ಬಹುನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಸೆಟ್ ನಲ್ಲಿ ಅಗ್ನಿ ಅವಘಢ ಸಂಭವಿಸಿದ್ದು ಸುಮಾರು 2 ಕೋಟಿ ವೆಚ್ಚದ ವಸ್ತುಗಳು ಅಗ್ನಿಗೆ ಆಹುತಿಯಾಗಿದೆ. ಅವಗಢಕ್ಕೆ ಕಾರಣ ತಿಳಿದು ಬಂದಿಲ್ಲ. 

ಮೇ 24 ಕ್ಕೆ ಮೋದಿ ಬಯೋಪಿಕ್ ರಿಲೀಸ್

ತೆಲಂಗಾಣದ ಕೋಕೋಪೇಟ್ ನ ಅಲ್ಲು ಅರವಿಂದ್ ಫಾರ್ಮ್ ನಲ್ಲಿ ಸೆಟ್ ಹಾಕಲಾಗಿತ್ತು. ನಿನ್ನೆ ಮಧ್ಯರಾತ್ರಿ ಅಗ್ನಿ ಅವಗಢ ಸಂಭವಿಸಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈ ವೇಳೆ ಶೂಟಿಂಗ್ ನಡೆಯುತ್ತಿರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ರಾಧಾ ಮಿಸ್ ಪಾತ್ರಕ್ಕೆ ಕಿರುತೆರೆ ರಾಧಿಕಾ ಪಂಡಿತ್!

ಉಯ್ಯಲವಾಡ ನರಸಿಂಹ ರೆಡ್ಡಿ ಜೀವನಾಧಾರಿತ ಐತಿಹಾಸಿಕ ಚಿತ್ರ ಇದಾಗಿದೆ. ತಮಿಳು, ತೆಲುಗು ಮಲಯಾಳಂನಲ್ಲಿ ಈ ಚಿತ್ರ ತೆರೆ ಕಾಣಲಿದೆ. ಚಿರಂಜೀವಿ, ಅಮಿತಾಬ್ ಬಚ್ಚನ್, ಜಗಪತಿ ಬಾಬು, ನಯನತಾರಾ ಸೇರಿದಂತೆ ಸ್ಟಾರ್ ನಟರ ತಾರಾಗಣವೇ ಈ ಚಿತ್ರಕ್ಕಿದೆ. ವಿಶೇಷ ಎಂದರೆ ಕನ್ನಡದ ನಟ ಕಿಚ್ಚ ಸುದೀಪ್ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.