ಶಾರುಖ್ ಪುತ್ರನಿಗೆ ಜೈಲೇ ಗತಿ.. ಆರ್ಯನ್ ಖಾನ್ ವಕೀಲರ ವಾದವೇನು?
ಮುಂಬೈ(ಅ. 07) ) ಡ್ರಗ್ಸ್ (Drugs) ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಾಯಕ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್ ಗೆ(Aryan Khan) ಜೈಲೆ ಗತಿಯಾಗಿದೆ. ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್ ಹದಿನಾಲ್ಕು ದಿನಗಳ ನ್ಯಾಯಾಂಗ (udicial custody)ಬಂಧನಕ್ಕೆ ನೀಡಿದೆ. ಈ ನಡುವೆ ಶುಕ್ರವಾರ ಜಾಮೀನು ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ.
ಜಾಮೀನು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಂಬೈನ ಕಿಲ್ಲಾ ಕೋರ್ಟ್ ಹೇಳಿತ್ತು. ಈ ಕಾರಣಕ್ಕೆ ಆರ್ಯನ್ ಸೇರಿ ಉಳಿದ ಎಂಟು ಮಂದಿಗೆ ನ್ಯಾಯಾಂಗ ಬಂಧನವಾಗಿದೆ.
ಆರ್ಯನ್ ಹೇಳಿಕೆ ಆಧಾರದ ಮೇಲೆ ಅಚಿತ್ ಎಂಬಾತನ ಬಂಧನವಾಗಿದೆ. ಈ ನಡುವೆ ಎನ್ ಸಿಬಿ ಮೇಲೆಯೇ ಆರೋಪಗಳು ಕೇಳಿಬಂದಿವೆ. NCB ಅಧಿಕಾರಿಗಳೆ ಡ್ರಗ್ಸ್ ತಂದು ಇಟ್ಟಿದ್ದಾರೆ ಎಂಬ ಆರೋಪವೂ ಬಂದಿತ್ತು.
ಪಾರ್ಟಿಗೂ ಆರ್ಯನ್ ಖಾನ್ ಗೂ ಯಾವುದೇ ಸಂಬಂಧ ಇಲ್ಲ. ಅವರ ಬಳಿ ಯಾವುದೆ ಡ್ರಗ್ಸ್ ಸಿಕ್ಕಿಲ್ಲ. ಹಾಗಾಗಿ ಜಾಮೀನು ನೀಡಬೇಕು ಎಂದು ವಕೀಲರು ವಾದ ಮುಂದಿಟ್ಟಿದ್ದರು.
ಮುಂಬೈ ಸಮುದ್ರ ತೀರದ ಕ್ರೂಸರ್ ಗಳ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಡ್ರಗ್ಸ್ ಪಾರ್ಟಿಯಲ್ಲಿದ್ದವರನ್ನೆಲ್ಲ ಬಂಧಿಸಿದ್ದರು. ಈ ವೇಳೆ ಎನ್‌ಸಿಬಿ ಅಧಿಕಾರಿಗಳ ಕೈಗೆ ಆರ್ಯನ್ ಖಾನ್ ಸಿಕ್ಕಿದ್ದರು.
ಆರ್ಯನ್ ಅವರನ್ನು ಎರಡು ಸಾರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಎನ್ ಸಿಬಿ ಆರ್ಯನ್ ಖಾನ್ ಸೇರಿ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಮತ್ತು ಐವರನ್ನು ತಮ್ಮ ಕಸ್ಟಡಿಗೆ ಕೊಡಿ ಎಂದು ಕೇಳಿಕೊಂಡಿತ್ತು.