Asianet Suvarna News Asianet Suvarna News

ಸಾಯಿ ಪಲ್ಲವಿ ನೋಡಿದ ಮೊದಲ ಕನ್ನಡ ಸಿನಿಮಾ ಯಾವುದು? ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ 'ಪ್ರೇಮಂ' ಬ್ಯೂಟಿ

ನಟಿ ಸಾಯಿ ಪಲ್ಲವಿ ನಿರೂಪಕಿ ಅನುಶ್ರೀ ಯೂಟ್ಯೂಬ್ ಮಾಹಿನಿಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಸಾಯಿ ಪಲ್ಲವಿ ಅನೇಕ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಕನ್ನಡ ಸಿನಿಮಾದ ಬಗ್ಗೆಯೂ ಮಾತನಾಡದ್ದಾರೆ. ಸಾಯಿ ಪಲ್ಲವಿ ನೋಡಿದ ಮೊದಲ ಕನ್ನಡ ಸಿನಿಮಾ ಯಾವುದು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 

gargi actress sai pallavi watched first kannada film Gantumoote sgk
Author
Bengaluru, First Published Jul 17, 2022, 3:36 PM IST

ಸೌತ್ ಸಿನಿರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಯಾರಿಗೆತಾನೆ ಇಷ್ಟ ಆಗಲ್ಲ. ಸರಳ, ಸುಂದರ ಸಾಯಿ ಪಲ್ಲವಿ ನಟನೆಯಲ್ಲೂ ಅಧ್ಭುತ. ನಟಿಯರು ಅಂದರೆ ಮೇಕಪ್, ದುಬಾರಿ ಡ್ರೆಸ್, ಹೈ ಫೈ ಜೀವನ ಎಲ್ಲಾನು ಐಷಾರಾಮಿ ಹೀಗೆ ಇರಬೇಕು ಎನ್ನುವ ಕಲ್ಪನೆಯನ್ನು ಬ್ರೇಕ್ ಮಾಡಿದ ನಟಿ ಸಾಯಿ ಪಲ್ಲವಿ. ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಟಿ ಸಾಯಿ ಪಲ್ಲವಿ ಉತ್ತಮ ನಟಿ ಜೊತೆಗೆ ಪ್ರತಿಭಾವಂತೆ ಕೂಡ ಹೌದು. ಸಾಯಿ ಪಲ್ಲವಿ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಅಭಿಮಾನಿಗಳ ಹೃದಯ ಗೆದ್ದಿವೆ. ಸದ್ಯ ಈ ಪ್ರೇಮಂ ಬ್ಯೂಟಿ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದ ಪ್ರಮೋಷನ್‌ನಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ.  ಗಾರ್ಗಿ ಸಿನಿಮಾ ತಮಿಳು ಮತ್ತು ತೆಲುಗು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗಿದೆ. ವಿಶೇಷ ಎಂದರೆ ಸಾಯಿ ಪಲ್ಲವಿ ಕನ್ನಡದಲ್ಲಿ ಸ್ವತಃ ಅವರೇ ಡಬ್ ಮಾಡಿದ್ದಾರೆ. ಅದ್ಭುತವಾಗಿ ಕನ್ನಡ ಮಾತನಾಡಿರುವ ಸಾಯಿ ಪಲ್ಲವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಗಾರ್ಗಿ ವಿಚಾರವಾಗಿ ಸಾಯಿ ಪಲ್ಲವಿ ನಿರೂಪಕಿ ಅನುಶ್ರೀ ಯೂಟ್ಯೂಬ್ ಮಾಹಿನಿಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಸಾಯಿ ಪಲ್ಲವಿ ಅನೇಕ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ. ಕನ್ನಡ ಸಿನಿಮಾದ ಬಗ್ಗೆಯೂ ಮಾತನಾಡದ್ದಾರೆ. ಸಾಯಿ ಪಲ್ಲವಿ ನೋಡಿದ ಮೊದಲ ಕನ್ನಡ ಸಿನಿಮಾ ಯಾವುದು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 

ಅಂದಹಾಗೆ ಸಾಯಿ ಪಲ್ಲವಿ ನೊಡಿದ ಮೊದಲ ಕನ್ನಡ ಸಿನಿಮಾ ಗಂಟುಮೂಟೆ. ರೂಪ ರಾವ್ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ತೇಜು ಬೆಲ್ವಾಡಿ ಮತ್ತು ನಿಶ್ತಿಕ್ ಕೊರೋಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕನ್ನಡದಲ್ಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾವನ್ನು ಸಾಯಿ ಪಲ್ಲವಿ ಕೂಡ ವೀಕ್ಷಿಸಿದ್ದಾರಂತೆ. ಬಳಿಕ ಫಿದಾ ಸುಂದರಿ ಅನೇಕ ಕನ್ನಡ ಸಿನಿಮಾಗಳನ್ನು ವೀಕ್ಷಿಸಿದ್ದಾರೆ. ಇತ್ತೀಚಿಗೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಕೆಜಿಎಫ್ -2 ಸಿನಿಮಾವನ್ನು ವೀಕ್ಷಿಸಿರುವುದಾಗಿ ಹೇಳಿದ್ದಾರೆ. 

ಲವ್ ಲೆಟರ್ ಬರೆದು ತಗಲಾಕ್ಕೊಂಡಿದ್ದೆ; ಪ್ರೀತಿ ವಿಚಾರ ರಿವೀಲ್ ಮಾಡಿದ ಸಾಯಿ ಪಲ್ಲವಿ

ಇನ್ನು ಇದೇ ಸಂದರ್ಶನದಲ್ಲಿ ಸಾಯಿ ಪಲ್ಲವಿ ಕನ್ನಡದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಬಗ್ಗೆ ಮಾತನಾಡಿದ್ದಾರೆ. ಶಂಕರ್ ನಾಗ್ ಇದ್ದಿದ್ದರೆ ಅವರ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದರು. ಇನ್ನು ನಟಿ ಅನುಶ್ರೀ ಕನ್ನಡದಲ್ಲಿ ಸಿನಿಮಾ ಮಾಡುತ್ತೀರಾ? ಒಂದು ವೇಳೆ ಸಿನಿಮಾ ಮಾಡುವುದಾದರೆ ಯಾವ ಹೀರೋ ಜೊತೆ ನಟಿಸುತ್ತೀರಾ? ಎಂದು ಕೇಳಿದ್ದಕ್ಕೆ ಸಾಯಿ ಪಲ್ಲವಿ ಖಂಡಿತವಾಗಿಯೂ ಕನ್ನಡ ಸಿನಿಮಾ ಮಾಡುತ್ತೇನೆ, ರಕ್ಷಿತ್ ಶೆಟ್ಟಿ ಜೊತೆ ನಟಿಸಲು ಬಯಸುತ್ತೇನೆ ಎಂದು ಹೇಳಿದರು. 

ಎಂಥದಾ ... ಮಕ್ಳಾ ಶೂಟ್ ಮಾಡ್ಬೇಕಾ? ರಕ್ಷಿತ್ ಶೆಟ್ಟಿ ಡೈಲಾಗ್ನ ಅವ್ರಿಗೇ ತಿರುಗಿಸಿ ಹೇಳಿದ್ರಪ್ಪಾ ಸಾಯಿ ಪಲ್ಲವಿ!

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾವನ್ನು ಇತ್ತೀಚಿಗಷ್ಟೆ ವೀಕ್ಷಿಸಿದ್ದಾರಂತೆ. ಸಿನಿಮಾ ನೋಡಿ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಅತ್ತಿರುವುದಗಿ ಹೇಳಿದ್ದಾರೆ. ನಾನು ತುಂಬಾ ಸೆನ್ಸಿಟಿವ್, ನಾನು  ಸಿನಿಮಾ ನೋಡಲ್ಲ ಅಂತ ಹೇಳಿದೆ. ಆದರೆ ರಕ್ಷಿತ್ ಶೆಟ್ಟಿ ಹೇಳಿದ್ದಕ್ಕೆ ನೋಡಿದೆ ಎಂದು ಹೇಳಿದ್ದಾರೆ. ಸಾಯಿ ಪಲ್ಲವಿ ಈಗಾಗಲೇ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇನ್ನು ಕನ್ನಡದಲ್ಲಿ ಯಾವಾಗ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಿರಿಕ್ ಪಾರ್ಟಿ-2 ನಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಕ್ಷಿತ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 

   

Follow Us:
Download App:
  • android
  • ios