂ ಅಫ್ಸಾನಾ ಜಗಳ ಆಡಿದ್ದಾರೆ. ಇವರಿಬ್ಬರ ನಡುವೆ ಮಾತು ಮಿತಿ ಮೀರಿದಾಗ ಅಫ್ಸಾನ ಚಾಕುವಿನಿಂದ ಕೈ ಕೂಯ್ದುಕೊಳ್ಳಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ. ಬಿಬಿ ನೀಡಿರುವ ನೀರಿನ ಬಾಟಲಿ, ಕುರ್ಚಿ ಹಾಗೂ ಇನ್ನಿತರ ಪ್ರಾರ್ಪಟಿಗಳನ್ನು ಕೂಡ ಎಸೆದಿದ್ದಾರೆ. ಇದರಿಂದ ಮನೆಯಲ್ಲಿರುವ ಇತರ ಸ್ಪರ್ಧಿಗಳು ಹೆದರಿಕೊಂಡಿದ್ದಾರೆ.

Urfi Javed; ಬೋಲ್ಡ್ ಪೋಟೋ ಹಾಕಿ ಫೆವರೇಟ್ ಜಾಗ ಕೇಳಿದ ಬೆಡಗಿ

ಬಿಗ್ ಬಾಸ್ ಮನೆಯಲ್ಲಿ ನಾನಿರಬೇಕು ಇಲ್ಲದಿದ್ದರೆ ಶಮಿತಾ ಇರಬೇಕು. ನಾನು ಮನೆಯಿಂದ ಹೋದರೆ ನನ್ನ ಜೊತೆ ರಾಜೀವ್ ಕೂಡ ಬರಬೇಕು ಎಂದು ಅಫ್ಸಾನಾ ಬಿಗ್ ಬಾಸ್‌ಗೆ ಧಮ್ಕಿ ಹಾಕಿದ್ದಾರೆ. ಸ್ವತಃ ಬಿಗ್ ಬಾಸ್ ವೈದ್ಯರನ್ನು ಕರೆಸಿ ಅಫ್ಸಾನಾರನ್ನು ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ ಆದರೆ ಯಾವುದಕ್ಕೂ ತಲೆ ಕೊಡದೆ ವರ್ತಿಸುತ್ತಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ತಂದಿದೆ.

Follow Us:
Download App:
  • android
  • ios