Asianet Suvarna News Asianet Suvarna News

'ಫೈಟರ್'​ ಹಾಡು ರಿಲೀಸ್​: ದೀಪಿಕಾ ಬೋಲ್ಡ್​ ಅವತಾರ ನೋಡಿ ಬಿಚ್ಚಿದ್ರೆ ಮಾತ್ರ ಬೆಲೆನಾ ಕೇಳಿದ ನೆಟ್ಟಿಗರು!

'ಫೈಟರ್'​ ಚಿತ್ರದ  ಇಷ್ಕ್ ಜೈಸಾ ಕುಚ್ ಹಾಡು ರಿಲೀಸ್​ ಆಗಿದೆ: ದೀಪಿಕಾ ಬೋಲ್ಡ್​ ಅವತಾರ ನೋಡಿ ಬಿಚ್ಚಿದ್ರೆ ಮಾತ್ರ ಬೆಲೆನಾ ಅಂತ ಕೇಳ್ತಿದ್ದಾರೆ  ನೆಟ್ಟಿಗರು!
 

Fighter Song Ishq Jaisa Kuch released fans react to bold scenes by Deepika Padukone suc
Author
First Published Dec 22, 2023, 5:44 PM IST

ಅನಿಮಲ್​ ಚಿತ್ರದಲ್ಲಿ ಅರೆಬರೆ ಬೆತ್ತಲಾಗಿ ರಶ್ಮಿಕಾ ಕಾಣಿಸಿಕೊಂಡರೂ, ಪೂರ್ತಿ ಬೆತ್ತಲಾಗಿ ಕಾಣಿಸಿಕೊಂಡ ತೃಪ್ತಿ ಡಿಮ್ರಿಯೇ ನ್ಯಾಷನಲ್​ ಕ್ರಷ್​ ಆಗಿ ಸಕತ್​ ಡಿಮ್ಯಾಂಡ್​ ಕುದುರಿಸಿಕೊಳ್ತಿರೋ ಈ ಹೊತ್ತಿನಲ್ಲಿ, ಈಗ ಇನ್ನೊಂದು ಬೋಲ್ಡ್​ ಅವತಾರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಫೈಟರ್​ ಚಿತ್ರದಲ್ಲಿ ನಟ ಹೃತಿಕ್​ ರೋಷನ್​ ಜೊತೆ ಬೀಚ್​ನಲ್ಲಿ ರೊಮ್ಯಾನ್ಸ್​ ಮಾಡಿರುವ ಇಷ್ಕ್ ಜೈಸಾ ಕುಚ್ ಹಾಡು ರಿಲೀಸ್​ ಆಗಿದೆ. ಇದಾಗಲೇ ಪಠಾಣ್​ನಲ್ಲಿ ಶಾರುಖ್​ ಖಾನ್​ ಜೊತೆ ಹಸಿಬಿಸಿಯಾಗಿ ನಟಿಸಿರುವ ದೀಪಿಕಾ ಪಡುಕೋಣೆ, ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಟ ಹೃತಿಕ್​ ರೋಷನ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.  ಪಠಾಣ್​ನಲ್ಲಿ ಕೇಸರಿ ಬಿಕಿನಿ ಧರಿಸಿ ಬೇಷರಂ ರಂಗ್​ ಎಂದು ಹಾಡಿ ವಿವಾದ ಸೃಷ್ಟಿಸಿದ್ದರೆ, ಈಗ ಕಪ್ಪು  ಬಿಕಿನಿ ಧರಿಸಿ ರೊಮ್ಯಾನ್ಸ್​ ಮಾಡಿದ್ದಾರೆ.   

 ಹೃತಿಕ್ ರೋಷನ್ ಶರ್ಟ್​ಲೆಸ್ ಆಗಿ ಕಾಣಿಸಿಕೊಂಡಿದ್ದರೆ, ದೀಪಿಕಾ ಪೂರ್ಣ ಬೆತ್ತಲಾಗಲಿಲ್ಲ ಎನ್ನುವುದಷ್ಟೇ ಸಮಾಧಾನ ಎನ್ನುತ್ತಿದ್ದಾರೆ ನೆಟ್ಟಿಗರು.  ನೀರಿನಲ್ಲಿ ವಾಟರ್ ಬೇಬಿ ಪೋಸ್​ನಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ವಿಶಾಲ್ ಹಾಗೂ ಶೇಖರ್ ಕಂಪೋಸ್ ಮಾಡಿದ್ದಾರೆ. ಕುಮಾರ್ ಲಿರಿಕ್ಸ್ ಬರೆದಿದ್ದು ಮೆಲೊ ಡಿ ರ್ಯಾಪ್ ಒದಗಿಸಿದ್ದಾರೆ. ಈ ಹಾಡಿಗೆ ಹೃತಿಕ್ ರೋಷನ್​ ಗರ್ಲ್​ಫ್ರೆಂಡ್​  ಗಾಯಕಿ ಸಬಾ ಆಜಾದ್ ಸೇರಿದಂತೆ ಹಲವರು ಅಭಿನಂದನೆ ಸೂಚಿಸಿದ್ದಾರೆ. ಹಾರ್ಟ್​ ಮತ್ತು ಫೈರ್​ ಇಮೋಜಿ ಹಾಕಿ ಖುಷಿ ಪಟ್ಟಿದ್ದಾರೆ. ಈ ಹಾಡಿನಲ್ಲಿ ದೀಪಿಕಾ ಮತ್ತು ಹೃತಿಕ್​ ರೋಷನ್​ ಕೆಮೆಸ್ಟ್ರಿಗೆ ಹಲವು ಫ್ಯಾನ್ಸ್​ ಮನಸೋತು ಫಿದಾ ಆಗಿದ್ದರೆ, ಇನ್ನು ಕೆಲವರು ಮಾತ್ರ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್​ನಲ್ಲಿ ನಟಿಯರು ಬೆತ್ತಲಾದರೆ ಮಾತ್ರ ಬೆಲೆ ಎನ್ನುವುದು ದಿನೇ ದಿನೇ ಸಾಬೀತಾಗುತ್ತಿದೆ ಎಂದು ಹೇಳುತ್ತಿದ್ದಾರೆ.  

ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್'​ ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಕರಣ್‌ ಸಿಂಗ್ ಗೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜಿಜ್ ತಾರಾಗಣದಲ್ಲಿದ್ದಾರೆ.  ಐಮ್ಯಾಕ್ಸ್ ತ್ರೀಡಿ ವರ್ಷನ್‌ನಲ್ಲೂ ಈ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು. 

ಈ ಹಿಂದೆ ಚಿತ್ರದ ಟೀಸರ್​ ರಿಲೀಸ್​ ಆದಾಗಲೂ ಸಾಕಷ್ಟು ಜನರು ಟೀಕೆ ಮಾಡಿದ್ದರು.  ಫೈಟರ್‌ ಜೆಟ್‌ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ.  ಮೊನಾಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.  ಈ  ಚಿತ್ರ ದೇಶ ಭಕ್ತಿ ಮೆರೆಯುವ ಚಿತ್ರ ಎನ್ನಲಾಗಿದೆ. ಟೀಸರ್ ಕೊನೆಯಲ್ಲಿ ಹೃತಿಕ್ ರಾಷ್ಟ್ರಧ್ವಜ ಹಿಡಿದು ಬರುತ್ತಾರೆ. ಅಲ್ಲಿಗೆ ದೇಶದ ಬಗ್ಗೆ ಇರುವ ಚಿತ್ರ ಇದಾಗಿದೆ.  ದೇಶಭಕ್ತಿ ಮೆರೆಯುವ ಚಿತ್ರಕ್ಕೂ ಇಂಥ ಕಳಪೆ  ದೃಶ್ಯಗಳು ಬೇಕೆ ಎಂದು ಕೇಳುತ್ತಿದ್ದರು.

ನನ್ನಪ್ಪ ಮಹಾ ದರೋಡೆಕೋರ: ಕಾಫಿ ವಿತ್​ ಕರಣ್​ನಲ್ಲಿ ಶಾಕಿಂಗ್​ ವಿಷ್ಯ ಬಹಿರಂಗಪಡಿಸಿದ ಅಜಯ್​ ದೇವಗನ್​!

Follow Us:
Download App:
  • android
  • ios