Asianet Suvarna News Asianet Suvarna News

ನಯನತಾರಾ, ವಿಘ್ನೇಶ್​ ಮಕ್ಕಳ ಫೋಟೋ ರಿವೀಲ್​ ಆದ್ರೂ ಫ್ಯಾನ್ಸ್‌ಗೆ ನಿರಾಸೆ!

ದಾಂಪತ್ಯಕ್ಕೆ ಕಾಲಿಟ್ಟು ಇನ್ನೂ ತಿಂಗಳು ನಾಲ್ಕು ಆಗುವುದರಲ್ಲಿಯೇ ಅವಳಿ ಮಕ್ಕಳಿಗೆ ಪೋಷಕರಾದ ನಯನತಾರಾ ಮತ್ತು ವಿಘ್ನೇಶ್ ದಂಪತಿ ಮಕ್ಕಳ ಫೋಟೋ ಶೇರ್ ಮಾಡಿಕೊಂಡು ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ. ಆದರೂ....?

Fans upsent though Nayanathara and Vignesh share pic of twin kids
Author
First Published Jan 2, 2023, 12:37 PM IST

ಮದುವೆಯಾಗಿ ಕೇವಲ ನಾಲ್ಕು ತಿಂಗಳಿಗೇ ತಾವು ಅವಳಿ ಮಕ್ಕಳ ಪಾಲಕರಾಗಿರುವ ಸಿಹಿಸುದ್ದಿಯನ್ನು ಕೊಟ್ಟು ವಿವಾದ ಸೃಷ್ಟಿಸಿಕೊಂಡ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಈ ಮುದ್ದು ಕಂದಮ್ಮಗಳ  ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳ ಜೊತೆ ಹೊಸ ವರ್ಷ ಆಚರಿಸಿಕೊಂಡಿರುವ ಈ  ಜೋಡಿ, ಟ್ವಿಟರ್​ನಲ್ಲಿ ಮಕ್ಕಳ ಮುಖವನ್ನು ಮಾತ್ರ ರಿವೀಲ್​ ಮಾಡಲಿಲ್ಲ. ವಿಘ್ನೇಶ್​ ಅವರು ಕೆಲ ಫೋಟೋಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ  ಮಕ್ಕಳ ಕೈ-ಕಾಲುಗಳು ಮಾತ್ರ  ಕಾಣಿಸಿಗುತ್ತಿವೆ. ಇನ್ನೊಂದು ಫೋಟೋದಲ್ಲಿ ಮಕ್ಕಳ ಮುಖವನ್ನು ತಮ್ಮ ಕೈಗಳಿಂದ ಮರೆಮಾಚಿದ್ದಾರೆ ನಟಿ ನಯನತಾರಾ.

ಇದೇ ಕಾರಣಕ್ಕೆ ಮಕ್ಕಳನ್ನು ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಖುಷಿ ಜೊತೆ ಮುಖ ನೋಡಲಾಗುತ್ತಿಲ್ಲ ಎಂಬ ನಿರಾಸೆಯೂ ಮೂಡಿದೆ.ಇದೇ ವೇಳೆ ಟ್ವಿಟರ್​ನಲ್ಲಿ (Twitter) ಸುದೀರ್ಘ ಟಿಪ್ಪಣಿ ಬರೆದಿರುವ ವಿಘ್ನೇಶ್​, 2022ರಲ್ಲಿ  ತಮ್ಮನ್ನು  ಸ್ಮರಣೀಯವಾಗಿಸಿದ್ದ ಕ್ಷಣಗಳನ್ನು  ಉಲ್ಲೇಖಿಸಿದ್ದಾರೆ. ತಮ್ಮ ಬಹುಕಾಲದ ಗೆಳತಿ ನಯನತಾರಾ ಜತೆಗೆ ದಾಂಪತ್ಯ ಜೀವನಕ್ಕೆ (Married Life) ಕಾಲಿರಿಸಿದ್ದ ಕ್ಷಣದಿಂದ ಹಿಡಿದು ಪುಟ್ಟ ಕಂದಮ್ಮಗಳನ್ನು ಪಡೆದಿರುವವರೆಗೆ ಸಂತಸದ ಅನುಭವಗಳನ್ನು ಶೇರ್​ ಮಾಡಿಕೊಂಡಿದ್ದಾರೆ.  

ಮದ್ವೆ ನನ್ನ ಜೀವನ ಬದಲಾಯಿಸಿಲ್ಲ, ಕೆಲಸ ಮಾಡಬಾರದು ಅನ್ನೋಕೆ ನೀವ್ಯಾರು?: ನಯನತಾರಾ

'ನನಗೆ 2022  ಹಲವಾರು ಅತ್ಯುತ್ತಮ ಕ್ಷಣಗಳನ್ನು ನೀಡಿದೆ.  ನಯನತಾರಾ ಜೊತೆ ಮದುವೆಯಾಗುವುದರಿಂದ  ಹಿಡಿದು ಮಕ್ಕಳನ್ನು ಸ್ವಾಗತಿಸುವವರೆಗೆ, ಹಲವು ಸಂತಸದ ಕ್ಷಣಗಳನ್ನು ಕಳೆದಿದ್ದೇನೆ' ಎಂದಿರುವ ವಿಘ್ನೇಶ್​, ಮಕ್ಕಳ ಬಗ್ಗೆಯೂ ಬರೆದುಕೊಂಡಿದ್ದಾರೆ. 'ನಾನು ಮುದ್ದು ಮಕ್ಕಳ ಹತ್ತಿರ ಹೋದಾಗಲೆಲ್ಲಾ  ನನ್ನ ಕಣ್ಣುಗಳಿಂದ ಆನಂದಬಾಷ್ಪ ಸುರಿಯುತ್ತದೆ. ನನ್ನ ತುಟಿಗಳು ಮೊದಲು ಅವರನ್ನು ಸ್ಪರ್ಶಿಸುತ್ತದೆ, ಇಂಥ ಮುದ್ದು ಮಕ್ಕಳನ್ನು ಕೊಟ್ಟ ದೇವರಿಗೆ ಧನ್ಯವಾದಗಳು', ಎಂದಿದ್ದಾರೆ.  

'ಕಾತುವಾಕುಲ ಎರಡು ಕಾದಲ್' ಮತ್ತು 'ಕನೆಕ್ಟ್' ಚಿತ್ರಗಳನ್ನು ಬೆಂಬಲಿಸಿದ್ದಕ್ಕಾಗಿ ವಿಘ್ನೇಶ್ ಶಿವನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.  ಕುಮಾರ್ ಅವರ 'ಎಕೆ 62'  ಕೆಲಸ ಪ್ರಾರಂಭಿಸಲು  ಹೊಸವರ್ಷವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಅಂದಹಾಗೆ, ಈ ಜೋಡಿಯ ಮದುವೆಯಾದದ್ದು ಕಳೆದ ಜೂನ್ 9ರಂದು ಚೆನ್ನೈನ ಮಹಾಬಲೀಪುರಂನಲ್ಲಿ. ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಅಂದರೆ ಅಕ್ಟೋಬರ್​ನಲ್ಲಿ ಅವಳಿ ಗಂಡು ಮಕ್ಕಳ ಅಪ್ಪ-ಅಮ್ಮನಾದ ಬಗ್ಗೆ  ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಜೊತೆಗೆ ವಿವಾದವೂ ಈ ದಂಪತಿ ಸುತ್ತ ಸುತ್ತಿಕೊಂಡಿತು.

ಇದಕ್ಕೆ ಕಾರಣ,  ಈ ಜೋಡಿ ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ  ಮಕ್ಕಳನ್ನು ಪಡೆದಿದ್ದಾರೆ. ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಹಲವು ನಿರ್ಬಂಧವಿದ್ದು, ಅವುಗಳನ್ನು ಪಾಲಿಸಿ ಈ ಜೋಡಿ ಮಕ್ಕಳನ್ನು ಪಡೆದಿದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಪತಿಗೆ ಅರಮನೆಯಂಥ ಮನೆ ಗಿಫ್ಟ್ ಮಾಡಿದ ನಯನತಾರ

ಕೊನೆಗೂ ಈ ವಿವಾದಕ್ಕೆ ಜೋಡಿ ತೆರೆ ಎಳೆದಿತ್ತು. ಈ ಅವಳಿ ಮಕ್ಕಳು ಹುಟ್ಟಿರುವುದು ತಮ್ಮ ಸಂಬಂಧಿಕರಿಗೆ ಎಂದು ಇವರು ತಮಿಳುನಾಡು ಆರೋಗ್ಯ ಇಲಾಖೆಗೆ ಅಫಿಡವಿಟ್ ಸಲ್ಲಿಸಿದ್ದರು. ಇಷ್ಟೇ ಅಲ್ಲದೇ, ಈ ಜೋಡಿ  ಆರು ವರ್ಷಗಳ ಹಿಂದೆಯೇ ತಮ್ಮ ಮದುವೆಯನ್ನು ನೋಂದಣಿ ಮಾಡಿಸಿಕೊಂಡಿರುವ ಬಗ್ಗೆಯೂ  ಪ್ರಮಾಣಪತ್ರದಲ್ಲಿ ಬಹಿರಂಗವಾಗಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಮಕ್ಕಳ ವಿಚಾರದಲ್ಲಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

 

Follow Us:
Download App:
  • android
  • ios