ಓ ಮೈ ಗಾಡ್, ಓ ಮೈ ಗಾಡ್ ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳನ್ನು ಮಾಡುವ ಮೂಲಕ ನೆಟ್ಟಿಗರನ್ನು ಮನೋರಂಜಿಸುತ್ತಿದ್ದ ಫನ್ ಬಕೆಟ್ ಅಲಿಯಾಸ್ ಭಾರ್ಗವನನ್ನು ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರದ ಬಗ್ಗೆ ಗಾಯಕಿ ಚಿನ್ಮಯಿ ಪ್ರತಿಕ್ರಿಯೆ ನೀಡಿದ್ದಾರೆ. 

'Omg Omg'ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದ ಭಾರ್ಗವ್‌ ರೇಪ್ ಕೇಸಲ್ಲಿ ಅರೆಸ್ಟ್! 

ಚಿನ್ಮಯಿ ವಿಡಿಯೋ:
'ಫನ್ ಬಕೆಟ್ ಭಾರ್ಗವ್ ಬಗ್ಗೆ ಈ ಹಿಂದೆಯೂ ಕೇಳಿದ್ದೆ. ಆತನೊಬ್ಬ ಸ್ತ್ರೀಲೋಲ. ಆತನ ಜೊತೆಗಿದ್ದ ಮಾಜಿ ಗರ್ಲ್‌ ಫ್ರೆಂಡ್‌ ಸಂದರ್ಶನವೊಂದರಲ್ಲಿ ಆತನ ಬಗ್ಗೆ ಮಾತನಾಡಿದ್ದಳು. ಸ್ಮಾರ್ಟ್ ಆಗಿ ಮಾತನಾಡಿ, ನಂಬಿಸಿ ಮೋಸ ಮಾಡುತ್ತಾರೆ. ಇಂಥವರ ಬಳಿ ಜಾಗೃತವಾಗಿರಬೇಕು. ಯಾರ ಜೊತೆ ಸ್ನೇಹ ಮಾಡಬೇಕು, ಎಷ್ಟು ಮುಂದುವರಿಯಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡು ಎಚ್ಚರ ವಹಿಸಬೇಕು,'ಎಂದು ಚಿನ್ಮಯಿ ಮಾತನಾಡಿದ್ದಾರೆ.

'ಇಂಥ ಪ್ರಕರಣಗಳಲ್ಲಿ ಅಪ್ರಾಪ್ತೆ ಬಾಲಕಿ ಅಥವ ಪೋಷಕರದ್ದು ತಪ್ಪು ಎನ್ನುವ ರೀತಿ ಬಿಂಬಿಸಲಾಗುತ್ತದೆ. ಮಕ್ಕಳನ್ನು ಹೇಗೆ ಬೆಳಸಬೇಕು ಎಂದು ದೂಷಿಸುತ್ತಾರೆ. ಅದು ಹೌದು. ನಿಜವೇ. ಆದರೆ ಭಾರ್ಗವ್‌‌ನಂಥ ವ್ಯಕ್ತಿಗಳು ಬಹಳಷ್ಟು ಜನರು ಸಮಾದಲ್ಲಿ ಇದ್ದಾರೆ.  ಬಾಲಕಿ ಪೋಷಕರನ್ನು ದೂರವಂತೆ, ಯುವಕರ ಪೋಷಕರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಕಲಿಸಿಕೊಡಬೇಕಿದೆ,' ಎಂದಿದ್ದಾರೆ.

ತರಕಾರಿ ತರೋಕೂ PPE ಕಿಟ್ ಧರಿಸಿ ಹೋಗ್ತಾರೆ ರಾಖಿ ಸಾವಂತ್..! 

'ಭಾರ್ಗವ್‌‌ನನ್ನ ಕೂಡ ಸರಿಯಾಗಿ ಸೆಕ್ಷುಯಲ್ ಗ್ರೂಮಿಂಗ್ ಮಾಡಬೇಕಿತ್ತು. ಚಿಕ್ಕ ವಯಸ್ಸಿನ ಹುಡುಗಿ ದೊಡ್ಡವರನ್ನು ಪ್ರೀತಿಸುತ್ತಿರುವೆ ಎಂದು ಹೇಳಿದಾಗ, ಆಕೆಗೆ ಬುದ್ಧಿ ಹೇಳಬೇಕು. ಇದು ಪ್ರೀತಿ ಅಲ್ಲ, ಪ್ರೀತಿ ಮಾಡಬೇಡ ಎಂದು ಹೇಳಬೇಕಿತ್ತು. 27 ವರ್ಷದ ಭಾರ್ಗವ್ 14ರ ಹುಡುಗಿಯನ್ನು ಪ್ರೀತಿಸುವುದು ತಪ್ಪು.  ದಡ್ಡರು ಅದನ್ನು ಪ್ರೀತಿ ಎಂದು ಕರೆಯುವುದು. ಕಾನೂನಿನ ಪ್ರಕಾರ 18 ವಯಸ್ಸಿಗೂ ಕಡಿಮೆ ಹುಡುಗಿಯರೂ ಯಾವ ನಿರ್ಧಾರವನ್ನೂ ಪೋಷಕರ ಸಮ್ಮತಿಯಿಲ್ಲದೇ ತೆಗೆದುಕೊಳ್ಳುವಂತೆ ಇಲ್ಲ. ಕಾನೂನಿನ ಪ್ರಕಾರವೇ ಈ ಕೇಸ್ ಗೆಲ್ಲಬೇಕಿದೆ,' ಎಂದು ಚಿನ್ಮಯಿ ಮಾತನಾಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ 14 ವರ್ಷ ಬಾಲಕಿಯನ್ನು  ಪರಿಚಯ ಮಾಡಿಕೊಂಡ ಭಾರ್ಗವ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡುವಂತೆ ಮನವಿ ಮಾಡಿಕೊಳ್ಳುತ್ತಾನೆ. ಒಪ್ಪಿಕೊಂಡ ಯುವತಿಯ ಜೊತೆ ಸ್ನೇಹವಾದ ಬಳಿಕ, ಭಾರ್ಗವ್ ಆಕೆಯನ್ನು ತಮ್ಮ ನಿವಾಸಕ್ಕೆ ಕರೆದುಕೊಂಡು ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಯುವತಿಯ ನಗ್ನ ವಿಡಿಯೋ ಸೆರೆ ಹಿಡಿದು ಪದೆ ಪದೇ ಮನೆಗೆ ಬರುವಂತೆ ಒತ್ತಾಯ ಮಾಡಿದ್ದಾನೆ. ಹುಡುಗಿ ಗರ್ಭಿಣಿಯಾದ ಬಳಿಕ ಪೋಷಕರಿಗೆ ವಿಚಾರ ತಿಳಿದಿದೆ ಆನಂತರ ವಿಶಾಖಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಕಸ್ಟಡಿಯಲ್ಲಿರುವ ಭಾರ್ಗವ್‌ಗೆ ವಿಚಾರಣೆ ಮಾಡಲಾಗಿದೆ. ಮಾಡಿದ ತಪ್ಪನ್ನು ಭಾರ್ಗವ್ ಒಪ್ಪಿಕೊಂಡಿದ್ದಾರೆ.