ನಟಿ ಗೆಹೆನಾ ವಸಿಷ್ಠ ವಿರುದ್ಧ ಮುಂಬೈ ಪೊಲೀಸರು ಕೇಸು ದಾಖಲಿಸಿದ್ದಾರೆ. ವಂದನಾ ತಿವಾರಿ ಎಂಬ ಮೂಲ ಹೆಸರಿನ ನಟಿ ಗೆಹನಾ ವಸಿಷ್ಠ ಎಂದೇ ಫೇಮಸ್. ಇದೀಗ ನಟಿಯ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲಿಸಲಾಗಿದೆ.

ತನ್ನನ್ನು ಬಲವಂತವಾಗಿ ಮೂವರು ಯುವಕರ ಜೊತೆ ಸೆಕ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಲವಂತಪಡಿಸಲಾಯಿತು ಎಂದು ಆರೋಪಿಸಿದ 24 ವರ್ಷದ ನಟಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸಿನಿಮಾದಲ್ಲಿ ಸೆಕ್ಸ್ ಸೀನ್ ಇರುವ ಬಗ್ಗೆ ನನಗೆ ಹೇಳಿರಲಿಲ್ಲ, ಸೀನ್ ಬರುವ ತನಕ ಇದನ್ನು ನನ್ನಿಂದ ಮುಚ್ಚಿಡಲಾಗಿತ್ತು ಎಂದಿದ್ದಾರೆ ಗೆಹನಾ.

ಯುವತಿಯರ ಬೆತ್ತಲೆ ಶೂಟ್: ಖ್ಯಾತ ನಟಿಯ ಪತಿಗೆ ಬಂಧನ ಭೀತಿ

ಇದೀಗ ಗೆಹನಾ ಮತ್ತು ಮೂವರ ವಿರುದ್ಧ ಮುಂಬೈ ಪೊಲೀಸರು ಕೇಸು ದಾಖಲಿಸಿದ್ದಾರೆ. ಅತ್ಯಾಚಾರ, ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಿದ್ದಕ್ಕೆ ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಮಿಸ್ ಏಷ್ಯಾ ಬಿಕಿನಿ ವಿನ್ನರ್ ಗೆಹನಾ ಗಂದಿ ಬಾತ್ ವೆಬ್ ಸಿರೀಸ್‌ನಲ್ಲಿ ನಟಿಸಿದ್ದರು. ಇದಲ್ಲದೆ ಹಿಂದಿ, ತೆಲುಗು ಸಿನಿಮಾ ಮತ್ತು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ. ನಟಿ 87 ಪೋರ್ನೋಗ್ರಫಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.