ಈ ಫಿಲಂನಲ್ಲಿ ಹೀರೋಯಿನ್ 200 ಕಿಲೋ ವಜ್ರಾಭರಣ ಧರಿಸಿ ಓಡಾಡಿದ್ದಳು ಮತ್ತು ಅವುಗಳನ್ನು ಕಾಯಲು 50 ಗಾರ್ಡ್‌ಗಳನ್ನು ಇಡಲಾಗಿತ್ತು! ಈ ಐತಿಹಾಸಿಕ ಚಿತ್ರ ಬಿಡುಗಡೆಯಾಗಿ 17 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಆಸ್ಕರ್ ಪ್ರಶಸ್ತಿ ಸಂಘಟಕರು ಮಾರ್ಚ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಅದು ಯಾವುದಂತ ಇಲ್ಲಿ ತಿಳಿಯಿರಿ.
ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಅಭಿನಯದ ಐತಿಹಾಸಿಕ ಚಿತ್ರ 'ಜೋಧಾ ಅಕ್ಬರ್' ಬಿಡುಗಡೆಯಾಗಿ ಇಂದಿಗೆ 17 ವರ್ಷಗಳಾಗಿವೆ. ಈಗ ಈ ಫಿಲಂ ಅನ್ನು ಮತ್ತೊಮ್ಮೆ ನೆನೆಯುವ ಸಂದರ್ಭ ಬಂದಿದೆ. ಈ ಸಂದರ್ಭದಲ್ಲಿ, ಆಸ್ಕರ್ ಪ್ರಶಸ್ತಿ ಸಂಘಟಕರು 'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' ಮಾರ್ಚ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ ಸಂಬಂಧಪಟ್ಟ ಕೆಲವು ವಿಶೇಷಗಳನ್ನು ನೆನೆಯಬಹುದು.
ಅಶುತೋಷ್ ಗೋವಾರಿಕರ್ ನಿರ್ದೇಶನದ 'ಜೋಧಾ ಅಕ್ಬರ್' ಚಿತ್ರವು ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ರಜಪೂತ ರಾಜಕುಮಾರಿ ಜೋಧಾ ಬಾಯಿಯ ಸಂಬಂಧದ ಕಥೆಯನ್ನು ತೆರೆಯ ಮೇಲೆ ಸುಂದರವಾಗಿ ಚಿತ್ರಿಸಿದೆ. ಈ ಫಿಲಂ 2008ರಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಯಿತು. ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಗೋವಾರಿಕರ್ ಅವರ ಅದ್ಭುತ ಕಥೆ 'ಜೋಧಾ ಅಕ್ಬರ್' ಅನ್ನು ಮರೆಯಲಾಗದ ಸಿನಿಮೀಯ ಅನುಭವವನ್ನಾಗಿ ಮಾಡಿದೆ.
ಜೋಧಾ ಅಕ್ಬರ್ ರಜಪೂತ ರಾಜಕುಮಾರಿಯ ಜೀವನದ ಸುತ್ತ ಸುತ್ತುತ್ತದೆ. ರಜಪೂತ ರಾಜಕುಮಾರಿ ಜೋಧಾ ತನ್ನ ರಾಜ್ಯದ ಯೋಗಕ್ಷೇಮಕ್ಕಾಗಿ ಮೊಘಲ್ ಚಕ್ರವರ್ತಿಯನ್ನು ಮದುವೆಯಾಗುತ್ತಾಳೆ. ಆದರೆ ಅವಳ ಸ್ವಂತ ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸುತ್ತಾಳೆ. ಚಕ್ರವರ್ತಿ ಅಂತಿಮವಾಗಿ ತನ್ನ ಪ್ರೀತಿ ಮತ್ತು ವಾತ್ಸಲ್ಯದಿಂದ ಅವಳನ್ನು ಗೆಲ್ಲುತ್ತಾನೆ. ಜೋಧಾ ಅಕ್ಬರ್ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು. ಇಲಾ ಅರುಣ್, ಸೋನು ಸೂದ್, ಪೂನಂ ಸಿನ್ಹಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರರೆ. ಅಂದಾಜು 40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ 107.78 ಕೋಟಿ ರೂ.
ಚಿತ್ರದಲ್ಲಿ ರಾಣಿ ಜೋಧಾ ಪಾತ್ರವನ್ನು ನಿರ್ವಹಿಸಿದ ಐಶ್ವರ್ಯಾ, ಗೋವಾರಿಕರ್ ನಿರ್ದೇಶನದಂತೆ ನಿಜವಾದ ಚಿನ್ನದ ಆಭರಣವನ್ನು ಧರಿಸಿದ್ದರಂತೆ. ಈ ಸೊಗಸಾದ ಆಭರಣಗಳು ಮೊಗಲ್ ಕಾಲದ ವಿನ್ಯಾಸವನ್ನು ಹೊಂದಿದ್ದವು. ಐಶ್ವರ್ಯ ಅವರ ಲುಕ್‌ಗೆ ಈ ಜ್ಯುವೆಲ್ಲರಿ ಅದ್ಭುತ ಚೆಲುವನ್ನು ಸೇರಿಸಿತು. ಪಾತ್ರವನ್ನು ಅಧಿಕೃತ ರೀತಿಯಲ್ಲಿ ಜೀವಂತಗೊಳಿಸಿದವು. ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಚಿತ್ರಕ್ಕಾಗಿ ಒಟ್ಟಾರೆ ಶೂಟಿಂಗ್ ಅವಧಿಯಲ್ಲಿ 200 ಕೆಜಿ ಚಿನ್ನವನ್ನು ಧರಿಸಿದ್ದರು. ಈ ರಾಯಲ್ ಆಭರಣದ ವಿನ್ಯಾಸಕ್ಕಾಗಿ ಸುಮಾರು 70 ಕುಶಲಕರ್ಮಿಗಳನ್ನು ನೇಮಿಸಿಕೊಳ್ಳಲಾಗಿತ್ತು. ನಿಜವಾದ ವಜ್ರ ಹವಳ ಮುತ್ತುಗಳನ್ನು ಹುದುಗಿಸಿದ ಈ ಆಭರಣಗಳ ಮೌಲ್ಯ ಕೋಟಿಗಟ್ಟಲೆ ಇತ್ತಂತೆ. ಈ ಆಭರಣಗಳ ಸುರಕ್ಷತೆಯನ್ನು ನೋಡಿಕೊಳ್ಳಲು 50 ಗಾರ್ಡ್‌ಗಳನ್ನು ನೇಮಿಸಲಾಗಿತ್ತು!
ಚಿತ್ರದ ಒಂದು ನಿರ್ದಿಷ್ಟ ದೃಶ್ಯಕ್ಕಾಗಿ 100 ಆನೆಗಳನ್ನು ಆಡಿಷನ್ ಮಾಡಲಾಗಿತ್ತಂತೆ! ಯಾಕೆಂದರೆ ಆನೆಗಳು ಹಲವು ಸಲ ಅನಿರೀಕ್ಷಿತವಾಗಿ ವರ್ತಿಸುತ್ತವೆ. ಈ ಕಾರಣ ಅಶುತೋಷ್ ಹೆಚ್ಚಿನ ಸಂಖ್ಯೆಯ ಆನೆಗಳನ್ನು ತರಿಸಿದ್ದರು. ನಿಜವಾದ ಆನೆಗಳನ್ನು ಬಳಸಿದ್ದರಿಂದ VFXನ ಭಾರಿ ವೆಚ್ಚವನ್ನು ಕಡಿಮೆ ಮಾಡಲೂ ಸಹಾಯ ಆಯಿತಂತೆ. ಇವಲ್ಲದೇ 100 ಕುದುರೆಗಳೂ, 80 ಒಂಟೆಗಳನ್ನೂ ಬಳಸಲಾಗಿತ್ತಂತೆ.
ರಣವೀರ್ ಅಲಹಾಬಾದಿಯಾ ತಂದೆಯ ಮೇಲೂ ಒಂದು ಕರಾಳ ಪೊಲೀಸ್ ಕೇಸ್ ಇದೆ!
ಜೋಧಾ ಪಾತ್ರಕ್ಕೆ ಐಶ್ವರ್ಯಾ ರೈ ಬಚ್ಚನ್ ಅವರೇ ಅಶುತೋಷ್ ಗೋವಾರಿಕರ್ ಅವರ ಮೊದಲ ಆಯ್ಕೆಯಾಗಿದ್ದರಂತೆ. ಚಿತ್ರದ ಸೆಟ್‌ನಲ್ಲಿ ಐಶ್ ತನ್ನ ಆಹಾರ ಮತ್ತು ಫಿಟ್‌ನೆಸ್ ಬಗ್ಗೆ ಬಹಳ ಜಾಗೃತರಾಗಿದ್ದರು. ಸೆಟ್‌ನಲ್ಲಿ ಬಳಸಲಾದ ಆಹಾರ ಶುದ್ಧ ತುಪ್ಪದಿಂದ ಮಾಡಲ್ಪಟ್ಟಿತ್ತು. ಶೂಟಿಂಗ್ ಸಮಯದಲ್ಲಿ ಐಶ್ವರ್ಯಾ ಅದನ್ನು ತಿನ್ನಲು ನಿರಾಕರಿಸಿದರಂತೆ. ಐಶ್ವರ್ಯಾ ರೈ ಅವರ ಪ್ರತಿಯೊಂದು ಉಡುಗೆಯನ್ನೂ ಖ್ಯಾತ ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿದ್ದರು.
ಜೋಧಾ ಅಕ್ಬರ್ ಆ ಕಾಲದ ನಿಜವಾದ ಆಡಂಬರ ಮತ್ತು ವೈಭವವನ್ನು ಜನರು ಅನುಭವಿಸುವಂತೆ ಮಾಡಿದ ಚಿತ್ರ. ಐಷಾರಾಮಿ ಕೋಟೆಗಳು, ಅರಮನೆ ಕೊಠಡಿಗಳು ಮತ್ತು ಕಾರಂಜಿಗಳು ಮತ್ತು ಉದ್ಯಾನಗಳನ್ನು ಒಳಗೊಂಡಂತೆ ಕರ್ಜಾತ್‌ನಲ್ಲಿ ಚಿತ್ರಕ್ಕಾಗಿ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಯಿತು. ಜೋಧಾ ಅಕ್ಬರ್ ಮೊದಲು ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಬಚ್ಚನ್ ಧೂಮ್ 2ನಲ್ಲಿ ಒಟ್ಟಿಗೆ ನಟಿಸಿದ್ದರು. ಇದು 2006ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು.
Kiss controversy: ದಲೀಪ್ ತಾಹಿಲ್ 'ಕಿಸ್'ಗೆ ಜಯಪ್ರದಾರಿಂದ ಕಪಾಳಮೋಕ್ಷ!
