Asianet Suvarna News Asianet Suvarna News

ವಿಶ್ವದ ಶ್ರೀಮಂತರ ಗಾಯಕಿ ರಿಹಾನಾ ಒಟ್ಟು ಆಸ್ತಿ ಮೌಲ್ಯ ಇಷ್ಟಿದೆ!

ಪೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಶ್ರೀಮಂತ ಗಾಯಕಿಯರ ಪಟ್ಟಿಯಲ್ಲಿ ರಿಹಾನಾ ಮೊದಲ ಸ್ಥಾನದಲ್ಲಿದ್ದಾರೆ. 
 

Forbes says Singer Rihanna is officially a billionaire vcs
Author
Bangalore, First Published Aug 7, 2021, 1:02 PM IST
  • Facebook
  • Twitter
  • Whatsapp

ಭಾರತದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಟ್ವೀಟ್ ಮಾಡಿ,  'ನಾವು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ,' ಎನ್ನುವ ಟ್ವೀಡ್ ಮಾಡೋ ಮೂಲಕ ದೊಡ್ಡ ಚರ್ಚೆ ಹುಟ್ಟು ಹಾಕಿದ್ದ ಪಾಪ್ ಗಾಯಕಿ ರಿಹಾನಾ. ವಿಶ್ವದಲ್ಲಿಯೇ ಅಪಾರ ಜನಪ್ರಿಯತೆ ಪಡೆದಿರುವ ಈ ಗಾಯಕಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಕೆಲವು ದಿನಗಳ ಹಿಂದೆ ಪೋರ್ಬ್ಸ್‌ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಹಾನಾ ಸಹ ಸ್ಥಾನ ಪಡೆದುಕೊಂಡಿದ್ದಾರೆ. 

ವಿಶ್ವದ ಅತ್ಯಂತ ಸಿರಿವಂತ ಗಾಯಕಿಯರ ಪಟ್ಟಿಯಲ್ಲಿ ರಿಹಾನಾ ಮೊದಲ ಸ್ಥಾನ ಪಡೆದುಕೊಂಡು, ಅಧಿಕೃತವಾಗಿ ಬಿಲಿಯನೇರ್ ಪಟ್ಟಿ ಸೇರಿದ್ದಾರೆ.  ಈ ವರದಿಯಲ್ಲಿ ರಿಹಾನಾ ಒಟ್ಟು ಆಸ್ತಿ 1.7 ಬಿಲಿಯನ್ ಡಾಲರ್ಸ್ ಎಂದು ವರದಿಯಾಗಿದೆ. ಈ ಆಸ್ತಿ ಗಳಿಕೆಗೆ ಕಾರಣ ಗಾಯನ ಮಾತ್ರವಲ್ಲ, ಬಹುತೇಕ ಬ್ಯೂಟಿ ಸೌಂದರ್ಯವರ್ಧಕ ಕಂಪೆನಿಯ ವಸ್ತುಗಳು ಪ್ರಮೋಶನ್ ಮತ್ತು ಉಳಿದ ಆದಾಯ ಉಡುಪು ಕಂಪೆನಿಗಳಿಂದಲೂ ಬರುತ್ತಿವೆ, ಎಂದು ವರದಿಯಾಗಿದೆ. 

Forbes says Singer Rihanna is officially a billionaire vcs

ಪಾಪ್ ಗಾಯಕಿ ರಿಹಾನಾ ಫೆಂಟಿ ಬ್ಯೂಟಿ ಕೆಂಪನಿ ಜೊತೆ ಕೈ ಜೋಡಿಸಿದ್ದು, ಶೇ.50ರಷ್ಟು ಪಾಲು ಹೊಂದಿದ್ದಾರೆ. ಸಿರಿವಂತ ಗಾಯಕಿಯರ ಪಟ್ಟಿ ಮಾತ್ರವಲ್ಲದೇ ಓಪ್ರಾ ವಿನ್ಫ್ರೇ ನಂತರ ಎರಡನೇ ಶ್ರೀಮಂತ ಮನೋರಂಜಕಿಯಾಗಿಯೂ ಈ ವಿಶ್ವ ಪ್ರಸಿದ್ಧ ಗಾಯಕಿ ಗುರುತಿಸಿಕೊಂಡಿದ್ದಾರಂದು ಪೋರ್ಬ್ಸ್ ಹೇಳಿದೆ. 

ಗಣೇಶ ಪೆಂಡೆಂಟ್ ಧರಿಸಿ ಅರೆಬೆತ್ತಲಾದ ರಿಹಾನಾ; ಭಾರತೀಯರ ತೀವ್ರ ಆಕ್ರೋಶ!

ವಿಶ್ವದ ಸಿರಿವಂತೆಯಾಗಿ ಗುರುತಿಸಿಕೊಂಡಿರುವ ರಿಹಾನಾ ಹುಟ್ಟಿದ್ದು ಕೆರೆಬಿಯನ್ ದ್ವೀಪ ಸಮೂಹದ ದೇಶ ಬಾರ್ಬೋಡೋಸ್‌ನಲ್ಲಿ.  ರಿಹಾನ್ ತಂದೆ ಕುಡುಕ, ಪ್ರತಿದಿನ ತಾಯಿಯನ್ನು ಹೊಡೆಯುತ್ತಿದ್ದರು. ತುಂಬಾ ಕಷ್ಟದಿಂದ ಬೆಳೆದ ರಿಹಾನಾ ಬಾಲ್ಯದಲ್ಲಿ ಬಟ್ಟೆ ಮಾರುವ ಕೆಲಸ ಮಾಡುತ್ತಿದ್ದರು. ಅಪ್ಪನಿಗೆ ಪದೆ ಪದೇ ಮದುವೆಯಾಗುವ ಚಟ ಇತ್ತು, ಸುಮಾರು 5 ಮದುವೆಗಳಾಗಿದ್ದರು ಎನ್ನಲಾಗಿದೆ. ಈ ಎಲ್ಲಾ ಒತ್ತಡಗಳಿಂದ ರಿಹಾನಾಗೆ ವಿಚಿತ್ರ ಕಾಯಿಲೆ ಆವರಿಸಿತ್ತು, ಅಸಾಧ್ಯ ತಲೆ ನೋವು ಬರುತ್ತಿತ್ತು. ಮೆದುಳಿನ ಟ್ಯೂಮರ್ ಇರಬೇಕು ಎಂದು ವೈದ್ಯರು ಹೇಳಿದ್ದರು. ರಿಹಾನಾ ತಂದೆ ತಾಯಿ ಬೇರಾದ ಮೇಲೆ ರಿಹಾನಾ ತಲೆ ನೋವು ಹೊರಟು ಹೋಯಿತು.  ಬಾಲ್ಯದ ನೋವು ಮರೆಯಲು ಹಾಡಲು ಪ್ರಾರಂಭ ಮಾಡಿ, ಇಂದು ವಿಶ್ವದ ಟಾಪ್ ಪಾಪ್ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

Follow Us:
Download App:
  • android
  • ios