ಕೊರೋನವೈರಸ್ ಸಂದರ್ಭ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗಾಗಿ ಮಾಡಿದ ಮಾನವೀಯ ಕೆಲಸದಿಂದಾಗಿ ಸಿನಿಮಾ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳೊಂದಿಗೆ ತಮ್ಮನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ ಎಂದು ಬಾಲಿವುಡ್ ನಟ ಸೋನು ಸೂದ್ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ದಬಾಂಗ್, ಜೋಧಾ ಅಕ್ಬರ್, ಮತ್ತು ಸಿಂಬಾ ಚಿತ್ರಗಳ ಮೂಲಕ ಹಿಟ್ ಆದ ಸೂದ್, ಲಾಕ್ ಡೌನ್ ಸಮಯದಲ್ಲಿ ವಲಸಿಗರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವ ಕೆಲಸದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದರು.

ಸೋನು ಸೂದ್ ಈ ವರ್ಷದ ಹಾಟೆಸ್ಟ್ ವೆಜಿಟೇರಿಯನ್

ನಾನು ಈಗ ಎಲ್ಲಾ ಹೀರೋ ಪಾತ್ರಗಳನ್ನು ಪಡೆಯುತ್ತಿದ್ದೇನೆ. ನಾನು ನಾಲ್ಕು-ಐದು ಅದ್ಭುತ ಸ್ಕ್ರಿಪ್ಟ್‌ಗಳನ್ನು ಪಡೆದುಕೊಂಡಿದ್ದೇನೆ. ಇದು ಹೊಸ ಆರಂಭ, ಹೊಸ ಇನ್ನಿಂಗ್ಸ್, ಇದು ಹೊಸ ಪಿಚ್ ಮತ್ತು ಮೋಜಿನ ಸಂಗತಿ"ಎಂದಿದ್ದಾರೆ ನಟ.

ತೆಲುಗು ಚಿತ್ರ "ಆಚಾರ್ಯ"ದ ಶೂಟಿಂಗ್‌ನಲ್ಲಿ ಸೋನು ಹೊಡೆಯುವ ದೃಶ್ಯವಿದೆ. ಆದರೆ ಅವರ ಪ್ರಸ್ತುತ ಇಮೇಜ್‌ನಿಂದ ಆ ಪಾತ್ರ ಅವರಿಂದ ಮಾಡಿಸುವ ಹಾಗೂ ಇಲ್ಲ. ನಾವು ಆಕ್ಷನ್ ಸೀಕ್ವೆನ್ಸ್ ಮಾಡುತ್ತಿದ್ದೇವೆ ಮತ್ತು ಚಿರಂಜೀವಿ ಸರ್, 'ನೀವು ಚಿತ್ರದಲ್ಲಿರುವುದು ನಮಗೆ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ನಾನು ನಿಮ್ಮನ್ನು ಆಕ್ಷನ್ ದೃಶ್ಯದಲ್ಲಿ ಹೊಡೆಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಜನರು ಶಪಿಸುತ್ತಾರೆ ಎಂದಿದನ್ನು ಸೋನು ತಿಳಿಸಿದ್ದಾರೆ.

'ನೀವೇ ದುಡಿದು, ನೀವೇ ತಿನ್ನಿ' ಸೋನು ಸೂದ್ ಮತ್ತೊಂದು ಮಾದರಿ ಕಾರ್ಯ

ಮತ್ತೊಂದು ತೆಲುಗು ಚಿತ್ರದ ನಿರ್ಮಾಪಕರು ತಮ್ಮ ಹೊಸ ಚಿತ್ರಕ್ಕೆ ಅನುಗುಣವಾಗಿ ಸ್ಕ್ರಿಪ್ಟ್ ಅನ್ನು ಬದಲಾಯಿಸಿದ್ದಾರೆ ಎಂದು 47 ವರ್ಷದ ನಟ ಬಹಿರಂಗಪಡಿಸಿದ್ದಾರೆ, ಅಂದರೆ ಅವರು ಮತ್ತೆ ತಮ್ಮ ಭಾಗಗಳನ್ನು ಚಿತ್ರೀಕರಿಸಬೇಕಾಗುತ್ತದೆ.