ಕೆಜಿಎಫ್ 2 ಟೀಸರ್ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದೆ. ಇದೀಗ ಫ್ಯಾನ್ ಒಬ್ಬರು ಟೀಸರ್‌ನ ಫ್ಲಿಪ್ ಆರ್ಟ್ ಮಾಡಿ ವಿಡಿಯೋ ಮಾಡಿದ್ದಾರೆ. ಇಲ್ನೋಡಿ ವಿಡಿಯೋ
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ರಿಲೀಸ್‌ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅಷ್ಟೇ ಕುತೂಹಲದಲ್ಲಿದ್ದಾರೆ ಫ್ಯಾನ್‌ಸ. ಚಿತ್ರತಂಡ ಜನವರಿ 8ರಂದು ಚಿತ್ರದ ಟೀಸರ್ ರಿಲೀಸ್ ಮಾಡಿತ್ತು.
ಇತ್ತೀಚೆಗೆ ಅಭಿಮಾನಿಯೊಬ್ಬರು 100 ಫ್ಲಿಪ್ ಡ್ರಾಯಿಂಗ್‌ಗಳನ್ನು ಮಾಡಿ ಅದರಲ್ಲಿ ಕೆಜಿಎಫ್ 2ನ ಟೀಸರನ್ನೇ ತೋರಿಸಿಬಿಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಜುಲೈ 16ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ.
ಲೈಫ್ ಚಿಕ್ಕದು, ಯಾರನ್ನಾದ್ರೂ ಲವ್ ಮಾಡಿ ದಿನ ಕಿಸ್ ಕೊಡಿ, ಕಿಸ್ ಪಡ್ಕೊಳಿ ಎಂದ ಗಾಯಕ
2018ರಲ್ಲಿ ಕೆಜಿಎಫ್ ಸಿನಿಮಾ ಬ್ಲಾಕ್‌ಬಸ್ಟರ್ ಆಗಿ ಮೂಡಿಬಂದಿತ್ತು. ನಂತರ ಎರಡನೇ ಭಾಗದ ಸಿನಿಮಾ ನಿರ್ಮಾಣ ಕಾರ್ಯ ಭರದಿಂದ ಸಾಗಿತು. ಇದೀಗ ಸಿನಿಮಾ ರೆಡಿಯಾಗಿದೆ. ಇದೀಗ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇದೀಗ ಅಭಿಮಾನಿಯೊಬ್ಬರು ಆರ್ಟ್ ಶೇರ್ ಮಾಡಿ ಪ್ರಶಾಂತ್ ನೀಲ್, ಯಶ್‌ಗೆ ಟ್ಯಾಗ್ ಮಾಡಿದ್ದಾರೆ. ಇದು ಸೂರ್ಯನ ಅಭಿಮಾನಿಗಳಿಂದ ಎಂದು ಬರೆಯಲಾಗಿದೆ. ಸಿನಿಮಾದ ಕ್ರಿಯೇಟಿವ್ ಪ್ರೊಡ್ಯೂಸರ್ ವಿಡಿಯೋ ಪೋಸ್ಟ್ ಮಾಡಿ ಜಸ್ಟ್ ಬ್ರಿಲಿಯೆಂಟ್ ಎಂದು ಬರೆದಿದ್ದಾರೆ.
