ನಟನಿಗೆ ಒತ್ತಾಯಪೂರ್ವಕವಾಗಿ ಮುತ್ತಿಕ್ಕಿದ್ದ ಲೇಡಿ ಫ್ಯಾನ್ ನಡೆಗೆ ತೀವ್ರ ಆಕ್ರೋಶ
ಪ್ಯಾರಿಸ್ ಒಲಿಂಪಿಕ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಲಿವುಡ್ ನಟ ಟಾಮ್ ಕ್ರೂಸ್‌ಗೆ ಮಹಿಳಾ ಅಭಿಮಾನಿಯೊಬ್ಬಳು ಒತ್ತಾಯಪೂರ್ವಕವಾಗಿ ಮುತ್ತಿಕ್ಕಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಲಿವುಡ್ ನಟ ಟಾಮ್ ಕ್ರೂಸ್‌ಗೆ ಮಹಿಳಾ ಅಭಿಮಾನಿಯೊಬ್ಬಳು ಒತ್ತಾಯಪೂರ್ವಕವಾಗಿ ಮುತ್ತಿಕ್ಕಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಪ್ಯಾರಿಸ್ ಒಲಿಂಪಿಕ್ ಸಮಾರಂಭದಲ್ಲಿ ಟಾಮ್ ಕ್ರೂಸ್ ಅವರು ಸಾಹಸಮಯ ರೀತಿಯಲ್ಲಿ ವೇದಿಕೆ ಪ್ರವೇಶಿಸಿದರು.
ಫ್ರಾನ್ಸ್‌ನ ಅತೀ ದೊಡ್ಡ ಸ್ಟೇಡಿಯಂಗಳಲ್ಲಿ ಒಂದಾದ 'ಸ್ಟಡೇ ಡೆ ಫ್ರಾನ್ಸ್‌ನ' ಮಳಿಗೆಯಿಂದ ಕೆಳಗೆ ಜಂಪ್ ಮಾಡಿ ಕೆಳಗೆ ಬಂದ ಅವರ ಸಡನ್ ಎಂಟ್ರಿಗೆ ಅಲ್ಲಿದ್ದ ಅಭಿಮಾನಿಗಳೆಲ್ಲಾ ಫುಲ್ ಖುಷ್ ಆಗಿದ್ದರು. ಇದೇ ವೇಳೆ ಅಲ್ಲೇ ಇದ್ದ ಮಹಿಳಾ ಅಭಿಮಾನಿಯೊಬ್ಬಳು ನಟ ಟಾಮ್ ಕ್ರೂಸ್‌ಗೆ ಒತ್ತಾಯಪೂರ್ವಕವಾಗಿ ಕೆನ್ನೆಗೆ ಮುತ್ತಿಕ್ಕಿದ್ದಾಳೆ. ಅಭಿಮಾನಿಗಳು ನಟ ಟಾಮ್ ಕ್ರೂಸ್ ಅವರನ್ನು ಸುತ್ತುವರೆದಿದ್ದಾಗ ಘಟನೆ ನಡೆದಿದೆ. ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ವೀಡಿಯೋದಲ್ಲಿ ಇದ್ದ ಅಭಿಮಾನಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ನಿವಾಸದ ಎದುರೇ ಅಪ್ಪಿಕೊಂಡು ಮುದ್ದಿಸುತ್ತಾ ತುಟಿಗೆ ತುಟಿ ಸೇರಿಸಿದ ಜೋಡಿ; ವಿಡಿಯೋ ವೈರಲ್
ಕೈಯಲ್ಲಿ ಮೊಬೈಲ್ ಹಿಡಿದು ವೀಡಿಯೋ ಮಾಡುತ್ತಿದ್ದ ಮಹಿಳಾ ಅಭಿಮಾನಿ ಟಾಮ್ ಕ್ರೂಸಿಯ ಕತ್ತನ್ನು ಹಿಡಿದೆಳೆದು ಆತನ ಕೆನ್ನೆಗೆ ಮುತ್ತಿಕ್ಕಿದ್ದಾಳೆ ಈ ಮಹಿಳಾ ಅಭಿಮಾನಿಯ ನಡೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದು, ಒಂದು ವೇಳೆ ಪಾತ್ರಗಳು ಬದಲಾಗಿದ್ದರೆ ಹೇಗಿರುತ್ತಿತ್ತು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಒಂದು ವೇಳೆ ಮಹಿಳಾ ಸೆಲೆಬ್ರಿಟಿಗೆ ಪುರುಷನೋರ್ವ ಹೀಗೆ ಮಾಡಿದ್ದಾರೆ ಹೇಗಿರುತ್ತಿತ್ತು ಊಹಿಸಿಕೊಳ್ಳಿ ಇದು ಉಲ್ಟಾ ಆಗಿದ್ದರೆ ಹೇಗಿರಬಹುದು ಎಂಬುದನ್ನು ನೋಡುವುದಕ್ಕೆ ಬಯಸುವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಒಂದು ವೇಳೆ ಪುರುಷನೋರ್ವ ಹಾಲಿವುಡ್ ನಟಿಯರಾದ ಟೈಲರ್ ಸ್ವಿಫ್ಟ್ ಅವರನ್ನೋ ಅಥವಾ ಅರಿಯಾನಾ ಗ್ರಾಂಡೆ ಅವರನ್ನೋ ಹೀಗೆ ಎಳೆದಾಡಿ ಕಿಸ್ ಮಾಡಿದ್ದರೆ ಏನಾಗುತ್ತಿತ್ತು ಎಂಥಹಾ ಹುಚ್ಚು ಜಗತ್ತಿನಲ್ಲಿ ನಾವು ವಾಸ ಮಾಡುತ್ತಿದ್ದೇವೆ ಎಂದು ದೂರಿದ್ದಾರೆ. ಟಾಮ್ ಕ್ರೂಸಿ ಅವರು ಪ್ಯಾರಿಸ್ ಒಲಿಂಪಿಕ್‌ನಿಂದ ನಿರ್ಗಮಿಸುವ ವೇಳೆ ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿದ್ದು, ಅವರು ವೈಟ್ ಟೀ ಶರ್ಟ್‌ಗೆ ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದರು. ಥ್ಯಾಂಕ್ಯೂ ಪ್ಯಾರಿಸ್ ಈಗ ಲಾಸ್ ಏಂಜಲೀಸ್‌ನತ್ತ ಪ್ರಯಾಣ ಎಂದು ಅವರು ಬರೆದುಕೊಂಡಿದ್ದರು. ಇನ್ನು ಟಾಮ್ ಕ್ರೂಸಿ ಸಿನಿಮಾ ಬಗ್ಗೆ ಹೇಳುವುದಾದರೆ ಅವರು 'ಮಿಷನ್ ಇಂಪಾಸಿಬಲ್ ಡೆಡ್ ರೆಕೋನಿಂಗ್ ಪಾರ್ಟ್ 2ಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾವೂ 2025ರ ಮೇ 23ರಂದು ಬಿಡುಗಡೆಯಾಗಲಿದೆ.
ತ್ರಿಬಲ್ ರೈಡಿಂಗ್ ಬೈಕ್‌ನಲ್ಲಿ ಜೋಡಿಯ ಕಿಸ್ಸಿಂಗ್: ಆಕ್ರೋಶ ಹೆಚ್ಚಿಸಿದ ವೈರಲ್ ವಿಡಿಯೋ!
2007ರಲ್ಲಿ ನಡೆದ ತೀವ್ರ ವಿವಾದಕ್ಕೆ ಕಾರಣವಾದ ಶಿಲ್ಪಾ ಶೆಟ್ಟಿ ಹಾಗೂ ಹಾಲಿವುಡ್ ನಟ ರಿಚರ್ಡ್ ಗೇರೆ ಕಿಸ್ಸಿಂಗ್ ಪ್ರಕರಣವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಜೊತೆಯಾಗಿ ಶಿಲ್ಪಾಶೆಟ್ಟಿ ಜೊತೆ ವೇದಿಕೆ ಹಂಚಿಕೊಂಡಿದ್ದ ಹಾಲಿವುಡ್ ನಟನಾದ ರಿಚರ್ಡ್ ಗೇರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ತಬ್ಬಿಕೊಂಡು ಅಶ್ಲೀಲವಾಗಿ ಮುತ್ತಿಕ್ಕಿದ್ದರು.