Asianet Suvarna News

ಇಷ್ಟು ಚಿಕ್ಕ ಬಟ್ಟೆ ದೇವಸ್ಥಾನಕ್ಕೆ ಬೇಕಾ? ಅಜಯ್ ಪುತ್ರಿ ಟ್ರೋಲ್

 

ಬಾಲಿವುಡ್‌ ಸೆಲಬ್ರಿಟಿ ಕಪಲ್ ಅಜಯ್ ದೇವಗನ್‌ ಮತ್ತು ಕಾಜೋಲ್ ಪುತ್ರಿ ನೈತಾ ದೇವಸ್ಥಾನಕ್ಕೆ ಧರಿಸಿರುವ ಕ್ರಾಪ್ ಟಾಪ್ ಉಡುಪಿಗೆ ನೆಟ್ಟಿಗರು ಪುಲ್ ಗರಂ, ಇದಕ್ಕೆಲ್ಲಾ ಟ್ರೋಲ್ ಆಗ್ತಾರಾ?

Bollywood Ajay Devgn daughter Nysa trolled for outfit worn to temple in Mumbai
Author
Bangalore, First Published Nov 23, 2019, 11:14 AM IST
  • Facebook
  • Twitter
  • Whatsapp

ಬಾಲಿವುಡ್ ಹ್ಯಾಪಿ ಫ್ಯಾಮಿಲಿ ಅಂದ್ರೆ ಅಜಯ್-ಕಾಜೋಲ್ ಕುಟುಂಬ ಅಂತ ಎಷ್ಟೋ ಮಂದಿ ಹೇಳುತ್ತಾರೆ. ಅಜಯ್- ಕಾಜೋಲ್ ಇಬ್ಬರೂ ಸಿನಿಮಾದಷ್ಟೇ ಫ್ಯಾಮಿಲಿಗೂ ಟೈಂ ಕೊಡುತ್ತಾರೆ.

ಕೆಲ ದಿನಗಳ ಹಿಂದೆ ಅಜಯ್ ದೇವಗನ್‌ ಪುತ್ರಿ ಜೊತೆ ಮುಂಬೈನ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ದೇವಾಲಯಕ್ಕೆ ನೈಸಾ ಧರಿಸಿದ ಕ್ರಾಪ್ ಟಾಪ್ ಲುಕ್‌ ಟ್ರೋಲಿಗರಿಗೆ ಆಹಾರವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು 'ದೇವಸ್ಥಾನಕ್ಕೆ ಹೋಗ್ತಿದ್ದೀರಾ ಅಥವಾ ಜಿಮ್‌ಗಾ?', 'ನಾನು ಈ ರೀತಿ ದೇವಸ್ಥಾನಕ್ಕೆ ಹೋದರೆ ನಮ್ಮ ಅಪ್ಪ ಮನೆಯಿಂದ ಹೊರ ಹಾಕುತ್ತಾರೆ!' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಕಾಜೋಲ್ ಮಗಳ ಏರ್‌ಪೋರ್ಟ್ ಲುಕ್ ವೈರಲ್: ಟ್ರೋಲ್‌ಗೆ ಅಜಯ್ ತಿರುಗೇಟು

ಈ ಹಿಂದೆ ನೈಸಾ ಏರ್‌ಪೋರ್ಟ್‌ನಲ್ಲಿ ಪ್ರಯಾಣ ಮಾಡುವಾಗ ಧರಿಸಿದ ಉಡುಪಿನ ಬಗ್ಗೆಯೂ ಇದೇ ರೀತಿ ಟ್ರೋಲ್ ಆಗಿತ್ತು. ಆಗ ಅಜಯ್ ದೇವಗನ್ ತಿರುಗುತ್ತರ ನೀಡಿದ್ದರು.

 

 
 
 
 
 
 
 
 
 
 
 
 
 

#AjayDevgan with daughter #NysaDevgan snapped post temple visit in Mumbai today #instadaily #ManavManglani

A post shared by Manav Manglani (@manav.manglani) on Nov 20, 2019 at 10:46pm PST

Follow Us:
Download App:
  • android
  • ios