ನಟ, ಗಾಯಕ, ನಿರೂಪಕ ಆದಿತ್ಯ ನಾರಾಯಣ್ ಪತ್ನಿಯ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಕಿಸ್ ಡೇ ದಿನ ಸ್ಪೆಷಲ್ ಕಿಸ್ ಶೇರ್ ಮಾಡಿಕೊಂಡಿದ್ದು, ಇಬ್ಬರೂ ಲಿಪ್ ಲಾಕ್ ಮಾಡಿದ್ದಾರೆ.

ಆದಿತ್ಯ ನಾರಾಯಣ್ ತಮ್ಮ ಬಹುಕಾಲದ ಗೆಳತೆ ಶ್ವೇತಾ ಅಗರ್ವಾಲ್ ಅವರನ್ನು ಡಿಸೆಂಬರ್ 1ಕ್ಕೆ ಮದುವೆಯಾಗಿದ್ದಾರೆ. ನಂತರ ಅದ್ಧೂರಿಯಾಗಿ ಮದುವೆ ರಿಸೆಪ್ಶನ್ ಕೂಡಾ ನಡೆಯಿತು. ಮದುವೆಯ ಮುನ್ನ ಆದಿತ್ಯ ತಮ್ಮ ರಿಲೇಷನ್‌ಶಿಪ್ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

Happy ಕಿಸ್ ಡೇ: ಜನ ಮೆಚ್ಚಿದ ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್‌ಗಳಿವು

ಲೇಟೆಸ್ಟ್ ಪೋಸ್ಟ್‌ನಲ್ಲಿ ಆದಿತ್ಯ ಮತ್ತು ಶ್ವೇತಾ ಅಗರ್ವಾಲ್ ಲಿಪ್‌ಲಾಕ್ ಮಾಡುವ ಫೋಟೋ ಇದೆ. ಹ್ಯಾಪಿ ಕಿಸ್ ಡೇ, ಜೀವನ ಚಿಕ್ಕದು, ಪ್ರೀತಿಸಲು ಯಾರನ್ನಾದರೂ ಹುಡುಕಿ, ಮತ್ತೆ ಪ್ರತಿದಿನ ಕಿಸ್ ಕೊಡಿ, ಕಿಸ್ ಪಡ್ಕೊಳಿ ಎಂದಿದ್ದಾರೆ.

ಆದಿತ್ಯನ ಗೆಳತಿ ಭಾರ್ತಿ ಸಿಂಗ್ ಕಮೆಂಟ್ ಮಾಡಿ, ಇದ್ಯಾವ ಹುಡುಗಿ ಎಂದು ಬರೆದಿದ್ದಾರೆ. ಆದಿತ್ಯ ಮತ್ತು ಶ್ವೇತಾ ಮದುವೆ ಡಿಸೆಂಬರ್‌ನಲ್ಲಿ ಮುಂಬೈನ ಇಸ್ಕಾನ್ ದೇವಾಲಯದಲ್ಲಿ ನಡೆದಿತ್ತು.