ರಶ್ಮಿಕಾ ಮಂದಣ್ಣ ಪೀಲಿಂಗ್ಸ್ ಹಾಡಿಗೆ ಅಜ್ಜಿಯ ಬಿಂದಾಸ್ ಡ್ಯಾನ್ಸ್; ಹುಬ್ಬೇರಿಸಿದ ಶ್ರೀವಲ್ಲಿ ಫ್ಯಾನ್ಸ್
ಪುಷ್ಪಾ 2 ಚಿತ್ರದ ಪೀಲಿಂಗ್ಸ್ ಹಾಡಿಗೆ ಅಜ್ಜಿಯೊಬ್ಬರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಶ್ಮಿಕಾ ಮಂದಣ್ಣ ಪೀಲಿಂಗ್ಸ್ ಹಾಡಿಗೆ ಅಜ್ಜಿಯ ಬಿಂದಾಸ್ ಡ್ಯಾನ್ಸ್; ಹುಬ್ಬೇರಿಸಿದ ಶ್ರೀವಲ್ಲಿ ಫ್ಯಾನ್ಸ್ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ-2 ಸಿನಿಮಾ ಹಲವು ದಾಖಲೆಗಳನ್ನು ಬರೆದಿದ್ದು, 1 ಸಾವಿರ ಕೋಟಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡಿದೆ. ಪುಷ್ಪಾ 2 ಸಿನಿಮಾದ ಎಲ್ಲಾ ಹಾಡುಗಳು ಸಹ ಹಿಟ್, ವಿಶೇಷ ನೃತ್ಯದಿಂದ ಸ್ಟೆಪ್ಸ್ ಗಳು ಸಹ ವೈರಲ್ ಆಗಿವೆ. ಎಲ್ಲರೂ ಪುಷ್ಪಾ ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಆಗುತ್ತಿದ್ರೂ ಚಿತ್ರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ಅಜ್ಜಿಯೊಬ್ಬರು ಪೀಲಿಂಗ್ಸ್ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಕಂಡು ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋವನ್ನು nellaimokkaboys ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 10 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ಅಣ್ಣ ವಿಥ್ ಅಮ್ಮಚ್ಚಿ ಎಂದು ಕಮೆಂಟ್ ಮಾಡಿದ್ದಾರೆ. ಓ ಮೈ ಗಾಡ್, ಈ ರೀತಿ ವಿಡಿಯೋ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ .
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಪುಷ್ಪಾ-2 ಚಿತ್ರದ ಪೀಲಿಂಗ್ಸ್ ಹಾಡಿಗೆ ಯುವಕನೋರ್ವನ ಜೊತೆ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. 18ರ ಯುವತಿಯರಂತೆ ಸ್ಟೆಪ್ಸ್ ಹಾಕಿರೋದನ್ನು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪುಷ್ಪಾ-3ರಲ್ಲಿ ಅಜ್ಜಿಗೆ ಒಂದು ಚಾನ್ಸ್ ಕೊಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. nellaimokkaboys ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಇದೇ ಅಜ್ಜಿಯ ಬೇರೆ ಬೇರೆಯ ರೀಲ್ಸ್‌ಗಳನ್ನು ಗಮನಿಸಬಹುದು.
ಇದನ್ನೂ ಓದಿ: ಅಲ್ಲು ಅರ್ಜುನ್ಗೆ ಜ್ವರ, ಟಾಲಿವುಡ್ಗೆ ಬರೆ! ಪುಷ್ಪಾ 2 ಟೀಮ್‌ಗೆ ಸಕ್ಸಸ್ ಸಿಕ್ಕರೂ ಖುಷಿ ಇಲ್ವಾ?
ರಶ್ಮಿಕಾ ಮಂದಣ್ಣ ಅಚ್ಚರಿ ಹೇಳಿಕೆ
ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ಪೀಲಿಂಗ್ಸ್ ಹಾಡಿನ ರಿಹರ್ಸಲ್ ವಿಡಿಯೋ ನೋಡಿ ತುಂಬ ಆಶ್ಚರ್ಯವಾಯಿತು, ಅಲ್ಲು ಅರ್ಜುನ್ ಜೊತೆ ನೃತ್ಯ ಮಾಡಿದ್ದಕ್ಕೆ ಖುಷಿಪಟ್ಟೆ. ಆದರೆ ಯಾರಾದರೂ ತಮ್ಮನ್ನು ಎತ್ತಿಕೊಂಡರೆ ಭಯವಾಗುತ್ತದೆ ಎಂದು ಹೇಳಿದ ರಶ್ಮಿಕಾ, ಈ ಹಾಡಿನಲ್ಲಿ ಅಲ್ಲು ಅರ್ಜುನ್ ತಮ್ಮನ್ನು ಎತ್ತಿಕೊಂಡು ಹೆಜ್ಜೆ ಹಾಕುವ ದೃಶ್ಯದಲ್ಲಿ ಮೊದಲು ಸ್ವಲ್ಪ ಮುಜುಗರ ಅನ್ನಿಸಿತು ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದರು.
ಶೂಟಿಂಗ್ ವೇಳೆ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಆ ಭಯದಿಂದ ಹೊರಬರಲು ಸಹಾಯ ಮಾಡಿದರು. ಒಮ್ಮೆ ಅವರನ್ನು ನಂಬಿದ ಮೇಲೆ ಅಷ್ಟೇನೂ ತೊಂದರೆಯಾಗಲಿಲ್ಲ, ಚಿತ್ರೀಕರಣ ಖುಷಿಯಾಗಿ ನಡೆಯಿತು ಎಂದು ಸಿನಿಮಾ ಶೂಟಿಂಗ್‌ನಲ್ಲಿನ ಘಟನೆಯನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ‘ಪೀಲಿಂಗ್ಸ್’ ಹಾಡಿನ ಆ ಸ್ಟೆಪ್ ಇರಿಸು ಮುರಿಸು ಆಯ್ತೆಂದ ಶ್ರೀವಲ್ಲಿ: ಈಗ್ಯಾಕೆ ಬಂತು ಈ ಮಾತು?