Asianet Suvarna News Asianet Suvarna News

Happy Birthday Chiranjeevi; ಅಭಿಮಾನಿಗಳಿಗೆ 'ಗಾಡ್‌ಫಾದರ್ ಗಿಫ್ಟ್', ಸಲ್ಮಾನ್ ಜೊತೆ ಮೆಗಾಸ್ಟಾರ್ ಎಂಟ್ರಿ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮ. ಚಿರಂಜೀವಿ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಅಭಿಮಾನಿಗಳು ಹಬ್ಬಮಾಡುತ್ತಿದ್ದಾರೆ.

Godfather teaser release for Chiranjeevi birthday sgk
Author
Bengaluru, First Published Aug 22, 2022, 10:43 AM IST

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮ. ಚಿರಂಜೀವಿ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಅಭಿಮಾನಿಗಳು ಹಬ್ಬಮಾಡುತ್ತಿದ್ದಾರೆ. ಚಿರಂಜೀವಿ ಫೋಟೋ, ವಿಡಿಯೋ ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಮೆಗಾಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಚಿರಂಜೀವಿ ನಟನೆಯ ಬಹುನಿರೀಕ್ಷೆಯ ಗಾಡ್ ಫಾದರ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಮೆಗಾಸ್ಟಾರ್‌ನನ್ನು ಮತ್ತೊಮ್ಮೆ ಮಾಸ್ ಅವತಾರದಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಅಂದಹಾಗೆ ಗಾಡ್ ಫಾದರ್ ಮಲಯಾಳಂನ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಚಿತ್ರವಾಗಿದೆ. ಆದರೂ ಚಿರಂಜೀವಿ ನಟನೆಯ ಗಾಡ್ ಫಾದರ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಕಾತರದಿಂದ ಕಾಯುತ್ತಿದ್ದಾರೆ. ಲೂಫಿಸ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ತೆಲುಗಿನಲ್ಲಿ ಮೆಗಾ ಸ್ಟಾರ್’​ ಚಿರಂಜೀವಿ ಮಾಡುತ್ತಿದ್ದಾರೆ.  ಇನ್ನು ವಿಶೇಷ ಎಂದರೆ ಸಿ ನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಕೂಡ ನಟಿಸಿದ್ದಾರೆ. ಹೌದು, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗಾಡ್ ಫಾದರ್ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಸಲ್ಮಾನ್ ಖಾನ್ ದರ್ಶನ ಕೂಡ ಆಗಿದೆ. ಮೆಗಾಸ್ಟಾರ್ ಜೊತೆ ಎಂಟ್ರಿ ಕೊಟ್ಟಿರುವ ಸಲ್ಮಾನ್ ಖಾನ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  

30 ಲಕ್ಷದ ಜಮೀನನ್ನು 70 ಕೋಟಿಗೆ ಮಾರಿದ ನಟ ಚಿರಂಜೀವಿ: ಏನಿದು ಗೋಲ್‌ಮಾಲ್‌ ಎಂದ ನೆಟ್ಟಿಗರು!

ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೋಹನ್ ರಾಜಾ ಸಾರಥ್ಯದಲ್ಲಿ ಮೂಡಿಬಂದಿರುವ ಗಾಡ್ ಫಾದರ್ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆದು ಟ್ರೆಂಡಿಂಗ್ ನಲ್ಲಿದೆ. ಮತ್ತೊಮ್ಮೆ ಮಾಸ್ ಅವತಾರ ತಾಳಿರುವ ಚಿರಂಜೀವಿ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿರಂಜೀವಿ ಲುಕ್​ ಗಮನ ಸೆಳೆಯುತ್ತಿದೆ. ಇನ್ನು ಚಿತ್ರಕ್ಕೆ ನೀರವ್​ ಶಾ ಛಾಯಾಗ್ರಹಣ, ಥಮನ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಮೆಗಾಸ್ಟಾರ್‌ಗೆ 67 ವರ್ಷ. ಈಗಲೂ ಅವರು ಹದಿಹರೆಯದ ಯುವಕನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಚಿರಂಜೀವಿ ಅವರನ್ನು ಮತ್ತೆ ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹಿನಿರೀಕ್ಷೆಯ ಗಾಡ್​ ಫಾದರ್​ ಸಿನಿಮಾ ಈ ವರ್ಷ ವಿಜಯ ದಶಮಿ ಹಬ್ಬದ ಸಮಯದಲ್ಲಿ ಅಂದರೆ ಅಕ್ಟೋಬರ್​ 5ರಂದು ಬಿಡುಗಡೆ ಆಗುತ್ತಿದೆ. ಇನ್ನು ಉಳಿದಂತೆ ಚಿರಂಜೀವಿ ಬೋಲಾ ಶಂಕರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Follow Us:
Download App:
  • android
  • ios