ಅಸ್ಸಾಂನ ಪ್ರಸಿದ್ಧ ನಟ (Assamese Actor) ಕಿಶೋರ್ ದಾಸ್ (Kishor Das) ನಿಧನರಾಗಿದ್ದಾರೆ (Death). 30ನೇ ವಯಸ್ಸಿನಲ್ಲೇ ಜೀವನದ ಪಯಣವನ್ನು ಮುಗಿಸಿ ಬಾರದ ಲೋಕಕ್ಕೆ ಹೊರಡುಹಾಗಿದ್ದಾರೆ. ಅಸ್ಸಾಂನ ಸಿನಿಮಾ, ಸೀರಿಯಲ್ ಮೂಲಕ ಮನೆಮಾತಾದ ಕಿಶೋರ್ ದಾಸ್ ನಿನ್ನೆ (ಜುಲೈ 3) ವಿಧಿವಶರಾಗಿದ್ದಾರೆ.
ಅಸ್ಸಾಂನ ಪ್ರಸಿದ್ಧ ನಟ (Assamese Actor) ಕಿಶೋರ್ ದಾಸ್ (Kishor Das) ನಿಧನರಾಗಿದ್ದಾರೆ (Death). 30ನೇ ವಯಸ್ಸಿನಲ್ಲೇ ಜೀವನದ ಪಯಣವನ್ನು ಮುಗಿಸಿ ಬಾರದ ಲೋಕಕ್ಕೆ ಹೊರಡುಹಾಗಿದ್ದಾರೆ. ಅಸ್ಸಾಂನ ಸಿನಿಮಾ, ಸೀರಿಯಲ್ ಮೂಲಕ ಮನೆಮಾತಾದ ಕಿಶೋರ್ ದಾಸ್ ನಿನ್ನೆ (ಜುಲೈ 3) ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಯುವ ನಟ ಕಿಶೋರ್ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು ಎನ್ನಲಾಗಿದೆ. ಚೈನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಕಿಶೋರ್ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಕಿಶೋರ್ ಪ್ರಮುಖವಾಗಿ ಅಸ್ಸಾಂನ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ್ದರು. ಗುವಾಹಟಿ ಮೂಲದ ಪ್ರಾದೇಶಿಕ ಚಾನೆಲ್‌ಗಳಲ್ಲಿ ಪ್ರಸಾರವಾದ ಬಿಧಾತ, ಬಂಧುನ್ ಮತ್ತು ನೆದೇಖಾ ಫಗುನ್‌ನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಕಿಶೋರ್ ಹೆಸರುವಾಸಿಯಾಗಿದ್ದರು. ಕಿಶೋರ್ ಕೊನೆಯದಾಗಿ ದಾದಾ ತುಮಿ ಡಸ್ಟೊ ಬೋರ್ ಎಂಬ ಅಸ್ಸಾಮಿ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಿಶೋರ್ 2019ರಲ್ಲಿ ಕ್ಯಾಂಡಿಡ್ ಯಂಗ್ ಅಚೀವ್ ಮೆಂಟ್ ಪ್ರಶಸ್ತಿ ಮತ್ತು 2020-21ರಲ್ಲಿ ಅತ್ಯಂತ ಜನಪ್ರಿಯ ನಟರಿಗಾಗಿ ಕೊಡುವ ಏಷ್ಯಾನೆಟ್ ಐಕಾನ್ ಪ್ಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದರು. ಕಿರೋಶ್ ಸಾವು ಅಭಿಮಾನಿಗಳಿಗೆ ಆಘಾತ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಪೋಸ್ಟ್ ಶೇರ್ ಮಾಡಿ ಕಂಬನಿ ಮಿಡಿಯುತ್ತಿದ್ದಾರೆ.
ಕ್ಯಾನ್ಸರ್‌ಗೆ ಬಲಿಯಾದ ಯೂಟ್ಯೂಬರ್: 23ಕ್ಕೆ ಬದುಕು ಮುಗಿಸಿದ ಟೆಕ್ನೋಬ್ಲೇಡ್
ಸಾವಿಗೂ ಕೆಲವೇ ದಿನಗಳ ಹಿಂದೆ ಕಿಶೋರ್, ಆಸ್ಪತ್ರೆಯ ಬೆಡ್ ಮೇಲಿರುವ ಫೋಟೋವನ್ನು ಹಂಚಿಕೊಂಡಿದ್ದರು. ಕಿಮೋಥೆರಪಿಯ 4ನೇ ಸೈಕಲ್ ಎಂದು ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಪೋಸ್ಟ್ ನಲ್ಲಿ ತಲೆತಿರುಗುವಿಕೆ, ದೇಹದ ದೌರ್ಬಲ್ಯ , ವಾಂತಿ ಸೇರಿದಂತೆ ಅನೇಕ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿರುವುದಾಗಿ ನಟ ಕಿಶೋರ್ ಹಂಚಿಕೊಂಡಿದ್ದರು. ಕಿಶೋರ್ ಕೊನೆಯ ಫೋಟೋ ಈಗ ವೈರಲ್ ಆಗಿದೆ.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಇನ್ನಿಲ್ಲ
30ನೇ ವಯಸ್ಸಿನಲ್ಲೇ ಜೀವನದ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಹೊರಟ ಕಿಶೋರ್ ಸಾವವನ್ನು ಅರಗಿಸಿಕೊಳ್ಳಲು ಕುಟುಂಬದವರಿಗೆ, ಅಭಿಮಾನಿಗಳಿಗೆ ಸಾದ್ಯವಾಗುತ್ತಿಲ್ಲ. ವರದಿಗಳ ಪ್ರಕಾರ, ಕೊರೊನಾ ಪ್ರೋಟೋಕಾಲ್‌ಗಳ ಕಾರಣ ಕಿಶೋರ್ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ಕಳುಹಿಸಲು ಸಾಧ್ಯವಾಗದೇ ಅವರ ಅಂತಿಮ ವಿಧಿಗಳನ್ನು ಚೆನ್ನೈನಲ್ಲಿ ನಡೆಸಬೇಕಾಯಿತು ಎನ್ನಲಾಗಿದೆ. ನಟನ ಮೃತ ದೇಹವನ್ನು ಸ್ವಗ್ರಾಮಕ್ಕೂ ಕಳುಹಿಸಿಲ್ಲದ ಕಾರಣ ನಟನ ಅಂತಿಮ ದರ್ಶನಕ್ಕೆ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
