ಕಿರಿತೆರೆ ನಟಿ, ರೂಪದರ್ಶಿ ವೆಬ್ ಸೀರೀಸ್ ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. 

ಕಿರುತೆರೆ ನಟಿ ಗೆಹನಾ ವಸಿಷ್ಠ ಹೃದಯಾಘಾತದಿಂದ ಕುಸಿದು ಬಿದ್ದವರು. ಕೆಲದಿನಗಳಿಂದ ಬಿಡುವಿಲ್ಲದೇ ಹಗಲು- ರಾತ್ರಿ ಕೆಲಸ ಮಾಡುತ್ತಿದ್ದರು. ಸರಿಯಾಗಿ ಊಟ ಮಾಡದೇ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.  ವೆಬ್ ಸೀರೀಸ್‌ವೊಂದರ ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಮುಂಬೈನ ರಕ್ಷಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಬೆತ್ತಲಾಗಿ ದ್ರಾಕ್ಷಿ ಹಿಡಿದ ಸನ್ನಿ; ಸೆಕ್ಸಿ ಸೆನ್ಸೇಷನಲ್ ವಿಡಿಯೋ ವೈರಲ್!

ಗೆಹನಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಐಸಿಯುನಲ್ಲಿಡಲಾಗಿದೆ.  ಎನರ್ಜಿ ಡ್ರಿಂಕ್ಸ್ ಹಾಗೂ ತೆಗೆದುಕೊಂಡ ಮಾತ್ರೆಗಳ ಅಡ್ಡ ಪರಿಣಾಮದಿಂದ ಈ ರೀತಿ ಆಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. 

ಇಷ್ಟು ಚಿಕ್ಕ ಬಟ್ಟೆ ದೇವಸ್ಥಾನಕ್ಕೆ ಬೇಕಾ? ಅಜಯ್ ಪುತ್ರಿ ಟ್ರೋಲ್

ಗೆಹನಾ ಸ್ಥಿತಿ ಗಂಭೀರವಾಗಿದೆ. ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.  ಉಸಿರಾಡಲು ಕಷ್ಟಪಡುತ್ತಿದ್ದಾರೆ.  ಅವರನ್ನು ಐಸಿಯುನಲ್ಲಿಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಗೆಹನಾ ಇತ್ತೀಚಿಗೆ ಗಾಂಧಿ ಬಾತ್ ವೆಬ್ ಸೀರೀಸ್‌ನಲ್ಲಿ ನಟಿಸಿದ್ದರು.