"ಏಕ್ ಬದ್ನಾಮ್ ಆಶ್ರಮ್ 3"ರ ಎರಡನೇ ಭಾಗ ಫೆಬ್ರವರಿ 27ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಬಾಬಾ ನಿರಾಲಾನ ಮೋಸದ ಜಾಲದಿಂದ ಪಾರಾದ ಪಮ್ಮಿ, ಸೇಡು ತೀರಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಾಳೆ ಎಂಬುದನ್ನು ಈ ಭಾಗ ಒಳಗೊಂಡಿದೆ. ಬಾಬಿ ಡಿಯೋಲ್ ನಟಿಸಿರುವ ಈ ಕ್ರೈಂ ಥ್ರಿಲ್ಲರ್, ಪ್ರಕಾಶ್ ಝಾ ನಿರ್ದೇಶನದಲ್ಲಿದೆ. ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.
ಏಕ್ ಬದ್ನಾಮ್ ಆಶ್ರಮ್ (Ek Badnaam Ashram), ನೋಡುಗರ ನಿದ್ರೆ ಗೆಡಿಸಿದ್ದ ಒಂದು ಕ್ರೈಂ ಥ್ರಿಲ್ಲರ್ ಸೀರಿಸ್ (crime thriller series). ಪಾರ್ಟ್ ಒಂದು, ಎರಡು ಮತ್ತು ಮೂರು ಈಗಾಗಲೇ ಬಿಡುಗಡೆಯಾಗಿದೆ. ಈಗ ಪಾರ್ಟ್ ಮೂರರ ಎರಡನೇ ಭಾಗ ಶೀಘ್ರವೇ ಬಿಡುಗಡೆಯಾಗ್ತಿದೆ. ಇಂದು ಮುಂಬೈನಲ್ಲಿ ಏಕ್ ಬದ್ನಾಮ್ ಆಶ್ರಮ್ 3, ಪಾರ್ಟ್ 2ನ ಟ್ರೈಲರ್ ಬಿಡುಗಡೆಯಾಗಿದೆ. ಸೀರಿಸ್ ಯಾವಾಗ ಬರುತ್ತೆ ಅಂತ ಎರಡು ವರ್ಷಗಳಿಂದ ಕಾದಿದ್ದ ವೀಕ್ಷಕರಿಗೆ ಮೇಕರ್ಸ್ ನೆಮ್ಮದಿ ಸುದ್ದಿ ನೀಡಿದ್ದಾರೆ. ಇಂದು ಟ್ರೈಲರ್ ಬಿಡುಗಡೆ ಮಾಡಿರುವ ತಂಡ, ಇದೇ ಫೆಬ್ರವರಿ 27ರಂದು ಸೀರಿಸ್ ರಿಲೀಸ್ ಮಾಡಲಿದೆ. ಅಮೆಜಾನ್ ಪ್ರೈಮ್, ಎಂಎಕ್ಸ್‌ಪ್ಲೇಯರ್ ನಲ್ಲಿ ವೀಕ್ಷಕರು ಸೀರಿಸ್ ನೋಡ್ಬಹುದು.
ಸೀರಿಸ್ ಒಂದು, ಎರಡು ಹಾಗೂ ಮೂರು ನೋಡಿದ್ದ ವೀಕ್ಷಕರಿಗೆ ಮುಂದೇನಾಗುತ್ತೆ ಎನ್ನುವ ಕುತೂಹಲವಿದೆ. ಬಾಬಾ ಸಿಕ್ಕಿಬೀಳ್ತಾರಾ? ಪಮ್ಮಿ ಮತ್ತೆ ಆಶ್ರಮಕ್ಕೆ ಬರ್ತಾಳಾ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ಏಕ್ ಬದ್ನಾಮ್ ಆಶ್ರಮ್ 3, ಪಾರ್ಟ್ 2 ಟ್ರೈಲರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಶಿಪುರ ಬಾಬಾ ನಿರಾಲಾ (Kashipura Baba Nirala)ರಿಂದ ಮೋಸ ಹೋಗಿದ್ದ ಹುಡುಗಿ ಪಮ್ಮಿ, ಬಾಬಾ ನಿರಾಲಾ ಮೇಲೆ ಸೇಡು ತೀರಿಸಿಕೊಳ್ಳುವುದರ ಸುತ್ತವೇ ಈ ಸೀರಿಸ್ ಇದೆ. ನಿರಾಲಾ ಮತ್ತು ಅವರ ಆಪ್ತ ಸ್ನೇಹಿತ ಭೋಪ ಸ್ವಾಮಿ ನಡುವೆ ಪಮ್ಮಿ ಹೇಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾಳೆ ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ. ಬಾಬಾ ನಿರಾಲಾ ಹೇಗೆ ಜೈಲು ಸೇರ್ತಾರೆ ಅನ್ನೋದನ್ನು ಇದ್ರಲ್ಲಿ ತೋರಿಸಲಾಗಿದೆ. ಕಾಶಿಪುರದ ಬಾಬಾ ನಿರಾಲಾ ಪಾತ್ರದಲ್ಲಿ ಬಾಬಿ ಡಿಯೋಲ್ (Bobby Deol) ಕಾಣಿಸಿಕೊಂಡಿದ್ದಾರೆ. ಇದು ಅಸಾರಾಂ ಬಾಪು ಮತ್ತು ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಇನ್ಸಾನ್ ಅವರ ಜೀವನವನ್ನು ಆಧರಿಸಿದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರ್ತಿದೆ.
ಸತ್ಯದ ದರ್ಶನ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ? ಅಭಿಮಾನಿಗಳಿಂದ ಹರಿದುಬಂತು ಶ್ಲಾಘನೆಗಳ ಮಹಾಪೂರ
ಏನು ಕಥೆ ? : ಬಾಬಾ ನಿರಾಲಾ ಎಂಬ ಸ್ವಯಂ ಘೋಷಿತ ಧಾರ್ಮಿಕ ಗುರು, ಮೂಡನಂಭಿಕೆ ಹೆಸರಿನಲ್ಲಿ ಜನರನ್ನು ಮೋಸ ಮಾಡ್ತಾರೆ. ಕೆಳವರ್ಗದವರ ಮೇಲೆ ಪ್ರಭಾವ ಬೀರುವ ಮೂಲಕ ಅವರನ್ನು ನಿಯಂತ್ರಿಸುತ್ತಾರೆ. ಇದು ಧಾರ್ಮಿಕ ಸಂಘಟನೆಯಂತೆ ಕಂಡುಬಂದರೂ, ವಾಸ್ತವವಾಗಿ ಅಪರಾಧ ಚಟುವಟಿಕೆಗಳು ಆಶ್ರಮದೊಳಗೆ ನಡೆಯುತ್ತವೆ. ಬಾಬಾ ನಿರಾಲಾ ವಾಸ್ತವತೆ ಮತ್ತು ಒಳಗೆ ಮಾಡುವ ಕಾರ್ಯಾಚರಣೆಗಳು ಒಂದೊಂದೇ ಇದ್ರಲ್ಲಿ ಹೊರಗೆ ಬರಲಿವೆ. ನಟ ಬಾಬಿ ಡಿಯೋಲ್ ವೃತ್ತಿ ಜೀವನವನ್ನು ಬದಲಿಸಿದ ಕಥೆ ಇದು.
ಬಾಬಿ ಡಿಯೋಲ್ ಇದ್ರಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಸೀರಿಸ್ 2020ರಲ್ಲಿ ಸೀರಿಸ್ ಬಿಡುಗಡೆಯಾಗ್ತಿದ್ದಂತೆ ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ವರ್ಷ ಎರಡನೇ ಸರಣಿ ರಿಲೀಸ್ ಆಗಿತ್ತು. ಸೀಸನ್ 3, 2022ರಲ್ಲಿ ಬಂದಿತ್ತು. ಈಗ ಸೀಸನ್ ಮೂರರ ಭಾಗ 2 ಬಿಡುಗಡೆಯಾಗ್ತಿದೆ.
450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ
ಪ್ರಕಾಶ್ ಝಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಝಾ ಇದನ್ನು ನಿರ್ದೇಶಿಸಿದ್ದಾರೆ. ಕಾಶಿಪುರದ ಬಾಬಾ ನಿರಾಲಾ ಪಾತ್ರದಲ್ಲಿ ಬಾಬಿ ಡಿಯೋಲ್, ಪರ್ಮಿಂದರ್ ಪಾತ್ರದಲ್ಲಿ ಅದಿತಿ ಪೋಹಂಕರ್, ಭೂಪೇಂದ್ರ ಪಾತ್ರದಲ್ಲಿ ಚಂದನ್ ರಾಯ್ ಸನ್ಯಾಲ್, ಸತ್ವಿಂದರ್ ಪಾತ್ರದಲ್ಲಿ ತುಷಾರ್ ಪಾಂಡೆ, ಡಾ. ನತಾಶಾ ಕಟಾರಿಯಾ ಪಾತ್ರದಲ್ಲಿ ಅನುಪ್ರಿಯಾ ಗೋಯೆಂಕಾ, ಸೋನಿಯಾ ಪಾತ್ರದಲ್ಲಿ ಈಶಾ ಗುಪ್ತಾ, ಸೇರಿದಂತೆ ಅನೇಕ ಕಲಾವಿದರು ಈ ತಂಡದಲ್ಲಿದ್ದಾರೆ.

