ಎಕ್ಸ್‌ಎಕ್ಸ್‌ಎಕ್ಸ್‌ ಚಿತ್ರದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡ ಏಕ್ತಾ ಕಪೂರ್. ಅರ್ಜಿ ಸಲ್ಲಿಸಿದಷ್ಟು ದಂಡ ಹೆಚ್ಚಾಗುತ್ತದೆ.

ನವದೆಹಲಿ: ಖ್ಯಾತ ನಿರ್ದೇಶಕಿ, ನಿರ್ಮಾಪಕಿ ಏಕ್ತಾ ಕಪೂರ್‌ ನಿರ್ಮಾಣದ ಎಕ್ಸ್‌ಎಕ್ಸ್‌ಎಕ್ಸ್‌’ ವೆಬ್‌ ಸರಣಿಯ ಬಗ್ಗೆ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂ ಕೋರ್ಚ್‌ ‘ನೀವು ದೇಶದ ಯುವ ಸಮೂಹವನ್ನು ಹಾಳುಗೆಡವುತ್ತಿದ್ದೀರಿ’ಎಂದು ತರಾಟೆಗೆ ತೆಗೆದುಕೊಂಡಿದೆ.

ಎಎಲ್‌ಟಿ ಬಾಲಾಜಿ ಒಟಿಟಿ ವೇದಿಕೆಯಲ್ಲಿರುವ ವೆಬ್‌ ಸರಣಿ ‘ಎಕ್ಸ್‌ಎಕ್ಸ್‌ಎಕ್ಸ್‌’ ಯೋಧರಿಗೆ ಅವಮಾನಿಸಿದ್ದು, ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಏಕ್ತಾ ವಿರುದ್ಧ ಬಂಧನಕ್ಕೆ ವಾರಂಟ್‌ ಹೊರಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವ ವೇಳೆ ಕೋರ್ಚ್‌ ಹೀಗೆ ಹೇಳಿದೆ.

‘ಒಟಿಟಿಯಲ್ಲಿ ಪ್ರಸಾರವಾಗುವುದು ಎಲ್ಲರಿಗೂ ಲಭ್ಯವಾಗುತ್ತದೆ. ನೀವು ಒಟಿಟಿಯಲ್ಲಿ ಯಾವ ರೀತಿ ಜನರಿಗೆ ಆಯ್ಕೆ ನೀಡುತ್ತಿದ್ದೀರಾ? ನೀವು ಯುವಜನತೆಯ ಮನಸ್ಸನ್ನು ಕೆಡಿಸುತ್ತಿದ್ದೀರಿ’ ಎಂದು ನ್ಯಾ ಅಜಯ ರಸ್ತೋಗಿ ಹಾಗೂ ನ್ಯಾ ಸಿ.ಟಿ. ರವಿಕುಮಾರ್‌ ಅವರ ಪೀಠ ಹೇಳಿದೆ.

ಸುಪ್ರೀಂ ಕೋರ್ಚ್‌ ಈ ಪ್ರಕರಣವನ್ನು ಬಾಕಿ ಉಳಿಸಿಕೊಂಡಿದ್ದು, ಬಿಹಾರದ ಪಟನಾ ಹೈಕೋರ್ಚ್‌ನಲ್ಲಿ ಪ್ರಕರಣದ ವಿಚಾರಣೆಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸ್ಥಳೀಯ ವಕೀಲರ ನೇಮಿಸಿಕೊಳ್ಳಲು ಸೂಚಿಸಿದೆ. ಮಾಜಿ ಯೋಧರಾದ ಶಂಭು ಕುಮಾರ್‌ ದೂರು ನೀಡಿದ್ದ ಹಿನ್ನೆಲೆಯಲ್ಲಿ ಬಿಹಾರದ ಬೇಗುಸರಾಯ್‌ ವಿಚಾರಣಾ ನ್ಯಾಯಾಲಯ ಏಕತಾ ಬಂಧನದ ವಾರಂಟ್‌ ಹೊರಡಿಸಿತ್ತು.

Influential People : ಏಕಮೇವ ಅದ್ವಿತೀಯಳಾದ ಏಕ್ತಾ... ಅಮೀರ್ ಖಾನ್‌ಗಿಂತ ಮುಂದೆ!

ಏಕ್ತಾ ವಕೀಲರು:

'ಎಕ್ಸ್‌ಎಕ್ಸ್ಎಕ್ಸ್‌ ಸೀರಿಸ್‌ನ ALTBalaji ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದ ಹಕ್ಕು ಏಕ್ತಾ ಕಪೂರ್ ಬಾಲಾಜೀ ಟೆಲಿಫಿಲ್ಮಸ್‌ಗೆ ಸೇರಿದ್ದು. ಶೋಭಾ ಕಪೂರ್ ಕೂಡ ಬಾಲಾಜೀ ಟೆಲೆಫಿಲ್ಮಸ್‌ ಸಂಸ್ಥೆಗೆ ಸೇರಿದವರು. ಏಕ್ತಾ ಕಪೂರ್ ಕುಟುಂಬಕ್ಕೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಸ್ವಷ್ಪನೆ ನೀಡಲು ಹಾಜರಾಗುವಂತೆ ಹೇಳಿತ್ತು. ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅನೇಕ ದೃಶ್ಯಗಳನ್ನು ಡಿಲೀಟ್ ಮಾಡಲಾಗಿತ್ತು ಸ್ಪಷ್ಟನೆ ಯಾಕೆ ಎಂದು ಕಪೂರ್ ಅವರು ತಿಳಿಸಿದ್ದಾರೆ. ಆದರೆ ಯಾರೂ ಕೋರ್ಟ್‌ಗೆ ಬಂದು ಸ್ಪಷ್ಟನೆ ಕೊಟ್ಟಿಲ್ಲ ಹೀಗಾಗಿ ವಾರೆಂಟ್‌ ಜಾರಿಗೊಳಿಸಿದೆ' ಎಂದು ವಕೀಲರಾದ ಶ್ರೀ ಪಾಠಕ್ ಹೇಳಿದ್ದಾರೆ.

ಈ ವೇಳೆ ಬಾಲಾಜಿ ಟೆಲಿಫಿಲ್ಮಸ್‌ ಮತ್ತು ALT ಡಿಜಿಟಲ್ ಎಂಟರ್ಟೈಮೆಂಟ್‌ ಹೇಳಿಕೆ ನೀಡಿದ್ದಾರೆ, 'ನಾವು ಎಂದೂ ಕಲಾವಿದರಿಂದ ಹಣ ಪಡೆದುಕೊಳ್ಳುವುದಿಲ್ಲ ಪ್ರತಿಭೆಗೆ ಬೆಲೆ ಕೊಡುವ ಸಂಸ್ಥೆ ಇದು. ನೀಚ ಕೆಲಸ ಮಾಡುತ್ತಿರುವವರ ವಿರುದ್ಧ ಸಂಸ್ಥೆ ತನಿಖೆ ಮಾಡುತ್ತಿದೆ. ಸಿನಿಮಾ ಅಥವಾ ಧಾರಾವಾಹಿ ಆಡಿಷನ್ ಇದ್ದಲಿ ನಾವೇ ಘೋಷಣೆ ಮಾಡುತ್ತೇವೆ. ಏಜೆಂಟ್‌ಗಳಿಗೆ ಹಣ ಕೊಟ್ಟು ಸಿಲುಕಿಕೊಂಡವರು ನಮ್ಮ ಜವಾಬ್ದಾರಿ ಅಲ್ಲ ಅವರು ಪೊಲೀಸರಿಗೆ ದೂರು ನೀಡಬೇಕು. ನಮಗೂ ಇದಕ್ಕೂ ಯಾವ ಸಂಬಂಧವಿಲ್ಲ' ಎಂದಿದ್ದರು.

ತಮ್ಮನನ್ನೇ ಆರೆಸ್ಟ್ ಮಾಡಿ ಎಂದು ಪೊಲೀಸಿಗೆ ಕಾಲ್‌ ಮಾಡಿದ್ದ ಏಕ್ತಾ ಕಪೂರ್!

ಬಾಯ್ಕಟ್ ಟ್ರೆಂಡ್‌ಗೆ ಏಕ್ತಾ ಕಪೂರ್ ರಿಯಾಕ್ಷನ್:

'ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಬ್ಯುಸಿನೆಸ್ ನೀಡಿದ ಜನರನ್ನು ನಾವು ಬಹಿಷ್ಕರಿಸುತ್ತಿರುವುದು ತುಂಬಾ ವಿಚಿತ್ರವಾಗಿದೆ. ಉದ್ಯಮದಲ್ಲಿರುವ ಎಲ್ಲಾ ಖಾನ್‌ಗಳು (ಶಾರುಖ್ ಖಾನ್, ಸಲ್ಮಾನ್ ಖಾನ್) ಮತ್ತು ವಿಶೇಷವಾಗಿ ಅಮೀರ್ ಖಾನ್ ಲೆಜೆಂಡ್‌ಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ, ಅಮೀರ್ ಖಾನ್ ಅವರನ್ನು ಎಂದಿಗೂ ಬಹಿಷ್ಕರಿಸಲಾಗುವುದಿಲ್ಲ, ಅವರು ಸಾಫ್ಟ್ ರಾಯಭಾರಿ, ಅಮೀರ್ ಖಾನ್ ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು.