ಸ್ಯಾಂಡಲ್ ವುಡ್‌ನಲ್ಲಿ ಬಾಕ್ಸ್ ಆಫೀಸ್ ವಾರ್ ಗೆ ದಿನಾಂಕ ನಿಗದಿಯಾಗಿದೆ. ಹೌದು ಕನ್ನಡದ ಬಹುನಿರೀಕ್ಷೆಯ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ. ಎರಡು ಸಿನಿಮಾಗಳು ಒಂದೇ ದಿನ ಬರ್ತಿವೆ ಅಂದರೆ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗುವುದು ಬಹುತೇಕ ಖಚಿತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

ಸ್ಯಾಂಡಲ್ ವುಡ್‌ನಲ್ಲಿ ಬಾಕ್ಸ್ ಆಫೀಸ್ ವಾರ್ ಗೆ ದಿನಾಂಕ ನಿಗಧಿಯಾಗಿದೆ. ಹೌದು ಕನ್ನಡದ ಬಹುನಿರೀಕ್ಷೆಯ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ. ಎರಡು ಸಿನಿಮಾಗಳು ಒಂದೇ ದಿನ ಬರ್ತಿವೆ ಅಂದರೆ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗುವುದು ಬಹುತೇಕ ಖಚಿತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇದೀಗ ಸ್ಯಾಂಡಲ್ ವುಡ್ ಮೆಗಾ ಬಾಕ್ಸ್ ಆಫೀಸ್ ಗೆ ಸಿದ್ಧವಾಗಿವೆ ಗಾಳಿಪಟ-2 ಸಿನಿಮಾ ಮತ್ತು ಮಾನ್ಸೂನ್ ರಾಗ ಸಿನಿಮಾಗಳು. ಹೌದು ಈ ಎರಡು ಸಿನಿಮಾಗಳು ಒಂದೆ ದಿನ ತೆರೆಗೆ ಬರಲು ಸಜ್ಜಾಗಿವೆ.

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಮೊದಲ ಭಾಗ ಸೂಪರ್ ಸಕ್ಸಸ್ ಆದ ಖುಷಿಯಲ್ಲಿ ಭಟ್ರು ಎರಡನೇ ಭಾಗ ತಯಾರಿಸಿದ್ದಾರೆ. ಎರಡನೇ ಗಾಳಿಪಟ ಹಾರಿಸುವ ಸಮಯವನ್ನು ನಿಗದಿ ಮಾಡಿದ್ದಾರೆ. ಅದು ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾದ ಬಿಡುಗಡೆ ದಿನವೇ ಎನ್ನುವುದು ವಿಶೇಷ. ಹೌದು ಈ ಎರಡು ಸಿನಿಮಾಗಳು ಆಗಸ್ಟ್ 12ರಂದು ತೆರೆಗೆ ಬರುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಮತ್ತು ದಿಗಂತ್ ನಟನೆಯ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅನಂತ್ ನಾಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಪುಟ್ಟ ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಸಿನಿಮಾ ತಂಡ ಬಿಡುಗಡೆ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಆಗಸ್ಟ್ 12ರಂದು ಚಿತ್ರಮಂದಿರಕ್ಕೆ ಬರುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದು ಸ್ಯಾಂಡಲ್ ವುಡ್‌ ಮಂದಿಗೆ ಅಚ್ಚರಿ ಮೂಡಿಸಿದೆ.

ನಾನು ಸುದೀಪ್ ಸಹೇಬರ ಪರ; ವಿವಾದಕ್ಕೆ ಅಂತ್ಯ ಹಾಡಿದ ಯೋಗರಾಜ್ ಭಟ್

ಧನಂಜಯ್ ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಗೆಲುವಿನ ಹಾದಿಯಲ್ಲಿದ್ದಾರೆ. ಬಡವ ರಾಸ್ಕಲ್ ಸಕ್ಸಸ್‌ನಲ್ಲಿರುವ ಧನಂಜಯ್ ಇದೀಗ ಮಾನ್ಸೂನ್ ರಾಗ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಎರಡು ಬಹುನಿರೀಕ್ಷೆಯ ಸಿನಿಮಾಗಳು ಒಟ್ಟಿಗೆ ಬಂದಾಗ ಅಭಿಮಾನಿಗಳಲ್ಲಿ ಗೊಂದಲ ಮೂಡಿಸುವುದು ಸಹಜ. ಆದರೆ ಉತ್ತಮ ಸಿನಿಮಾವನ್ನು ಪ್ರೇಕ್ಷಕರು ಯಾವತ್ತು ಕೈಬಿಟ್ಟಲ್ಲ. ಹಾಗಾಗಿ ಯಾವ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲುತ್ತೊ ಆ ಸಿನಿಮಾ ಗೆದ್ದು ಬೀಗಲಿದೆ. ಇದಕ್ಕೆ ಉತ್ತರ ಆಗಸ್ಟ್ 12ರಂದೇ ಸಿಗಲಿದೆ.

ಸಂಕಷ್ಟದಲ್ಲಿ ಹೆಡ್ ಬುಷ್; ವಿವಾದದ ಬಗ್ಗೆ ಧನಂಜಯ್ ಹೇಳಿದ್ದೇನು?

ಅಂದಹಾಗೆ ಇತ್ತೀಚಿಗಷ್ಟೆ ಬಿಡುಗಡೆಯಾದ ಕೆಜಿಎಫ್-2 ಮತ್ತು ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಒಂದೇ ಸಮಯಕ್ಕೆ ತರಿಲೀಸ್ ಆಗಿದ್ದವು. ಒಂದು ದಿನದ ಅಂತರದಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕ್ಲ್ಯಾಶ್ ಆಗಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಯಶ್ ಇದೇನು ಎಲೆಕ್ಷನ್ ಅಲ್ಲ. ಒಂದು ಸಿನಿಮಾ ನೋಡಿದ ಬಳಿಕ ಮತ್ತೊಂದು ಸಿನಿಮಾ ನೋಡುತ್ತಾರೆ ಎಂದು ಹೇಳಿದ್ದರು. ಬಳಿಕ ಕೆಜಿಎಫ್-2 ಮುಂದೆ ವಿಜಯ್ ಬೀಸ್ಟ್ ಸಿನಿಮಾ ಮಂಡಿಯೂರಿತ್ತು. ಕೆಜಿಎಫ್-2 ದಾಖಲೆಯ ಕಲೆಕ್ಷನ್ ಮಾಡಿ ಬೀಗುತ್ತಿದೆ. ಇದೀಗ ಸ್ಯಾಂಡಲ್ ವುಡ್‌ನಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರು ಜೈ ಎನ್ನುತ್ತಾರೆ ಎಂದು ಕಾದುನೋಡಬೇಕು.