Asianet Suvarna News Asianet Suvarna News

ಹಿಜಾಬ್ ಬೇಕೆಂದು ಸಿನಿಮಾ ಬಿಟ್ಟ ನಟಿ; ಅವಮಾನ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಸನಾ ಖಾನ್

 2019ರಲ್ಲಿ ಹಿಜಾಬ್‌ ಬೇಕೆಂದು ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ ಸನಾ ಖಾನ್ ಪತಿ ಜೊತೆ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಪದೇ ಪದೇ ಟಾರ್ಗೆಟ್‌ ಮಾಡುತ್ತಿರುವವರಿಗೆ ಉತ್ತರ ಕೊಟ್ಟಿದ್ದಾರೆ....

Hindi actress Sana Khan gets emotional thinking about quitting showbiz for hijab vcs
Author
First Published Jan 16, 2023, 2:14 PM IST

ಬಿಗ್ ಬಾಸ್ ಫೇಮ್ ಸನಾ ಖಾನ್ 2020ರಲ್ಲಿ ಸಿನಿಮಾರಂಗಕ್ಕೆ ಗುಡ್‌ ಬೈ ಹೇಳಿ ಮನೆ ಮಠ ಜೀವನ ಅಂತ ಮತ್ತೊಂದು ಹಾದಿ ಹಿಡಿದರು. 'ಮಾನವೀಯತೆಗೆ ಸೇವೆ ಮಾಡಿ ಮತ್ತು ನನ್ನ ಸೃಷ್ಟಿಕರ್ತನ ಆದೇಶವನ್ನು ಅನುಸರಿಸಿ' ಎಂದು ಹೇಳುವ ಮೂಲಕ ಬಣ್ಣದ ಜಗತ್ತಿನಿಂದ ಹೊರ ನಡೆದರು. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸನಾ ಖಾನ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಹಿಜಾಬ್ ಧರಿಸಲು ಚಿತ್ರರಂಗ ಬಿಟ್ಟಿದ್ದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

'ನನ್ನ ಹಳೆ ಜೀವನದಲ್ಲಿ ನನ್ನ ಬಳಿ ಹೆಸರಿತ್ತು, ಫೇಮ್‌ ಇತ್ತು ಮತ್ತು ಹಣವಿತ್ತು. ಏನು ಬೇಕಿದ್ದರೂ ಹೇಗೆ ಬೇಕಿದ್ದರೂ ನಾನು ಜೀವನ ರೂಪಿಸಿಕೊಳ್ಳುವ ಅವಕಾಶವಿತ್ತು ಆದರೆ ಒಂದು ವಿಚಾರ ಮಿಸ್ ಮಾಡಿಕೊಂಡಿದ್ದು ಅಂದ್ರೆ ಮನಸ್ಸಿನ ನೆಮ್ಮದಿ. ಯಾಕೆ ನಾನು ಖುಷಿಯಾಗಿಲ್ಲ ಎಂದು ಯೋಚನೆ ಮಾಡಿದಾಗ ಸಿಕ್ಕ ಉತ್ತರವೇ ಇದು. ಈ ಸಮಯ ಎದುರಿಸಲು ತುಂಬಾ ಕಷ್ಟ ಆಗುತ್ತಿತ್ತು ಆದರೆ ಖಿನ್ನತೆಗೆ ಜಾರಿದ ದಿನಗಳಿದೆ. ಆ ನಂತರ ದೇವರೇ ನನಗೆ ಸಣ್ಣ ಸನ್ನೆ ಕೊಟ್ಟರು ಅದನ್ನು ಪಾಲಿಸುತ್ತಿರುವೆ' ಎಂದು ಸನಾ ಖಾನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ

ಬದಲಾವಣೆ:

'2019ರಲ್ಲಿ ರಂಜಾನ್ ಸಮಯದಲ್ಲಿ ನನ್ನ ಕನಸಿನಲ್ಲಿ ಪದೇ ಪದೇ ಸಮಾಧಿ ಬರುತ್ತಿತ್ತು. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತೇನೆ ಆ ಸಮಾಧಿಯಲ್ಲಿ ನಾನೇ ಮಲಗಿರುತ್ತಿದ್ದೆ. ಖಾಲಿ ಸಮಾಧಿ ನೋಡಿದ್ದರೂ ಅದರಲ್ಲೂ ನಾನೇ ಇರುತ್ತಿದ್ದೆ. ಇದೆಲ್ಲಾ ಆ ದೇವರೆ ನನಗೆ ಕೊಡುತ್ತಿರುವ ಸನ್ನೆಗಳು ಎಂದು ನಾನು ಬದಲಾಗಿರುವೆ. ಈ ವಿಚಾರಗಳ ಬಗ್ಗೆ ನನ್ನಲ್ಲಿ ತುಂಬಾ ಆತಂಕಗಳಿತ್ತು. ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳು ನನಗೆ ತಿಳಿದು ಬರುತ್ತಿತ್ತು ನಾನೇ ಗಮನಿಸುತ್ತಿದ್ದೆ. ಅದೆಷ್ಟೋ ಯೂಟ್ಯೂಬ್‌ ಪ್ರೇರಣೆ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಒಂದು ರಾತ್ರಿ ತುಂಬಾ ಸುಂದರವಾಗಿರುವ ಪುಸ್ತಕವನ್ನು ಓದುತ್ತಿದ್ದೆ ಇದೆಲ್ಲಾ ಸೇರಿಕೊಂಡು ನನ್ನಲ್ಲಿ ಬದಲಾವಣೆ ಆಗಿದ್ದು' ಎಂದಿದ್ದಾರೆ.

Hindi actress Sana Khan gets emotional thinking about quitting showbiz for hijab vcs

ಹಿಜಾಬ್: 

'ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು... you don’t want your last day to be your first day of wearing hijab ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ' ಎಂದು ಸನಾ ಹೇಳಿದ್ದಾರೆ.

24K ಚಿನ್ನದ ಕಾಫಿಯನ್ನು ನೋಡಿದ್ದೀರಾ ? ಇದ್ರ ಬೆಲೆ ಭರ್ತಿ 3190 ರೂ. !

ಬಣ್ಣದ ಪ್ರಪಂಚದಿಂದ ದೂರ ಉಳಿದ ಮೇಲೆ ಸನಾ ಖಾನ್ ಬ್ರೇಕಪ್‌ ಎದುರಿಸುತ್ತಾರೆ. ಆನಂತರ ಅನಸ್ ಸೈಯದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬ್ಯೂಟಿ ಪ್ರಾಡೆಕ್ಟ್‌ ಮಾಲೀಕರು ಅನಸ್ ಸೈಯದ್. 
 

Follow Us:
Download App:
  • android
  • ios