Asianet Suvarna News Asianet Suvarna News

ರಕ್ತದಲ್ಲಿ ಸೋನು ಸೂದ್ ಚಿತ್ರ ಬಿಡಿಸಿದ ಅಭಿಮಾನಿ; ರಿಯಲ್ ಹೀರೋ ರಿಯಾಕ್ಷನ್ ಹೀಗಿತ್ತು

ಸೋನು ಸೂದ್ ಅವರ ಅಪ್ಪಟ ಅಭಿಮಾನಿ ಮಧು ಗುರ್ಜರ್ ಎಂಬುವವರು ಸೋನು ಸೂದ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಮಧು ತಾನು ಬಿಡಿಸಿದ ಚಿತ್ರವನ್ನು ಸೋನು ಸೂದ್ ‌ಗೆ ನೀಡಿದ್ದಾರೆ. ಅಂದಹಾಗೆ ಆ ಚಿತ್ರವನ್ನು ರಕ್ತದಿಂದ ಬಿಡಿಸಲಾಗಿದೆ. 

Fan gifts sonu sood his painting with blood sgk
Author
First Published Sep 10, 2022, 10:11 AM IST

ರಿಯಲ್ ಹೀರೋ ಸೋನು ಸೂದ್ ಸಾಮಾಜಿಕ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. 2020ರಲ್ಲಿ ಕೊರೊನಾ ಕಾಣಿಸಿಕೊಂಡ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡಿದ್ದರು. ಸಿನಿಮಾದಲ್ಲಿ ಮಾತ್ರದಲ್ಲಿ ಮಾತ್ರ ನಿಜ ಜೀವನದಲ್ಲೂ ಹೀರೋ ಆಗಿ ಹೊರಹೊಮ್ಮಿದರು. ಬಳಿಕ ಸೋನು ತಮ್ಮ ಸಹಾಯ ಮುಂದುವರಿಸಿದರು. ಅನೇಕ ಅಭಿಮಾನಿಗಳು ಸೋನು ಸೂದ್ ಅವರನ್ನು ದೇವರ ಹಾಗೆ ಕಾಣುತ್ತಾರೆ. ಸೋನು ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ಅಲ್ಲದೇ ಅವರಿಗಾಗಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈಗ ಅಭಿಮಾನಿಯೋರ್ವ ರಕ್ತದಲ್ಲಿ ಸೋನು ಸೂದ್ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ನೋಡಿ ಸೋನ್ ಸೂದ್​ಗೆ ಖುಷಿಯಾಗುವ ಜೊತೆಗೆ ಬೇಸರ ಕೂಡ ಆಗಿದೆ.

ಸೋನು ಸೂದ್ ಅವರ ಅಪ್ಪಟ ಅಭಿಮಾನಿ ಮಧು ಗುರ್ಜರ್ ಎಂಬುವವರು ಸೋನು ಸೂದ್ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಮಧು ತಾನು ಬಿಡಿಸಿದ ಚಿತ್ರವನ್ನು ಸೋನು ಸೂದ್ ‌ಗೆ ನೀಡಿದ್ದಾರೆ. ಅಂದಹಾಗೆ ಆ ಚಿತ್ರವನ್ನು ರಕ್ತದಿಂದ ಬಿಡಿಸಲಾಗಿದೆ. ಈ ವಿಚಾರ ಮೊದಲು ಸೋನುಗೆ ತಿಳಿದಿರಲಿಲ್ಲ. ‘ಮಧು ಅವರು ಟ್ಯಾಲೆಂಟೆಡ್ ಆರ್ಟಿಸ್ಟ್​. ಎಲ್ಲರೂ ನನ್ನ ಪೇಂಟಿಂಗ್ ಬಿಡಿಸುತ್ತಿದ್ದಾರೆ’ ಎಂದರು. ಈ ವೇಳೆ ಅಲ್ಲಿದ್ದ ಅಭಿಮಾನಿಯೋರ್ವ ‘ಇದು ರಕ್ತದಿಂದ ಬಿಡಿಸಿದ್ದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮಾತು ಸೋನು ಸೂದ್​ಗೆ ಬೇಸರ ಮೂಡಿಸಿತು. 

ಬಳಿಕ ಸೋನು ಸೂದ್ ಆ ಅಭಿಮಾನಿ ಕಿವಿ ಮಾತು ಹೇಳಿದರು. ಹೀಗೆಲ್ಲ ಮಾಡಬಾರದು ಎಂದು ಹೇಳಿದರು. 'ರಕ್ತದಿಂದ ಚಿತ್ರ ಬಿಡಿಸಬಾರದು. ರಕ್ತವನ್ನು ದಾನ ಮಾಡಬೇಕು. ಇದರಿಂದ ಅನೇಕರಿಗೆ ಸಹಾಯ ಆಗುತ್ತದೆ' ಎಂದು ತಿಳಿ ಹೇಳಿದರು. ಸೋನು ಮಾತಿಗೆ ಪ್ರತಿಕ್ರಿಯೆ ನೀಡಿದ ಅಭಿಮಾನಿ 'ನೀವು ನನ್ನ ದೇವರು. ಈ ಕಾರಣಕ್ಕೆ ನಾನು ರಕ್ತದಿಂದ ನಿಮ್ಮ ಚಿತ್ರ ಬಿಡಿಸಿದೆ' ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ. 'ನನಗೆ ನಿಮ್ಮ ಅಭಿಮಾನ ಅರ್ಥ ಆಗುತ್ತದೆ. ಹಾಗಂತ ರಕ್ತದಲ್ಲಿ ಚಿತ್ರ ಬಿಡಿಸಬಾರದು. ಅದನ್ನು ದಾನ ಮಾಡಿ’ ಎಂದು ಸೋನು ಮನವಿ ಮಾಡಿದರು. 

ಸಿನಿಮಾದ ಹೊರತಾಗಿ ಈ ಬ್ಯುಸಿನೆಸ್‌ನಿಂದಲೂ ಹಣ ಸಂಪಾದನೆ ಮಾಡುವ ಸೋನು ಸೂದ್‌

ಸೋನು ಇಂದಿಗೂ ತನ್ನ ಸಾಮಾಜಿಕ ಕೇಲಸ ಮುಂದುವರೆಸಿದ್ದಾರೆ. ಇವತ್ತಿಗೂ ಸಾವಿರಾರು ಫೋನ್ ಕರೆಗಳು ಸಹಾಯ ಕೋರಿ ಬರುತ್ತವೆ. ಸಾಮಾಜಿಕ ಜಾಲತಾಣದ ಮೂಲಕವೂ ಸಹಾಯ ಮಾಡಿ ಎಂದು ಅನೇಕರು ಕೇಳಿಕೊಳಳುತ್ತಾರೆ. ಸಾಕಷ್ಟು ಮಂದಿಗೆ ಸೋನು ತನ್ನ ಸಹಾಯ ಹಸ್ತ ಚಾಚಿಸಿದ್ದಾರೆ. ಮಕ್ಕಳು ಓದು, ಆಸ್ಪತ್ರೆ ಖರ್ಚು, ಉದ್ಯೋಗ ಹೀಗೆ ಸಾಕಷ್ಟು ಸಹಾಯ ಮಾಡಿದ್ದಾರೆ.

ನಟಿ ಮಾನ್ವಿತಾ ಕಷ್ಟಕ್ಕೆ ನೆರವಾದ ನಟ ಸೋನು ಸೂದ್

ಇನ್ನು ಸೋನು ಸೂದ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಅವರು ವಿಲನ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ವಿಲನ್ ಪಾತ್ರಗಳಿಂದ ದೂರವೇ ಇದ್ದಾರೆ. ಸೋನು ಸೂದ್ ಅವರನ್ನು ವಿಲನ್ ಆಗಿ ಅಭಿಮಾನಿಗಳು ಸ್ವಾಕರಿಸುತ್ತಿಲ್ಲ. ಹಾಗಾಗಿ ಅನೇಕರು ಸೋನುಗೆ ಹೀರೋ ಪಾತ್ರವನ್ನೇ ನೀಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಸೋನು ಕೊನೆಯದಾಗಿ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತಮಿಳು, ತಲುಗು ಜೊತೆಗೆ ಹಿಂದಿಯಲ್ಲೂ ಸೋನು ಬ್ಯುಸಿಯಾಗಿದ್ದಾರೆ.  

Follow Us:
Download App:
  • android
  • ios