ಈಜಿಪ್ಟ್‌ ಚಿತ್ರರಂಗದ ಯಂಗ್ ನಿರ್ದೇಶಕ ಶಾದೀ ಹಬಾಶ್‌(24)ಕಾರಾಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ. ಎರಡು ವರ್ಷಗಳ ಹಿಂದೆ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತಾಹ್‌ ಎಲ್‌ ಸಿಸಿ ಅವರ ಬಗ್ಗೆ ಮೂಸಿಕಲ್‌ ವಿಡಿಯೋ ಮಾಡುವ ಮೂಲಕ ಅಣಕಿಸಿದ್ದರು ಎಂಬ ಕಾರಣಕ್ಕೆ ಪೋಲೀಸರು  ಇವರನ್ನು ಬಂಧಿಸಿದ್ದರು . 

ಟೋರಾ ಕಾರಾಗೃಹದಲ್ಲಿ ಶಾದೀ ಹಬಾಷ್‌ ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ವಕೀಲ ಅಹ್ಮದ್‌ ಎಲ್‌ ಖ್ವಾಗಾ ಶನಿವಾರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಶಾದೀ ವಯಸ್ಸು ಕೇವಲ 24 ವರ್ಷವಾದ ಕಾರಣ ಯಾವ ಕಾಯಿಲೆಯಿಂದಲೂ  ಸತ್ತಿರಲು ಸಾಧ್ಯವಿಲ್ಲ ಎಂದು ಆಪ್ತರು ಹೇಳುತ್ತಾರೆ. 

ಬಾಲಿವುಡ್ ಖ್ಯಾತ‌ ನಟ ಇರ್ಫಾನ್‌ ಖಾನ್‌ ನಿಧನ!

ಕೊರೋನಾ ವೈರಸ್‌ನಿಂದ ಭದ್ರತೆ  ಹೆಚ್ಚಿಸಲಾಗಿತ್ತು, ಕಾರಾಗೃಹದಲ್ಲಿ ಅಪರಾಧಿಗಳಿಗೆ ಆರೋಗ್ಯ ತಪಾಸಣೆಯೂ ನಡೆದಿದ್ದು ಎಲ್ಲರೂ ಕೊರೋನಾ ಮುಕ್ತರಾಗಿದ್ದರು ಆದರೆ ಕಾರಾಗೃಹ ವ್ಯವಸ್ಥೆ ಚೆನ್ನಾಗಿಲ್ಲದ ಕಾರಣ ಈ ಹಿಂದೆ ಸಾಮೂಹಿಕ ಬಂಧನ ಮಾಡಬಾರದೆಂದು ಸರ್ಕಾರ ಆದೇಶಿಸಿತ್ತು. ಇದೇ ಕಾರಾಗೃಹದಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಕುಸಿದು ಮೃತಪಟ್ಟಿದ್ದರು. ಹೀಗಾಗಿ ಕಾರಾಗೃಹವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳದೇ ಇರುವುದೇ ಇದಕ್ಕೆ ಕಾರಣವೆಂದು ಅನೇಕರು ಹೇಳುತ್ತಾರೆ.

ಕಾಮಿಡಿ ನಿಲ್ಲಿಸಿದ Tom and Jerry ಸೀರೀಸ್ ನಿರ್ದೇಶಕ ಜೆನಿ ಡಿಚ್..!

2018ರಲ್ಲಿ ಶಾದೀ ನಿರ್ದೇಶನದ ಈ  ಮ್ಯೂಸಿಕಲ್‌ ವಿಡಿಯೋದಲ್ಲಿ  ಈಜಿಪ್ಟಿನ್‌ನಿಂದ ಸ್ವೀಡನ್‌ಗೆ ಗಡಿಪಾರಾಗಿರುವ ಸಂಗೀತ ನಿರ್ದೇಶಕ ರಾಮಿ ಎಸ್ಸಾಮ್‌ ಮ್ಯೂಸಿಕ್‌ ನೀಡಿದ್ದಾರೆ. ಗಡಿಪಾರಾದವರನ್ನು ಬಳಸಿಕೊಂಡಿರುವುದಕ್ಕೆ ಈ ವಿಡಿಯೋ ಬಹಳಷ್ಟು  ವಿವಾದ ಸೃಷ್ಟಿಸಿತ್ತು. ಈ ಹಾಡಿನಲ್ಲಿ ಸೇನೆ ಜನರಲ್‌ ಹಾಗೂ ದೇಶದ ಅಧ್ಯಕ್ಷ ಅಬ್ದುಲ್ ಫತಾಹ್‌ನನ್ನು ಅಣಕಿಸಿ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿತ್ತು.ಈ ವಿಡಿಯೋ ಯೂಟ್ಯೂಬ್‌ನಲ್ಲಿ ಸುಮಾರು 5ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಶಾದೀ ಜೊತೆ 8 ಮಂದಿಯನ್ನು ಬಂಧಿಸಲಾಗಿತ್ತು.

ಕುಂದಾಪುರದ ಇಂದಿರಾಗಾಂಧಿ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್ ನಾಯಕಿ ನಿಧನ

ವರ್ಷಕ್ಕೊಮ್ಮೆ ಕುಟುಂಬಸ್ಥರಿಗೆ ಪತ್ರ ಬರೆಯುತ್ತಿದ್ದ ಶಾದೀ 'ನನ್ನ ಪ್ರೀತಿಸುತ್ತಿದ್ದವರೇ ನನ್ನ ಬಗ್ಗೆ ಬರೆಯುವುದಕ್ಕೆ ಹೆದರುತ್ತಿದ್ದಾರೆ ಆದರೆ ಅವರಿಗೆ ತಿಳಿದಿಲ್ಲ ಅನಿಸುತ್ತದೆ ಬೆಂಬಲ್ಲವಿಲ್ಲದೆ ನನ್ನನ್ನು ಬಿಡುಗಡೆ ಮಾಡುವುದಿಲ್ಲವೆಂದು. ಒಬ್ಬಂಟಿಯಾಗಿ ನಿಂತಿದ್ದೇನೆ, ನಾನು ನಿಧಾನವಾಗಿ ಸಾಯುತ್ತಿದ್ದೇನೆ' ಎಂದು ಬರೆದಿದ್ದರು ಎನ್ನಲಾಗಿದೆ.