ನನ್ನ ಮಗ ನನ್ನ ಹೆಮ್ಮೆ; ಅಪರೂಪದ ಫೋಟೋ ಶೇರ್ ಮಾಡಿ ಪುತ್ರನಿಗೆ ವಿಶ್ ಮಾಡಿದ ಚಿರಂಜೀವಿ
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ರಾಮ್ ಚರಣ್ ತೇಜ್ ಅರಿಗೆ ತಂದೆ ಚಿರಂಜೀವಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ನನ್ನ ಮಗ ನನ್ನ ಹೆಮ್ಮೆ ಎಂದು ಮೆಗಾಸ್ಟಾರ್ ಪುತ್ರನಿಗ ವಿಶ್ ಮಾಡಿದ್ದಾರೆ.
ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್(Ram Charan) ಹುಟ್ಟುಹಬ್ಬದ(Birthday) ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಡಬಲ್ ಸಂಭ್ರಮ. ಭಾರಿ ನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಸೂಪರ್ ಸಕ್ಸಸ್ ಮತ್ತು ಹುಟ್ಟುಹಬ್ಬ ಎರಡು ಒಟ್ಟಿಗೆ ಬಂದಿರುವುದು ರಾಮ್ ಚರಣ್ ಸಂತಸ ಮತ್ತಷ್ಟು ಹೆಚ್ಚಿಸಿದೆ. ರಾಮ್ ಚರಣ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.
ರಾಮ್ ಚರಣ್ ಹುಟ್ಟುಹಬ್ಬಕ್ಕೆ ತಂದೆ ಚಿರಂಜೀವಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಂದೆಯಂತೆ ಮಗ ಕೂಡ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ತಂದೆಯ ಹಾದಿಯಲ್ಲೇ ಸಾಗುತ್ತಿರುವ ನಟ ರಾಮ್ ಚರಣ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಆರ್ ಆರ್ ಆರ್ ಯಶಸ್ಸಿನಲ್ಲಿರುವ ರಾಮ್ ಚರಣ್ ಗೆ ತಂದೆ ಚಿರಂಜೀವಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಚಿರಂಜೀವಿ ಮಗ ರಾಮ್ ಚರಣ್ ಜೊತೆ ಇರುವ ಅಪರೂಪದ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಪುಟ್ಟ ರಾಮ್ ಚರಣ್ ನನ್ನು ಕಾಲುಮೇಲೆ ಕೂರಿಸಿಕೊಂಡಿರುವ ಫೋಟೋ ಮತ್ತು ಆಚಾರ್ಯ ಸಿನಿಮಾದ ಚಿತ್ರೀಕರಣದ ಫೋಟೋವನ್ನು ಚಿರಂಜೀವಿ ಶೇರ್ ಮಾಡಿದ್ದಾರೆ. ಜೊತೆಗೆ ಮಗನಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುವುದು ವಿಚಿತ್ರ ಎನಿಸುತ್ತದೆ ಎಂದು ಹೇಳಿದ್ದಾರೆ. ಅವನು ನನ್ನನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ ಮತ್ತು ಅವನು ನನ್ನ ಹೆಮ್ಮೆ ಎಂದು ಹೇಳಿದರು. ಚಿರಂಜೀವಿ ಮತ್ತು ರಾಮ್ ಚರಣ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ.
Ram Charan Birthday; ಗೆಳೆಯನಿಗಾಗಿ ಪಾರ್ಟಿ ಆಯೋಜಿಸಿದ್ದ Jr.NTR...ಕನ್ನಡದಲ್ಲಿ ಧನ್ಯವಾದ ತಿಳಿಸಿದ ಚಿರು ಪುತ್ರ
ಇನ್ನು ರಾಮ್ ಚರಣ್ ಹುಟ್ಟುಹಬ್ಬವನ್ನು ಜೂ.ಎನ್ ಟಿ ಆರ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಮಾರ್ಚ್ 26ರ ರಾತ್ರಿ ಜೂ.ಎನ್ ಟಿ ಆರ್ ಪಾರ್ಟಿ ಆಯೋಜನೆ ಮಾಡಿದ್ದರು. ಗೆಳೆಯ ರಾಮ್ ಚರಣ್ ಹುಟ್ಟುಹಬ್ಬ ಮತ್ತು ಆರ್ ಆರ್ ಆರ್ ಸಕ್ಸಸ್ ಪಾರ್ಟಿಯನ್ನು ಒಟ್ಟಿಗೆ ಮಾಡಿದ್ದರು. ಪಾರ್ಟಿಯಲ್ಲಿ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಿದ್ದರು.
ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಉತ್ತಮ ಸ್ನೇಹಿತರು. ಆರ್ ಆರ್ ಆರ್ ಸಿನಿಮಾಗೂ ಮೊದಲು ಸಹ ಇಬ್ಬರ ನಡುವೆ ಉತ್ತಮವಾದ ಸ್ನೇಹ ಸಂಬಂಧವಿತ್ತು. ಸಿನಿಮಾ ಬಳಿಕ ಇಬ್ಬರ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
'RRR' ಕಲೆಕ್ಷನ್; 2ನೇ ದಿನವೂ ಭರ್ಜರಿ ಗಳಿಕೆ ಮಾಡಿದ ರಾಜಮೌಳಿ ಸಿನಿಮಾ
ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.