ಹೇಮಾ ಮಾಲಿನಿ ದಾಂಪತ್ಯದ ಕಣ್ಣೀರ ಕಥೆ: ಅಗಲಿಕೆಯ ಈ ನೋವು ಯಾರಿಗೂ ಬೇಡ ಎಂದ ನಟಿ!

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ದಾಂಪತ್ಯ ಜೀವನಕ್ಕೆ 43 ವರ್ಷಗಳಾಗಿವೆ. ಆದರೆ ಸಾಹಸ ಮಾಡಿ ಮದ್ವೆಯಾಗಿರೋ ಈ ಜೋಡಿ ಒಟ್ಟಿಗೇ ಇಲ್ಲ ಎನ್ನುವ ವಿಷಯವೀಗ ಬಹಿರಂಗಗೊಂಡಿದೆ. 
 

Hema Malini on not living with Dharmendra: Nobody wants to live like this

ಬಾಲಿವುಡ್​ನ ಡ್ರೀಮ್​ಗರ್ಲ್​ ಎಂದಾಕ್ಷಣ ನೆನಪಿಗೆ ಬರುವುದು ನಟಿ ಹೇಮಾ ಮಾಲಿನಿ. ಸಂಸದೆಯಾಗಿ, ನಟಿಯಾಗಿ ಹೇಮಾ ಮಾಲಿನಿ ಅವರದ್ದು ಬಹುದೊಡ್ಡ ಪಾತ್ರ. ಇವರು  ತಮ್ಮ ಚಲನಚಿತ್ರಗಳ ಹೊರತಾಗಿ ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ 'ಡ್ರೀಮ್ ಗರ್ಲ್' (Dream Girl) ಪಟ್ಟಕ್ಕೆ ಬಹುಶಃ ಯಾರೂ ಏರಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಯಸ್ಸು 74 ಆದರೂ ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ ನಟಿ. 1968ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ,  ಬಾಲಿವುಡ್‌ನಲ್ಲಿ 'ಸಪ್ನೋ ಕಾ ಸೌದಾಗರ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ, 'ಸೀತಾ ಔರ್ ಗೀತಾ', 'ಶೋಲೆ', 'ಸತ್ತೆ ಪೆ ಸತ್ತಾ', 'ಧರ್ಮಾತ್ಮ', 'ಬಾಘವಾನ್' ನಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹೇಮಾ ಮಾಲಿನಿ ಅವರು ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿದ್ದಾರೆ.

ಇಂದು ಹೇಮಾ ಮಾಲಿನಿ ಲಕ್ಷಾಂತರ ಹೃದಯಗಳನ್ನು ಆಳುತ್ತಿದ್ದಾರೆ.  ಆದರೆ ಅವರ ಹೃದಯ ಯಾವಾಗಲೂ ಬಾಲಿವುಡ್‌ನ ಧರ್ಮೇಂದ್ರ ಅವರಿಗಾಗಿ ಮಾತ್ರ ಮಿಡಿಯುತ್ತದೆ. ಹೇಮಾ ಮಾಲಿನಿ 1980 ರಲ್ಲಿ ಧರ್ಮೇಂದ್ರ (Dharmendra) ಅವರನ್ನು ವಿವಾಹವಾದರು. ಕಳೆದ ವರ್ಷ ಮೇ 2ರಂದು 43 ವಸಂತಗಳ ದಾಂಪತ್ಯ ಜೀವನವನ್ನು ಮುಗಿಸಿದ್ದಾರೆ. ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೊತೆಗೆ, ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಇದ್ದಾರೆ.  ಅಸಲಿಗೆ  ಹೇಮಾ ಅವರನ್ನು  ಮದುವೆಯಾಗುವ ಮೊದಲು, ಧರ್ಮೇಂದ್ರ  ಪ್ರಕಾಶ್ ಕೌರ್ ಎಂಬುವವರನ್ನು  ಮದುವೆಯಾಗಿದ್ದರು. ಈ ದಾಂಪತ್ಯದಿಂದ ಅವರಿಗೆ   ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಎಂಬ  ಪುತ್ರರು ಮತ್ತು ವಿಜಿತಾ ಡಿಯೋಲ್ ಮತ್ತು ಅಜಿತಾ ಡಿಯೋಲ್ (Ajitha Deol) ಎಂಬ ಇಬ್ಬರು ಪುತ್ರಿಯರು ಇದ್ದಾರೆ.  ಆದರೆ ಮೊದಲ ಪತ್ನಿಗೆ  ವಿಚ್ಛೇದನ ನೀಡದೇ ಧಮೇಂದ್ರ ಅವರು ಹೇಮಾ ಮಾಲಿನಿಯನ್ನು ಮದುವೆಯಾಗಿದ್ದರು. ಹೇಮಾ ಮಾಲಿನಿ ಅವರ ಮದುವೆ ನಟ ಜೀತೇಂದ್ರ ಜೊತೆ ಫಿಕ್ಸ್​ ಆಗಿತ್ತು. ಅದನ್ನು ತಪ್ಪಿಸಿ ಧರ್ಮೇಂದ್ರ ಹೇಮಾ ಅವರನ್ನು ಮದುವೆಯಾಗಿದ್ದರು. 

ಹೇಮಾ- ಧರ್ಮೇಂದ್ರ ದಾಂಪತ್ಯದ ರೋಚಕಥೆ; ಡಿವೋರ್ಸ್​ ಕೊಡದೇ ನಡೆದಿತ್ತು ಮದುವೆ!

ಹೀಗೆ ಇವರ ಪ್ರೇಮ, ದಾಂಪತ್ಯದ ಕಥೆ ಇದ್ದರೂ,  ಇಷ್ಟೆಲ್ಲಾ ಸರ್ಕಸ್​ ಮಾಡಿ ಮದುವೆಯಾದರೂ ಜೋಡಿ ಈಗ ಒಟ್ಟಿಗೇ ವಾಸಿಸುತ್ತಿಲ್ಲ. ಹೌದು!  ಧರ್ಮೇಂದ್ರ ಮತ್ತು  ಹೇಮಾ ಮಾಲಿನಿ ಒಂದೇ ಮನೆಯಲ್ಲಿ ವಾಸಿಸುತ್ತಿಲ್ಲ. ಈ ಕುರಿತು ಈಗ ನಟಿ ಮೌನ ಮುರಿದಿದ್ದಾರೆ.  ಅಸಲಿಗೆ ಧರ್ಮೇಂದ್ರ ಅವರು ಮೊದಲ ಪತ್ನಿ ಹಾಗೂ ಮಕ್ಕಳ ಜೊತೆಗಿದ್ದಾರೆ. ಈ ಬಗ್ಗೆ ಮಾತನಾಡುತ್ತ ಹೇಮಾ ಮಾಲಿನಿ (Hema Malini) ಅವರು 'ಯಾರಿಗೂ ಈ ರೀತಿ ಇರಬೇಕು ಅಂತ ಇಷ್ಟ ಇರೋದಿಲ್ಲ. ಆದರೆ ಒಮ್ಮೊಮ್ಮೆ ಪರಿಸ್ಥಿತಿ ನಾವಂದುಕೊಂಡಂತೆ ಇರುವುದಿಲ್ಲ. ಏನೋ ಆಗಿಬಿಡುತ್ತದೆ.  ಹೀಗೆ ಆದಾಗ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲ ಅಂದರೆ ಯಾರೂ ಕೂಡ ಈ ರೀತಿ ಬದುಕು ಜೀವಿಸಬೇಕು ಅಂತ ಅಂದುಕೊಳ್ಳಲ್ಲ. ಪ್ರತಿ ಹೆಣ್ಣಿಗೂ ಕೂಡ ಗಂಡ, ಮಕ್ಕಳು, ನಾರ್ಮಲ್ ಮನೆ ಬೇಕು ಅಂತಿರುತ್ತದೆ. ಹೀಗಿದ್ದರೂ ಈ ರೀತಿ ಆಗುತ್ತದೆ' ಎಂದಿದ್ದಾರೆ.

ಈ ಬಗ್ಗೆ ಮನದಾಳದಲ್ಲಿ ನೋವಿದ್ದರೂ ಹೇಮಾ ಮಾಲಿನಿ, 'ನನಗೆ ಈ ಬಗ್ಗೆ ಬೇಜಾರಿಲ್ಲ. ನಾನು ಖುಷಿಯಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿವೆ, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ. ಆ ಸಮಯದಲ್ಲಿ ಧರ್ಮೇಂದ್ರ (Dharmendra) ಇದ್ದರು, ಯಾವಾಗಲೂ ಜೊತೆಯಾಗಿಯೇ ಇರುತ್ತಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಮದುವೆ ಮಾಡಬೇಕು ಅಂತ ಅವರು ಹೇಳುತ್ತಿದ್ದರು. ಆಗ ನಾನು ಆಗತ್ತೆ ಎನ್ನುತ್ತಿದ್ದೆ. ಸರಿಯಾದ ಸಮಯಕ್ಕೆ ಮಕ್ಕಳನ್ನು ಮದುವೆಯಾಗುವ ಹುಡುಗ ದೇವರ ಆಶೀರ್ವಾದದೊಂದಿಗೆ ನಮ್ಮ ಕಣ್ಣು ಮುಂದೆ ಬರುತ್ತಾನೆ ಅಂತ ಹೇಳಿದ್ದರು' ಎಂದಿದ್ದಾರೆ. 

ಹೇಮಾ ಮಾಲಿನಿ- ಜೀತೇಂದ್ರ ಮದ್ವೆ ತಪ್ಸಿ ತಾವೇ ತಾಳಿ ಕಟ್ಟಿದಾಗ ಧರ್ಮೇಂದ್ರ ಫುಲ್ ಟೈಟ್!

Latest Videos
Follow Us:
Download App:
  • android
  • ios