ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಆಸ್ಟ್ರೇಲಿಯಾ ಟೂರ್‌ನಿಂದ ಮರಳಿದ್ದು, ಈಗ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಮುದ್ದು ಮಗ ಅಗಸ್ತ್ಯ ಮತ್ತು ಪತ್ನಿ ನತಾಶಾ ಜೊತೆ ಎಂಜಾಯ್ ಮಾಡ್ತಿದ್ದಾರೆ ಪಾಂಡ್ಯ.

ಇನ್‌ಸ್ಟಾಗ್ರಾಂನಲ್ಲಿ ಮಗ ಅಗಸ್ತ್ಯ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್‌ನ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನತಾಶಾ ಮಗುವನ್ನು ಸ್ನಾನ ಮಾಡಿಸ್ತಿರೋದು ಕಾಣಿಸುತ್ತದೆ.

ರಾಷ್ಟ್ರೀಯ ಕೆಲಸ ಮುಗಿಸಿ, ತಂದೆ ಕೆಲಸಕ್ಕೆ ಹಾಜರಾದ ಹಾರ್ದಿಕ್ ಪಾಂಡ್ಯ

ನಟಿ ಇದೇ ವಿಡಿಯೋವನ್ನು ರಿಪೋಸ್ಟ್ ಮಾಡಿ ಹಾರ್ಟ್ ಎಮೋಜಿ ಹಾಕಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ಕ್ಯೂಟ್‌ ಆಗಿ ಬಂದಿದ್ದು, ಫ್ಯಾನ್ಸ್ ಕಮೆಂಟ್ಸ್ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಇನ್ನೊಂದು ವಿಡಿಯೋ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ನನ್ನ ಈಗಿನ ಬೆಳಗು ಹೀಗಿದೆ ಎಂದು ಬರೆದಿದ್ದಾರೆ. ಕಲರ್‌ಫುಲ್ ಮ್ಯಾಟ್‌ ಮೇಲೆ ಮಗ ಮಲ್ಕೊಂಡಿದ್ದು, ರೈಮ್‌ ಸೆಷನ್ ಎಂಜಾಯ್ ಮಾಡುತ್ತಿದ್ದ. 

 
 
 
 
 
 
 
 
 
 
 
 
 
 
 

A post shared by agasthya (@agasthyapandyafc)

ಹಾರ್ದಿಕ್ ಪಾಂಡ್ಯ ಫೋಟೋ ಶೇರ್ ಮಾಡಿಕೊಂಡಿದ್ದು, ಮಗನಿಗೆ ಹಾಲು ಕುಡಿಸೋ ಫೋಟೋ ವೈರಲ್ ಆಗಿದೆ. ಫ್ರಂ ನ್ಯಾಷನಲ್ ಡ್ಯೂಟಿ ಟು ಫಾದರ್ ಡ್ಯೂಟಿ ಎಂದು ಬರೆದಿದ್ದಾರೆ ಪಾಂಡ್ಯ. ಜುಲೈ 30ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಸೆಲೆಬ್ರಟಿ ಜೋಡಿ ಫ್ಯಾನ್ಸ್ ಜೊತೆ ಸ್ವೀಟ್ ಮೊಮೆಂಟ್ಸ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

 
 
 
 
 
 
 
 
 
 
 
 
 
 
 

A post shared by agasthya (@agasthyapandyafc)