'ಗೋಲ್ಡನ್ ಗ್ಲೋಬ್ಸ್'ನಲ್ಲಿ ದೇವರನ್ನು ಭೇಟಿಯಾದ ನಿರ್ದೇಶಕ ರಾಜಮೌಳಿ; ಫೋಟೋ ವೈರಲ್
ಆರ್ ಆರ್ ಆರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಖ್ಯಾತ ಸಿನಿಮಾ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿ, ದೇವರನ್ನು ಭೇಟಿಯಾದೆ ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಪ್ರತಿಷ್ಠಿತ ಗೋಲ್ಡನ್ ಬ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ 'ಗೋಲ್ಡನ್ ಗ್ಲೋಬ್ಸ್' ಪ್ರಶಸ್ತಿ ಬಂದಿದ್ದು ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇತ್ತೀಚಿಗಷ್ಟೆ ಈ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದು ಇಡೀ ಆರ್ ಆರ್ ಆರ್ ಸಿನಿಮಾತಂಡ ಅಮೆರಿಕಾದಲ್ಲಿ ಬೀಡು ಬಿಟ್ಟಿದೆ. ಪ್ರಶಸ್ತಿ ಸಮಾರಂಭದ ಒಂದಿಷ್ಟು ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಮೌಳಿ ಅವರ ಸಾಧನೆಗೆ ಇಡೀ ಭಾರತೀಯ ಸಿನಿಮಾರಂಗ ಹೆಮ್ಮೆ ಪಡುತ್ತಿದೆ.
ಈ ಸಮಾರಂಭದಲ್ಲಿ ಜಕ್ಕಣ್ಣ ವಿಶೇಷ ವ್ಯಕ್ತಿಯನ್ನು ಭೇಟಿಯಾದ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ದೇವರನ್ನು ಭೇಟಿಯಾದೆ' ಎಂದು ಹೇಳಿದ್ದಾರೆ. ರಾಜಮೌಳಿ ಭೇಟಿಯಾದ ದೇವರು ಮತ್ಯಾರು ಅಲ್ಲ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್. ವಿಶ್ವ ಸಿನಿಮಾರಂಗದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯಾಗಿ ಭಾವಪರವಶರಾಗಿದ್ದಾರೆ. ಸ್ಟೀವನ್ ಸ್ಪೀಲ್‌ಬರ್ಗ್ ತನ್ನ ದೇವರು ಎಂದು ರಾಜಮೌಳಿ ಕರೆದಿದ್ದಾರೆ. ಸ್ಟೀವನ್ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಸ್ಟೀವನ್ ಅವರು ಕೂಡ ನಾಟು..ನಾಟು ಹಾಡನ್ನು ಇಷ್ಟ ಪಟ್ಟಿದ್ದಾರೆ. ಆರ್ ಆರ್ ಆರ್ ಸಿನಿಮಾ ಮೂಲಕ ಜಾಗತಿಕ ಸಂಚಲ ಮೂಡಿಸಿರುವ ಮೂಡಿಸಿದ್ದಾರೆ ರೌಜಮೌಳಿ.
Naatu Naatu; ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದನೆ
ಗೋಲ್ಡನ್ ಬ್ಲೋಬ್ಸ್ 2023 ಅವಾರ್ಡ್ ಸಮಾರಂಭದಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫ್ಯಾಬೆಲ್ಮ್ಯಾನ್ಸ್ ಸಿನಿಮಾ ಎರಡು ಪ್ರಶಸ್ತಿ ಬಾಚಿಕೊಂಡಿದೆ. ಅತ್ಯುತ್ತಮ ಸಿನಿಮಾ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದಿದ್ದಾರೆ. ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾದ ಖುಷಿಯನ್ನು ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಕೂಡ ಹಂಚಿಕೊಂಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ನಾಟು..ನಾಟು ಹಾಡಿನಿಂದ ಎಂದು ಹೇಳಿದ್ದಾರೆ.
ಆರ್ ಆರ್ ಆರ್ ಸಿನಿಮಾ ‘ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಬೇರೆ ಬೇರೆ ದೇಶಗಳ ಸಿನಿಮಾ ಜೊತೆಗೆ ಸ್ಪರ್ಧಿಸಿತ್ತು. ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರಶಸ್ತಿ ಸಮಾರಂಭದಲ್ಲಿ ಇಡೀ ಆರ್‌ಆರ್‌ಆರ್ ತಂಡ ಹಾಜರಿತ್ತು. ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ, ರಾಜಮೌಳಿ ದಂಪತಿ, ಜೂ. ಎನ್‌ಟಿಆರ್ ದಂಪತಿ ಮತ್ತು ರಾಮ್ ಚರಣ್ ದಂಪತಿ ಸಹ ಭಾಗಿಯಾಗಿದ್ದರು. ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ನಟಿಸಿದ್ದರು.
'ನಾಟು ನಾಟು'ಗೆ ಪ್ರಶಸ್ತಿ ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಟ್ರೋಲ್: ಬೇಕಿತ್ತಾ ಈ ಸ್ಟೈಲು?
ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ ಇದೀಗ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಸದ್ಯ ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯ ಸ್ಪರ್ಧೆಗಿಳಿದಿದೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದಿರುವ ಆರ್ ಆರ್ ಆರ್ ಆಸ್ಕರ್ ಮೇಲೆ ಕಣ್ಣಿಟ್ಟಿದೆ.