ಸೂಟ್ ಆಗುತ್ತೋ, ಇಲ್ವೋ, ಶಾರುಖ್ ಮಗಳು ಸುಹಾನಾ ಹೊಸ ಸ್ಟೈಲ್ ಈಗ ಟ್ರೆಂಡ್!

ಕ್ರಿಸ್ಮಸ್ ಅಂದ ತಕ್ಷಣ ರೆಡ್ ಅಥವಾ ಬಿಳಿ ಬಣ್ಣದ ಡ್ರೆಸ್ ನಮ್ಮ ಕೈಗೆ ಬರುತ್ತೆ. ಆದ್ರೆ ಶಾರುಕ್ ಖಾನ್ ಮಗಳು ಸುಹಾನಾ ಹೊಸ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಅವರ ನ್ಯೂ ಲುಕ್ ಎಲ್ಲರನ್ನು ಆಕರ್ಷಿಸಿದೆ. 
 

Fashion Diva Suhana Khan wore  floral gown on Christmas

ಕ್ರಿಸ್ಮಸ್ (Christmas) ಸಂದರ್ಭದಲ್ಲಿ ಬಹುತೇಕ ಸೆಲೆಬ್ರಿಟಿಗಳು ರೆಡ್ ಅಥವಾ ಬಿಳಿ ಬಣ್ಣದ ಔಟ್ ಫಿಟ್ ನಲ್ಲಿ ಕಾಣಿಸಿಕೊಳ್ತಾರೆ. ಕ್ರಿಸ್ಮಸ್ ಸಮಯದಲ್ಲಿ ಈ ಕಲರ್ ಡ್ರೆಸ್ (color dress) ಧರಿಸೋದು ಒಂದು ಟ್ರೆಂಡ್ ಆಗಿದೆ. ಆದ್ರೆ ಈ ಬಾರಿ ಕ್ರಿಸ್ಮಸ್ ಡ್ರೆಸ್ ಟ್ರೆಂಡ್ ಸ್ವಲ್ಪ ಬದಲಾದಂತೆ ಕಾಣ್ತಿದೆ. ಬರೀ ಕೆಂಪು ಮತ್ತು ಬಿಳಿ ಬಣ್ಣದ ಡ್ರೆಸ್ ಮಾತ್ರವಲ್ಲ ಹೂವಿರುವ ಕಲರ್ಫುಲ್ ಡ್ರೆಸ್ ಧರಿಸಿ, ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ (Bollywood Badshah Shah Rukh Khan) ಮಗಳು ಎಲ್ಲರ ಗಮನ ಸೆಳೆದಿದ್ದಾರೆ. ಯಸ್, ಈ ಬಾರಿ ಸುಹಾನಾ ಖಾನ್ (Suhana Khan) ಕ್ರಿಸ್ಮಸ್ ಡ್ರೆಸ್ ಸಂಪೂರ್ಣ ಭಿನ್ನವಾಗಿತ್ತು.

ಕ್ರಿಸ್ಮಸ್‌ನಲ್ಲಿ ಸುಹಾನಾ ರೋಮಾಂಚಕ ಸನ್‌ಡ್ರೆಸ್ ಧರಿಸಿ ಮಿಂಚಿದ್ದಾರೆ. ಇದು ಕ್ರಿಸ್ಮಸ್ ಸ್ಟೈಕ್ ಗೆ ವಿಶೇಷ ಲುಕ್ ನೀಡಿದೆ. ಸುಹಾನಾ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್, ಕ್ರಿಸ್ಮಸ್ ಬ್ರಂಚ್‌ಗೆ ಈ ಡ್ರೆಸ್ ಧರಿಸಿ ಹಾಜರಾಗಿದ್ದರು. ಪ್ರಸಿದ್ಧ ಫ್ಯಾಷನ್ ಬ್ರ್ಯಾಂಡ್ ಅಲೆಮೈಸ್‌ನಿಂದ ಸುಂದರವಾದ ಡ್ರೆಸನ್ನು ಸುಹಾನಾ ಆಯ್ಕೆ ಮಾಡ್ಕೊಂಡಿದ್ದರು. ಈ ಡ್ರೆಸ್ ಅವರಿಗೆ ಗ್ಲಾಮರ್ ಲುಕ್ ನೀಡಿತ್ತು. ಆಫ್ ವೈಟ್ ಬೇಸ್ ಹೊಂದಿರುವ ಈ ಡ್ರೆಸ್ ಕಡು ಹಸಿರು, ಗುಲಾಬಿ, ಹಳದಿ, ನೇರಳೆ ಹೂವುಗಳು ಮತ್ತು ಎಲೆಗಳ ಡಿಸೈನ್ ಹೊಂದಿತ್ತು. ಈ ಸಂಡ್ರೆಸ್ ಎಲ್ಲರಿಗಿಂತ ಭಿನ್ನವಾಗಿರಲು ಕಾರಣ ಅದರ ಮುದ್ರಣ. ಬಿಳಿ ಮತ್ತು ಹಸಿರು ಬಣ್ಣದ ಬೇಸ್ ಫ್ಯಾಬ್ರಿಕ್ ಡ್ರೆಸ್ ಗೆ ವಿಶೇಷ ಮೆರಗು ನೀಡಿತ್ತು.  

ಬೇರೆ ಹೆಣ್ಣಿಗೆ ಆಕರ್ಷಿತರಾಗಿದ್ದಾರಾ ಬೋನಿ ಕಪೂರ್? ಹೆಂಡ್ತಿ ಮೇಲೆ ಪ್ರೀತಿ ಇದೆ ಅಂದಿದ್ದೇಕೆ?

ಕ್ರಿಸ್ಮಸ್ ಪಾರ್ಟಿಯಲ್ಲಿ ಭಿನ್ನವಾಗಿ ಕಾಣಿಸಿಕೊಂಡ ಸುಹಾನಾ ಡ್ರೆಸ್ ಆಕರ್ಷಕವಾಗಿದ್ದು ಮಾತ್ರವಲ್ಲದೆ ಬೆಲೆ ಕೂಡ ದುಬಾರಿ. ವೆಬ್ ಸೈಟ್ ಮಾಹಿತಿ ಪ್ರಕಾರ ಸುಹಾನಾ ತಮ್ಮ ಈ ಡ್ರೆಸ್ ಗೆ 40,564 ರೂಪಾಯಿ ಖರ್ಚು ಮಾಡಿದ್ದಾರೆ. ಸುಹಾನಾ ಈ ಹೂವಿನ ಉಡುಪನ್ನು ತಂಪಾದ ಪ್ರಾಡಾ ಬ್ಯಾಗ್‌ನೊಂದಿಗೆ ಮ್ಯಾಚ್ ಮಾಡಿದ್ದರು. ಕೈಗೆ ರೌಂಡ್ ಸ್ಟಡ್ ಮತ್ತು ಬಳೆಗಳನ್ನು ಧರಿಸಿದ್ದರು. ನ್ಯೂಡ್ ಮೇಕಪ್ ಮತ್ತು ಓಪನ್ ಹೇರ್ ಕ್ರಿಸ್ಮಸ್ ನೋಟಕ್ಕೆ ಪರ್ಫೆಕ್ಟ್ ಆಗಿತ್ತು. 

ಸ್ಟೈಲ್ ವಿಷ್ಯದಲ್ಲಿ ಸುಹಾನಾ ಯಾವ ಹೀರೋಯಿನ್ ಗಿಂತ ಕಡಿಮೆ ಏನಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಖಾನ್ ಸಖತ್ ಆಕ್ಟಿವ್ ಆಗಿದ್ದಾರೆ. ಪಾರ್ಟಿ ಇರಲಿ ಹಬ್ಬವಿರಲಿ ತಮ್ಮ ಸ್ಟೈಲ್, ಡ್ರೆಸ್ ಮೂಲಕ ಸುಹಾನಾ ಎಲ್ಲರ ಗಮನ ಸೆಳೆಯುತ್ತಾರೆ. ಕೆಲ ದಿನಗಳ ಹಿಂದೆ ಸುಹಾನಾ ರೆಡ್ ಡ್ರೆಸ್ನಲ್ಲೂ ಮಿಂಚಿದ್ದರು. ಕ್ರಿಸ್ಮಸ್ಗೆ ಕೆಲ ದಿನ ಮೊದಲು ಕೆಂಪು ಔಟ್ ಫಿಟ್ ನಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದ ಸುಹಾನಾ ಎಲ್ಲರ ಗಮನ ಸೆಳೆದಿದ್ದರು.  ಸದ್ಯ ಸುಹಾನಾ ತಮ್ಮ ರಿಲೇಶನ್ಶಿಪ್ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಸುಹಾನಾ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಪ್ರೀತಿಯಲ್ಲಿದ್ದಾರೆ ಎಂಬ ವಿಷ್ಯ ಚರ್ಚೆಯಲ್ಲಿದೆ. ಇಬ್ಬರು ಶೀಘ್ರವೇ ಮದುವೆ ಆಗ್ತಾರೆ ಎನ್ನಲಾಗ್ತಿದೆ. ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರೂ ಆಗಾಗಾ ಮೀಡಿಯಾ ಮುಂದೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಯನ್ನು ನೋಡಲು ಕಾತರರಾಗಿದ್ದು, ಸುಹಾನಾ ಹಾಗೂ ಅಗಸ್ತ್ಯ ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ದಾರೆ.

ನೆಟ್ಟಿಗರ ಮನ ಗೆದ್ದ ಆಲಿಯಾ ಮಗಳು ರಾಹಾ, ವಿಡಿಯೋ ನೋಡಿದ್ರೆ ಮುದ್ದು ಮಾಡೋಣ ಅನ್ಸುತ್ತೆ!

ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಸುಹಾನಾ ಖಾನ್ 20 ಕೋಟಿಗಿಂತಲೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಮೇಬೆಲ್ಲೈನ್ ಮತ್ತು ಲಕ್ಸ್‌ನಂತಹ ಬ್ರ್ಯಾಂಡ್‌ಗಳ ಜಾಹೀರಾತಿನ ಹೊರತಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ ಸುಹಾನಾ ಖಾನ್.

Latest Videos
Follow Us:
Download App:
  • android
  • ios