ಅನಾರೋಗ್ಯ: ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ ನಿಧನ
ದಕ್ಷಿಣ ಭಾರತದ ಖ್ಯಾತ ಗಾಯಕಿ ಸಚಿತ್ ನಿಧನ ಹೊಂದಿದ್ದಾರೆ. 46 ವರ್ಷದ ಗಾಯಕಿ ಸಂಗೀತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗಾಯಕಿ ಸಂಗೀತಾ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ(ಮೇ 22) ಬೆಳಗ್ಗೆ ಕೊನೆಯುಸಿರೆಳಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಗಾಯಕಿ(Singer) ಸಂಗೀತಾ ಸಚಿತ್(Sangeetha Sajith) ನಿಧನ(Death) ಹೊಂದಿದ್ದಾರೆ. 46 ವರ್ಷದ ಗಾಯಕಿ ಸಂಗೀತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗಾಯಕಿ ಸಂಗೀತಾ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ(ಮೇ 22) ಬೆಳಗ್ಗೆ ಕೊನೆಯುಸಿರೆಳಿದ್ದಾರೆ. ತನ್ನ ಸಹೋದರಿ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗೆ ಸುಮಾರು 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ ಇನ್ನು ನೆನಪು ಮಾತ್ರ.
1976ರಲ್ಲಿ ಗಾಯಕಿ ಸಂಗೀತಾ ಅವರು ಕೇರಳದಲ್ಲಿ ಜನಿಸಿದರು. ರಾಜಮ್ಮ ಮತ್ತು ವಿ ಜಿ ಸಚಿತ್ ದಂಪತಿಯ ಮಗಳು ಸಂಗೀತಾ. ಸಂಗೀತಾ ಹೆಸರಿಗೆ ತಕ್ಕ ಹಾಗೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ಗಾಯಕಿ ಸಂಗೀತಾ ಕರ್ನಾಟಿಕ್ ಸಂಗೀತದಲ್ಲಿ ಪರಿಣತಿ ಹೊಂದಿದ್ದರು.
ಗರ್ಭಪಾತದಿಂದ ಮಿರಾಕಲ್ ಮಗುವನ್ನು ಕಳೆದುಕೊಂಡ ಖ್ಯಾತ ಗಾಯಕಿ ಬ್ರಿಟ್ನಿ
ಸಂಗೀತ ಅವರು ತಮಿಳಿನ ನಾಳೈಯಾ ತೀರ್ಪ್ ಮೂಲಕ ಪಾದಾರ್ಪಣೆ ಮಾಡಿದರು. ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋದಲ್ಲಿ ಅವರ ಹಾಡಿದ ತಣ್ಣೀರೈ ಕತಲಿಕ್ಕುಮ್ ಹಾಡು ಸೂಪರ್ ಹಿಟ್ ಆಗಿತ್ತು. ಮಲಯಾಳಂ ಚಿತ್ರದ ಕಕ್ಕುಯಿಲ್‌ನ ಅಲಾರೆ ಗೋವಿಂದಾ, ಎನ್ನ್ ಸ್ವಂತಂ ಜಾನಕಿಕುಟ್ಟಿಯ ಅಂಬಿಲಿಪೂವಟ್ಟಂ ಮತ್ತು ಧುಮ್ ಧುಮ್ ಧುಮ್ ಧುರಯಾತೋ ಸೇರಿದಂತೆ ಅನೇಕ ಹಾಡುಗಳನ್ನು ಸಂಗೀತಾ ಹಾಡಿದ್ದಾರೆ.
KGF ಗಾಯಕಿ ನೇಹಾ ಪತಿಯ ದುಬಾರಿ ಫೋನ್, ಚಿನ್ನ, ನಗದನ್ನು ದೋಚಿದ ಖದೀಮರು; ದೂರು ದಾಖಲು
ಮಲಯಾಳಂನಲ್ಲಿ ಅವರ ಕೊನೆಯ ಹಾಡು ಕುರುತಿ ಚಿತ್ರದ ಥೀಮ್ ಸಾಂಗ್. ಕಾರ್ಯಕ್ರಮದ ವೇಳೆ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಧರಿಸಿದ್ದ 10 ಪವನ್ ಚಿನ್ನದ ಸರವನ್ನು ಗೌರವಾರ್ಥವಾಗಿ ಉಡುಗೊರೆಯಾಗಿ ನೀಡಿದ್ದರು. ಇಂದು ಸಂಗೀತಾ ಅವರ ಅಂತ್ಯ ಕ್ರಿಯೆ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಸಂಜೆ ತೈಕಾಡು ಶಾಂತಿ ಕವಾಡಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.