Gauri Khan: ಇಷ್ಟು ಸುಂದರಿ ಯಾವಾಗಾದ್ರಿ? ಫೋಟೋದಿಂದ ಟ್ರೋಲ್ ಆದ ಶಾರುಖ್ ಪತ್ನಿ!
ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಚೆಂದಗಿನ ಫೋಟೋ ಹಾಕಿದ್ದು, ಭಾರಿ ಟ್ರೋಲಿಗೆ ಒಳಗಾಗಿದ್ದಾರೆ. ಏಕೆ?
ಮುಂಬೈ: ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಹೆಸರು ಈಗ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ತಮ್ಮ ಮಗಳ ವಯಸ್ಸಿನ ದೀಪಿಕಾ ಪಡುಕೋಣೆ ಜೊತೆ ಪಠಾಣ್ ಸೇರಿದಂತೆ ಇತ್ತೀಚಿನ ನಟಿಯರ ಜೊತೆಯೂ ನಾಯಕನಾಗಿ ನಟಿಸುವ ಮೂಲಕ ಇವರು ಎವರ್ಗ್ರೀನ್ ಸ್ಟಾರ್ (Evergreen star) ಎನಿಸಿಕೊಂಡವರು. ಬಹುತೇಕ ಚಿತ್ರನಟರಂತೆ ಇವರು ಕೂಡ ಹಿಂದೂ ಹುಡುಗಿಯನ್ನೇ ಮದುವೆಯಾಗಿದ್ದರೂ ಅವರ ಹೆಸರನ್ನು ಬದಲಿಸಲಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿಗಳ ನೆಚ್ಚಿನ ನಾಯಕರಾಗಿದ್ದಾರೆ. ಜೊತೆಗೆ ಈಗಿನ ನಾಯಕರಂತೆ ಹೆಚ್ಚೆಚ್ಚು ಮದುವೆಯಾಗುವ ಗೋಜಿಗೆ ಹೋಗದ ಕಾರಣ, ಶಾರುಖ್ ಮತ್ತು ಅವರ ಪತ್ನಿ ಗೌರಿ ಖಾನ್ (Gauri Khan) ಬಾಲಿವುಡ್‌ನ ಅತ್ಯಂತ ರೋಮಾಂಟಿಕ್ ಜೋಡಿ ಎನಿಸಿಕೊಂಡಿದೆ. ಈ ಜೋಡಿ ಮದುವೆಯಾಗಿ 32 ವರ್ಷಗಳಾದರೂ ಸುಮಧುರ ಬಾಂಧವ್ಯ ಉಳಿಸಿಕೊಂಡಿದೆ.
ಅಂದಹಾಗೆ ಗೌರಿ ಖಾನ್ (Gouri Khan) ಇಂಟೀರಿಯರ್ ಡಿಸೈನರ್ (Interior Designer). ವರ್ಷ 52 ಆದರೂ ಇಂದಿಗೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ಅವರ ಫೋಟೋ ವೈರಲ್ ಆಗಿದ್ದು, ಅದು ಭಾರಿ ಟ್ರೋಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಷ್ಟೇ ಸುಂದರವಾಗಿದ್ದರೂ, ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ಫೋಟೋ ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಮಾಮೂಲು. ಅದೇ ರೀತಿ ಗೌರಿ ಖಾನ್ ಅವರ ಎಡಿಟೆಡ್ ಫೋಟೋ ಶೇರ್ (Edited photo share) ಆಗಿದ್ದು, ಅದೀಗ ವೈರಲ್ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬದವರ ಮೇಲೆ ನೆಟ್ಟಿಗರ ಕಣ್ಣು ಯಾವಾಗಲೂ ನೆಟ್ಟಿರುತ್ತದೆಯಲ್ಲವೆ? ಅದಕ್ಕಾಗಿಯೇ ಗೌರಿ ಖಾನ್ ಅವರ ಫೋಟೋ (Photo) ಸ್ವಲ್ಪ ಹೆಚ್ಚೇ ಎಡಿಟ್ ಆಗಿದ್ದು ಅದೀಗ ಟ್ರೋಲಿಗರ (Troll) ಬಾಯಿಗೆ ಆಹಾರವಾಗಿದೆ.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!
ನೆಟ್ಟಿಗರು ಗೌರಿ ಖಾನ್ ಅವರ ಒರಿಜಿನಲ್ ಮತ್ತು ಶೇರ್ ಮಾಡಿರುವ ಎರಡೂ ಫೋಟೋಗಳನ್ನು ಕಂಪೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೋವನ್ನು ಗೌರಿ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ (instagram)ಶೇರ್ ಮಾಡಿದ್ದರು. ದುಬೈ ಇವೆಂಟ್ನ (Dubai Event) ಫೋಟೋ ಶೇರ್ ಮಾಡಲಾಗಿತ್ತು. ಇದೀಗ ಒರಿಜಿನಲ್ ಫೋಟೋ ಜೊತೆಗೆ ಇದನ್ನು ಕಂಪೇರ್ ಮಾಡಲಾಗುತ್ತಿದೆ. ತುಸು ಕಪ್ಪು ಬಣ್ಣದ ಗೌರಿ ಖಾನ್ ಅವರ ಮುಖವನ್ನು ಸ್ವಲ್ಪ ಹೆಚ್ಚಿಗೆ ಎನ್ನುವ ಹಾಗೆ ಬಿಳಿ ಮಾಡಿದ್ದಾರೆ ಎನ್ನುವುದು ಟ್ರೋಲಿಗರ ಆಕ್ಷೇಪ. ಎಡಿಟ್ ಮಾಡಿರುವ ಫೋಟೋದಲ್ಲಿ ಎಕ್ಸ್ಪೋಷರ್ ಹೆಚ್ಚಿದೆ. ಗೌರಿ ಖಾನ್ ಅವರ ಮುಖದ ಚರ್ಮವೂ ತುಂಬಾ ಸಾಫ್ಟ್ (Soft) ಆಗಿ ಕಾಣಿಸಿದೆ. ಕಣ್ಣುಗಳು ಹೆಚ್ಚು ಸುಂದರವಾಗಿ ಕಾಣಿಸುತ್ತಿದ್ದು, ಬಾಯಿಯ ಸಮೀಪ ನೆರಿಗೆ ಬೀಳದಂತೆ ಎಡಿಟ್ ಮಾಡಲಾಗಿದೆ ಎಂದು ನೆಟ್ಟಿಗರು ಬರೆದು ಇದನ್ನು ವೈರಲ್ ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು (Celebrity) ಇತ್ತೀಚಿನ ದಿನಗಳಲ್ಲಿ ತಮ್ಮ ಫೋಟೋಗಳನ್ನೇಕೆ ಇಷ್ಟೊಂದು ಎಡಿಟ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಇಂದು ಎಡಿಟ್ ಮಾಡುವುದು ಸಾಮಾನ್ಯ. ಇವರು ಶಾರುಖ್ ಅವರ ಪತ್ನಿ ಎನ್ನುವ ಕಾರಣಕ್ಕೆ ಈ ರೀತಿ ಟ್ರೋಲ್ ಮಾಡುವುದು ಸರಿಯಲ್ಲ ಎಂದು ಒಂದು ವರ್ಗ ಹೇಳಿದರೆ, ಈ ವಯಸ್ಸಿಗೆ ಇಂಥದ್ದೆಲ್ಲಾ ಯಾಕೆ ಬೇಕು? ವಯಸ್ಸಾಗಿದ್ದು ಎಲ್ಲರಿಗೂ ತಿಳಿದದ್ದೇ. ಎಡಿಟ್ ಮಾಡುವುದಾದರೆ ಸ್ವಲ್ಪ ಮಾಡಿ, ಹೀಗೆಲ್ಲಾ ಮಾಡಿ ಟ್ರೋಲ್ ಆಗಬೇಡಿ ಎಂದಿದ್ದಾರೆ ಇನ್ನು ಕೆಲವರು. ಇನ್ನು ಕೆಲವರು ವಯಸ್ಸು 52 ಆದರೂ ಇಷ್ಟು ಸುಂದರಿ ಯಾವಾಗಾದ್ರಿ ಎಂದು ಕಾಲೆಳೆದಿದ್ದಾರೆ!
Shehzada vs Pathaan: ಚೆನ್ನಾಗಿ ಓಡ್ತಿದ್ರೂ 'ಪಠಾಣ್'ಗೆ ಯಾಕಪ್ಪಾ ಈ ಕಂತ್ರಿ ಬುದ್ಧಿ ಅಂತಿದ್ದಾರೆ ಜನ...