ನನ್ನನ್ನು ಅಪ್ಪಿಕೊಂಡು ಕಿವಿ ನೆಕ್ಕಿದಳು: ತಮಗಾದ ಕೆಟ್ಟ ಅನುಭವ ಹೇಳಿದ ನಟ ಹಾರ್ಡಿ ಸಂಧು
ಗಾಯನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಂದ ಮಹಿಳೆ ತಮ್ಮನ್ನು ತಬ್ಬಿ ಕಿವಿ ನೆಕ್ಕ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ ನಟ, ಗಾಯಕ ಹಾರ್ಡಿ ಸಂಧು
ಹಾರ್ಡಿ ಸಂಧು ಎಂದೇ ಖ್ಯಾತಿ ಪಡೆದಿರುವ ಹರ್ದವಿಂದರ್ ಸಿಂಗ್ ಸಂಧು ಗಾಯಕ, ನಟ ಮತ್ತು ಮಾಜಿ ಕ್ರಿಕೆಟಿಗ ಇದೀಗ ಗಾಯನ ಕ್ಷೇತ್ರದಲ್ಲಿಯೇ ಛಾಪು ಮೂಡಿಸಿದವರು. ಅದರಲ್ಲಿಯೂ ಅವರ ಬಿಜ್ಲೀ ಬಿಜ್ಲೀ ಹಾಡು ಸಕತ್ ಫೇಮಸ್ ಆಗಿದೆ. ಇದಾಗಲೇ ಹಲವಾರು ಸಂಗೀತ ಆಲ್ಬಂ ಮಾಡುವ ಮೂಲಕ ಕೀರ್ತಿ ಗಳಿಸಿರುವ ಹಾರ್ಡಿ ಅವರು, ತಮಗೆ ಮಹಿಳೆಯೊಬ್ಬರಿಂದ ಆಗಿರುವ ದೌರ್ಜನ್ಯದ ಕುರಿತು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಕೆಲ ಸಮಯದ ಹಿಂದೆ ವಿವಾಹ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಗಾಯನ ಪ್ರಸ್ತುತ ಪಡಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಅಸಹ್ಯ ರೀತಿಯಲ್ಲಿ ನಡೆದುಕೊಂಡ ಬಗೆಯನ್ನು ಅವರು ವಿವರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ನಾನು ಮದುವೆಯ ಕಾರ್ಯಕ್ರಮದಲ್ಲಿ ಲೈವ್ ಪ್ರೋಗ್ರಾಮ್ ನೀಡುತ್ತಿದ್ದೆ. ಆಗ 40-45 ವಯಸ್ಸಿನ ಮಹಿಳೆಯೊಬ್ಬರು ತಾವು ವೇದಿಕೆಗೆ ಬರಬಹುದೇ ಎಂದು ನನ್ನನ್ನು ಕೇಳಿದರು. ಆದರೆ ಹೀಗೆ ಬಂದರೆ, ಅದು ಸರಿಯಾಗುವುದಿಲ್ಲ ಎನ್ನುವ ಕಾರಣಕ್ಕೆ, ನಿಮ್ಮನ್ನು ಕರೆದರೆ ಉಳಿದವರೂ ಬರುತ್ತಾರೆ. ಆಗ ಸಮಸ್ಯೆಯಾಗುತ್ತದೆ ಎಂದೆ. ಆದರೆ ಆಕೆ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ವೇದಿಕೆ ಮೇಲೆ ಬರುವುದಾಗಿ ಒಂದೇ ಸಮನೆ ಹೇಳಿದರು. ಬೇರೆ ವಿಧಿಯಿಲ್ಲದೇ ಆಕೆಗೆ ಓಕೆ ಎಂದೆ ಎಂದು ಅಂದು ನಡೆದ ಘಟನೆಯನ್ನು ಗಾಯಕ ಮೆಲುಕು ಹಾಕಿದ್ದಾರೆ.
ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ ಮತ್ತೋರ್ವ ನಟಿ! ಕೊಟ್ಟ ಕಾರಣ ಹೀಗಿದೆ...
ನನ್ನ ಜೊತೆ ಆಕೆ ಕೂಡ ಡ್ಯಾನ್ಸ್ ಮಾಡಿದರು. ಇದ್ದಕ್ಕಿದ್ದಂತೆಯೇ ನಿಮ್ಮನ್ನು ಅಪ್ಪಿಕೊಳ್ಳಬಹುದಾ ಕೇಳಿದರು. ಇದೇನೂ ಹೊಸತಲ್ಲವೆಂದುಕೊಂಡು ನಾನು ಒಪ್ಪಿದೆ. ಆದರೆ ಆಕೆ ನನ್ನನ್ನು ತಬ್ಬಿಕೊಂಡು ಅಸಹ್ಯ ರೀತಿಯಲ್ಲಿ ನಡೆದುಕೊಂಡರು. ಕಿವಿಯನ್ನು ನೆಕ್ಕಿದರು, ಇದನ್ನು ನೋಡಿ ನನಗೆ ಅಸಹ್ಯ ಆಯಿತು ಎಂದಿರುವ ಹಾರ್ಡಿ ಅವರು, ಒಂದು ವೇಳೆ ಆಕೆಯ ಬದಲು ನಾನು ಮಾಡಿದ್ದರೆ ಏನಾಗುತ್ತಿತ್ತು, ಎಷ್ಟೆಲ್ಲಾ ರಾದ್ಧಾಂತ ಆಗುತ್ತಿತ್ತು ಒಮ್ಮೆ ಯೋಚಿಸಿ ಎಂದಿದ್ದಾರೆ.
ಇದೀಗ ಹಾರ್ಡಿ ಸಂಧು ಅವರು ಭಾರತದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ಕೊಡಲು ರೆಡಿಯಾಗಿದ್ದು, ಈ ಸಂದರ್ಭದಲ್ಲಿ ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ. ದೆಹಲಿ, ಇಂದೋರ್, ಮುಂಬೈ, ಜೈಪುರ, ಪುಣೆ, ಕೊಲ್ಕತ್ತಾ, ಭುವನೇಶ್ವರದಲ್ಲಿ ಸದ್ಯ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 18ಕ್ಕೆ ಕಾರ್ಯಕ್ರಮ ಶುರುವಾಗಲಿದ್ದು, ಮುಂಬೈನಲ್ಲಿ ಡಿಸೆಂಬರ್ 17ರಂದು ನಡೆಯಲಿದೆ. ಸದ್ಯ ಹಾರ್ಡಿ ಸಂಧು ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಅವರ 83 ಸಿನಿಮಾದಲ್ಲಿ ಮದನ್ ಲಾಲ್ ಪಾತ್ರ ಮಾಡಿದ್ದರು. ಕೋಡ್ ನೇಮ್: ತಿರಂಗಾದಲ್ಲಿ ನಟ ಪರಿಣಿತಿ ಚೋಪ್ರಾ ಜೊತೆ ನಟಿಸಿದ್ದರು. ಹಾಗೆಯೇ ಕಿ ಕರಿಯೇ ಸಾಂಗ್ ಕೂಡಾ ಹಾಡಿದ್ದಾರೆ. ಬಿಜ್ಲೀ ಬಿಜ್ಲೀ, ಕುಡಿಯಾ ಲಾಹೋರ್ ದಿಯಾ, ತಿತ್ಲಿಯಾನ್ ವಾರ್ಗ, ಯಾರ್ ನಿ ಮಿಲ್ಯಾ ಅವರ ಫೇಮಸ್ ಹಾಡುಗಳಾಗಿವೆ.
ಅಪ್ಪನಿಗೆ ಕೊಟ್ಟ ಮಾತನ್ನು ಉಳಿಸಲು ಅಜ್ಜಿಯ ಊರು ಕಾಶ್ಮೀರಕ್ಕೆ ಇನ್ನೂ ಭೇಟಿ ಕೊಡದ ಶಾರುಖ್!