ಭಾರಿ ಮಳೆಗೆ ಕೊಚ್ಚಿ ಹೋದ ಹೆದ್ದಾರಿ: ಚೀನಾಗೆ ಹೊಂದಿಕೊಂಡಿರುವ ಭಾರತದ ಗ್ರಾಮಕ್ಕೆ ಸಂಪರ್ಕ ಕಡಿತ
ಅರುಣಾಚಲ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪರಿಣಾಮ ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಗ್ರಾಮವೊಂದಕ್ಕೆ ಸಂಪರ್ಕ ಕಡಿತಗೊಂಡಿದೆ.
ಗುವಾಹಟಿ: ಅರುಣಾಚಲ ಪ್ರದೇಶದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪರಿಣಾಮ ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಗ್ರಾಮವೊಂದಕ್ಕೆ ಸಂಪರ್ಕ ಕಡಿತಗೊಂಡಿದೆ. ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳಗೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಮಳೆಯಿಂದ ಹೆದ್ದಾರಿ ಕೊಚ್ಚಿ ಹೋಗಿರುವುದರಿಂದ ದಿಬಾಂಗ್ ಕಣಿವೆಯೊಂದಿಗೆ ಸಂಪರ್ಕ ಕಡಿತವಾಗಿದೆ.
ದಿಬಾಂಗ್ ಜಿಲ್ಲೆಯೂ ಭಾರಿ ಮಳೆಗೆ ಸಾಕ್ಷಿಯಾಗಿದ್ದು, ಹುನ್ಲಿ ಹಾಗೂ ಅನಿನಿ ನಡುವೆ ಬರುವ ರಾಷ್ಟ್ರೀಯ ಹೆದ್ದಾರಿ 313ರಲ್ಲಿ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಕೊಚ್ಚಿ ಹೋಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೆದ್ದಾರಿಯ ಒಂದು ಭಾಗವೇ ಕಾಣೆಯಾಗಿರುವುದನ್ನು ತೋರಿಸುತ್ತಿವೆ. ಇದರಿಂದಾಗಿ ವಾಹನಗಳು ಇನ್ನೊಂದು ಬದಿಗೆ ಸಾಗಲಾಗದೇ ನಿಂತಿವೆ. ಈ ಹೆದ್ದಾರಿ ಚೀನಾ ಗಡಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದು, ಸ್ಥಳೀಯ ಜನರ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಇಂತಹ ಹೆದ್ದಾರಿ ಈಗ ಕುಸಿತಗೊಂಡಿರುವುದರಿಂದ ಸ್ಥಳೀಯರು ಹಾಗೂ ಭದ್ರತಾ ಪಡೆ ಇಬ್ಬರು ತೊಂದರೆಗೊಳಗಾಗುವಂತಾಗಿದೆ.
ಅರುಣಾಚಲದ 30 ಗ್ರಾಮ ಮರುನಾಮಕರಣ ಮಾಡಿ ತನ್ನದೆಂದು ಹೇಳಿದ ಚೀನಾಗೆ ಅಮೆರಿಕ ವಾರ್ನಿಂಗ್!
ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಹೆದ್ದಾರಿಯ ಹಾನಿಗೊಳಗಾದ ರಸ್ತೆಯನ್ನು ಸರಿಪಡಿಸಲು ಸಂಪನ್ಮೂಲಗಳನ್ನು ಸಂಗ್ರಹಿಸಿದೆ. ಸದ್ಯಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗೆ ಈಗ ಅಲ್ಲಿ ತೊಂದರೆ ಉಂಟಾಗಿಲ್ಲ, ರಾಜ್ಯ ಸರ್ಕಾರವೂ ಪ್ರಯಾಣಿಕರಿಗೆ ಸಲಹಾ ಸುತ್ತೋಲೆಯನ್ನು ಹೊರಡಿಸಿದ್ದು, ಈ ರಸ್ತೆಯ ಮರು ನಿರ್ಮಾಣಕ್ಕೆ ಕನಿಷ್ಠ 3 ದಿನಗಳು ಹಿಡಿಯಲಿವೆ ಎಂದು ಹೇಳಿದೆ.
ಘಟನೆ ಬಗ್ಗೆ ಅರುಣಾಚಲ ಸಿಎಂ ಪೆಮಾ ಖಂಡು ಬೇಸರ ವ್ಯಕ್ತಪಡಿಸಿದ್ದು, ಹುನ್ಲಿ ಮತ್ತು ಅನಿನಿ ನಡುವೆ ಹೆದ್ದಾರಿ ಕುಸಿದು ತೊಂದರೆ ಆಗಿದ್ದು ಬೇಸರವಾಗಿದೆ.ಈ ರಸ್ತೆಯು ದಿಬಾಂಗ್ ಕಣಿವೆಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಕಾರಣ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್, ಭಾರತದ 30 ಗ್ರಾಮ ತನ್ನದೆಂದು ಪಟ್ಟಿ ಬಿಡುಗಡೆ !