ಬಾಲಿವುಡ್‌ ಚಿತ್ರರಂಗದಲ್ಲಿ ಬಯೋಪಿಕ್‌ ಸಿನಿಮಾಗಳಿಗೆ ಕೊರತೆಯಿಲ್ಲ. ಪ್ರತಿಯೊಬ್ಬ ಸ್ಟಾರ್ ನಟ-ನಟಿಯರೂ ತಮ್ಮ ಜೀವನದಲ್ಲಿ ಒಂದಾದರೂ ಬಯೋಪಿಕ್ ಚಿತ್ರ ಮಾಡಿರುತ್ತಾರೆ. ಅವರ ಪಟ್ಟಿಯಲ್ಲಿ ಜಾಹ್ನವಿ ಕಪೂರ್ ಬಲು ಬೇಗ ಸೇರ್ಪಡೆಯಾದವರು. ಓಟಿಟಿಯಲ್ಲಿ ರಿಲೀಸ್‌ ಆದ 'ಗುಂಜನ್ ಸಕ್ಸೇನಾ' ಸಿನಿಮಾ ಸುಳ್ಳು ವಿಚಾರಗಳನ್ನು ಜನರಿಗೆ ತೋರಿಸಿದೆ, ಎಂದು ಮಾಜಿ ವಿಂಗ್ ಕಮಾಂಡರ್‌ ನಮ್ರತಾ ಚಂದಿ ಆರೋಪಿಸಿದ್ದಾರೆ. 

ಗುಂಜನ್ ಸಕ್ಸೇನಾ ಜೊತೆ ನಿಜ ಜೀವನದಲ್ಲಿ ಕೆಲಸ ಮಾಡಿದ ವಿಂಗ್ ಕಮಾಂಡರ್‌ ನಮ್ರತಾ ಚಂದಿ, ಚಿತ್ರದಲ್ಲಿ ಐಎಎಫ್‌ ಮಹಿಳೆಯನ್ನು ತಪ್ಪಾಗಿ ತೋರಿಸಿರುವುದರ ಬಗ್ಗೆ ಓಪನ್ ಲೆಟರ್ ಬರೆದಿದ್ದಾರೆ. 

'ನಾನು ಹೆಲಿಕಾಪ್ಟರ್‌ ಪೈಲೆಟ್‌ ಆಗಿ ಕೆಲಸ ಮಾಡಿರುವೆ. ಚಿತ್ರದಲ್ಲಿ ಮಹಿಳಾ ಪೈಲೆಟ್‌ಗಳಿಗೆ ತೋರಿಸುವ ಹಿಂಸೆ, ಕಿರುಕುಳ ಹಾಗೂ ನಿಂದನೆ ನಾನು ಎಂದೂ ಅನುಭವಿಸಿರಲಿಲ್ಲ. ಪೈಲೆಟ್‌ ಸಮವಸ್ತ್ರ ಧರಿಸುವ ಪುರಷರೇ ನಿಜವಾದ ಜೆಂಟಮ್‌ಮೆನ್' ಎಂದು ಬರೆದುಕೊಂಡಿದ್ದಾರೆ.  ಸಿನಿಮಾ ಬಂಡವಾಳ ಗಳಿಸಬೇಕು ಎಂದು ಜನರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸಬಾರದು. ಈ ಚಿತ್ರದಲ್ಲಿ ತಪ್ಪು ಮಾಹಿತಿಗಳನ್ನು ನೀಡಲಾಗಿದೆ,' ಎಂದು ಹೇಳಿದ್ದಾರೆ.

ಈಗ ಜಾನ್ವಿ ಕಪೂರ್ ಮೇಲೂ ನೆಪೊಟಿಸಂ ಆರೋಪ! 

ಚಿತ್ರದ ಒಂದು ಸನ್ನಿವೇಶದಲ್ಲಿ ಮಹಿಳಾ ಪೈಲೆಟ್‌ಗೆ ಟಾಯ್ಲೆಟ್‌ ಅಥವಾ ಡ್ರಸಿಂಗ್ ರೂಮ್‌ ಇಲ್ಲದೆ ಹಿಂಸೆ ಆಯಿತೆಂದು ತೋರಿಸಲಾಗಿದೆ. ಆದರೆ ಇವೆಲ್ಲಾ ಸುಳ್ಳು. ನಮ್ಮ ಜೊತೆಗಿದ್ದ ಬರ್ದರ್‌ ಪೈಲೆಟ್‌ ನಾನು ಒಳಗೆ ಹೋದರೆ ಹೊರಗೆ ನಿಂತು ರಕ್ಷಣೆ ನೀಡುತ್ತಿದ್ದರೆಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾನೇ ಸುಳ್ಳು. ಇದಕ್ಕೆ ಸೂಕ್ತ ಕಾರಣಗಳನ್ನು ನೀಡಬಲ್ಲೆ, ಎಂದಿದ್ದಾರೆ ನಮ್ರತಾ. 

'ಕಾರ್ಗಿಲ್‌ ಯುದ್ಧ ಭೂಮಿಗೆ ಕಾಲಿಟ್ಟ ಮೊದಲ ಮಹಿಳೆ ಶ್ರೀವಿದ್ಯಾ ರಂಜನ್‌. ಗುಂಜನ್ ಸಕ್ಸೇನಾ ಅಲ್ಲ. ತಪ್ಪು ಕ್ರೆಡಿಟ್‌ ಕೊಟ್ಟಿರುವ ಕಾರಣ ಸ್ವತಃ ಶ್ರೀವಿದ್ಯಾ ಚಿಂತಿಸುವುದಿಲ್ಲವೆಂದು ನನಗೆ ಗೊತ್ತು. ಆದರೆ ಜನರಿಗೆ ಸತ್ಯ ಏನೆಂದು ತಿಳಿಯಬೇಕು,' ಎಂದೂ ಬರೆದಿದ್ದಾರೆ. ಅಷ್ಟೇ ಅಲ್ಲದೆ ಜಾಹ್ನವಿ ಕಪೂರ್‌ಗೆ ಒಂದು ಸಲಹೆ ನೀಡಿದ್ದಾರೆ. 'ಲೇಡಿ, ನನ್ನ ಒಂದು ಸಲಹೆ. ನೀನು ನಿಜವಾದ ಭಾರತೀಯ ಮಹಿಳೆಯೇ ಆಗಿದ್ದರೆ ದಯವಿಟ್ಟು ಇನ್ನು ಮುಂದೆ ಇಂಥ ಸಿನಿಮಾಗಳಿಗೆ ಸಹಿ ಮಾಡಬೇಡ. ಭಾರತೀಯ ವೃತ್ತಿಯಲ್ಲಿರುವ ಮಹಿಳೆಯರು ಹಾಗೂ ಪುರುಷರನ್ನು ಇಷ್ಟು ಕಳಪೆಯಾಗಿ ಪ್ರದರ್ಶಿಸುವುದನ್ನು ನಿಲ್ಲಿಸಿ. ಸತ್ಯವೇ ಬೇರೆ ಇರುತ್ತದೆ. ಅದರ ಬಗ್ಗೆ ಓದು, ಅವರನ್ನು ಭೇಟಿ ಮಾಡಿ ವಿಚಾರಗಳನ್ನು ತಿಳಿದುಕೊಳ್ಳಿ,' ಎಂದು ಕಿವಿ ಮಾತು ಹೇಳಿದ್ದಾರೆ.

ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ರಂತೆ ಶ್ರೀದೇವಿ!

ಈಗಾಗಲೇ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ಕೂಗು ಕೇಳಿ ಬರುತ್ತಿರವ ಬೆನ್ನಲ್ಲೇ ಕರಣ್ ಜೋಹರ್ ನಿರ್ಮಾಣದ ಚಿತ್ರದ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬರುತ್ತಿರುವುದು ಅವರ ಇಮೇಜ್‌ಗೆ ಮತ್ತಷ್ಟು ಕುಂದು ತರುವುದರಲ್ಲಿ ಅನುಮಾನವೇ ಇಲ್ಲ.

ಕೆಜಿಎಫ್ ಸುಂದರಿ ಬಳಿ ಇವೆ ಕೈ ತುಂಬಾ ಆಫರ್ಸ್...

"